AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಯಾರಾ ಅಡ್ವಾಣಿ ಬಿಕಿನಿಗೆ ಸಿಬಿಎಫ್​ಸಿ ಕತ್ತರಿ, ‘ವಾರ್ 2’ಗೆ ಈಗ ಗ್ಲಾಮರ್ ಕೊರತೆ

Kiara Advani Bikini: ‘ವಾರ್ 2’ ಸಿನಿಮಾನಲ್ಲಿ ಹೃತಿಕ್ ರೋಷನ್ ಹಾಗೂ ಜೂ ಎನ್​ಟಿಆರ್ ಒಟ್ಟಿಗೆ ನಟಿಸಿದ್ದು, ಪರಸ್ಪರ ಎದುರಾಳಿಗಳಾಗಿ ನಟಿಸಿರುವುದು ವಿಶೇಷ. ಈ ಇಬ್ಬರು ನಟರು ತೆರೆ ಮೇಲೆ ಎದುರಾಗುವುದು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಅದರ ಜೊತೆಗೆ ಕಿಯಾರಾ ಬಿಕಿನಿ ದೃಶ್ಯ ನೋಡಲು ಸಹ ಅಭಿಮಾನಿಗಳು ಕಾತರರಾಗಿದ್ದರು. ಆದರೆ ಸಿಬಿಎಫ್​ಸಿ ಇದೀಗ ಭಾರಿ ಶಾಕ್ ನೀಡಿದೆ.

ಕಿಯಾರಾ ಅಡ್ವಾಣಿ ಬಿಕಿನಿಗೆ ಸಿಬಿಎಫ್​ಸಿ ಕತ್ತರಿ, ‘ವಾರ್ 2’ಗೆ ಈಗ ಗ್ಲಾಮರ್ ಕೊರತೆ
Kiara Advani
ಮಂಜುನಾಥ ಸಿ.
|

Updated on: Aug 10, 2025 | 6:00 PM

Share

ಬಾಲಿವುಡ್​ನ (Bollywood) ಸ್ಪೈ ಸಿನಿಮಾಗಳದ್ದು ಒಂದು ಸಿದ್ಧ ಸೂತ್ರವಿದೆ. ಭರ್ಜರಿ ಆಕ್ಷನ್, ದೇಶಭಕ್ತಿ ತುಂಬಿದ ಕೆಲ ಸಂಭಾಷಣೆಗಳು, ಪಾಕಿಸ್ತಾನದ ವಿಲನ್ ವಿರುದ್ಧ ನಾಯಕನ ಹೋರಾಟ. ಆಕಾಶದಲ್ಲೊಂದು ಫೈಟ್ ಅಥವಾ ಸಮುದ್ರದಲ್ಲೊಂದು ಚೇಸ್, ಭಿನ್ನ ಭಿನ್ನವಾದ ಆಯುಧಗಳು. ಇವುಗಳ ಜೊತೆಗೆ ಬಿಕಿನಿ. ಹೌದು, ಗ್ಲಾಮರ್ ಇಲ್ಲದ ಬಾಲಿವುಡ್ ಸ್ಪೈ ಸಿನಿಮಾ ಇಲ್ಲ. ಅದರಲ್ಲೂ ಸ್ಪೈ ಸಿನಿಮಾಗಳಲ್ಲಿ ನಾಯಕಿಯರು ವಿನಾಕಾರಣ ಬಿಕಿನಿ ಧರಿಸುತ್ತಾರೆ. ಇದೀಗ ‘ವಾರ್ 2’ ಸಿನಿಮಾದಲ್ಲಿಯೂ ಕಿಯಾರಾ ಅಡ್ವಾಣಿ ಬಿಕಿನಿಯಲ್ಲಿ ತಮ್ಮ ಮೈಮಾಟ ಪ್ರದರ್ಶನಕ್ಕೆ ಇಟ್ಟಿದ್ದರು. ಆದರೆ ಸಿಬಿಎಫ್​ಸಿ ಅದಕ್ಕೆ ಕತ್ತರಿ ಹಾಕಿದೆ.

‘ವಾರ್ 2’ ಸಿನಿಮಾನಲ್ಲಿ ಹೃತಿಕ್ ರೋಷನ್ ಮತ್ತು ಜೂ ಎನ್​ಟಿಆರ್ ನಟಿಸಿದ್ದು, ಬಾಲಿವುಡ್ ಸ್ಪೈ ಸಿನಿಮಾದ ಸಿದ್ಧ ಸೂತ್ರದ ಎಲ್ಲ ಅಂಶಗಳು ಈ ಸಿನಿಮಾನಲ್ಲಿವೆ. ಭರ್ಜರಿ ಆಕ್ಷನ್, ದೇಶಪ್ರೇಮದ ಸಂಭಾಷಣೆ, ನಾಯಕರ ಫ್ಲೆಕ್ಸಿಬಲ್ ಡ್ಯಾನ್ಸು, ಬಿಕಿನಿ ಧರಿಸಿದ ನಾಯಕಿ. ಆದರೆ ಈಗ ಸಿಬಿಎಫ್​ಸಿ ಬಿಕಿನಿ ದೃಶ್ಯಗಳಿಗೆ ಕತ್ತರಿ ಹಾಕುವ ಮೂಲಕ ಸಿನಿಮಾದ ಗ್ಲಾಮರ್​ಗೆ ತುಸು ಹೊಡೆತ ಬಿದ್ದಂತಾಗಿದೆ.

ಕಿಯಾರಾ ಅಡ್ವಾಣಿ ಬಿಕಿನಿ ಧರಿಸಿರುವ ಬರೋಬ್ಬರಿ 9 ಸೆಕೆಂಡ್​ನ ದೃಶ್ಯಕ್ಕೆ ಸಿಬಿಎಫ್​ಸಿ ಕತ್ತರಿ ಹಾಕಿದೆಯಂತೆ. ಕಿಯಾರಾ ಬಿಕಿನಿ ಧರಿಸಿ ಪಾಲ್ಗೊಂಡಿರುವ ಹಾಡಿನಲ್ಲಿ ಕೆಲ ಸಾಲುಗಳನ್ನು ಸಹ ಮ್ಯೂಟ್ ಮಾಡಲಾಗಿದೆ. ಅಶ್ಲೀಲ ಹೋಲಿಕೆಗಳನ್ನು ಮಾಡಿರುವ ಕಾರಣ ಸಿಬಿಎಫ್​ಸಿ ಈ ದೃಶ್ಯಗಳಿಗೆ ಕತ್ತರಿ ಹಾಕಿದೆ. ಇದರ ಜೊತೆಗೆ ಸಿನಿಮಾನಲ್ಲಿ ಒಂದು ಅಶ್ಲೀಲ ಸಂಭಾಷಣೆಯನ್ನು ತೆಗೆಯಲಾಗಿದ್ದು ಆ ಪದದ ಪದಲಿಗೆ ಬೇರೆ ಪದವನ್ನು ಬಳಸಲಾಗಿದೆ. ಜೊತೆಗೆ ಪಾತ್ರವೊಂದು ಮಾಡುವ ಅಶ್ಲೀಲ ಸಂಜ್ಞೆಯ ದೃಶ್ಯಕ್ಕೂ ಕತ್ತರಿ ಹಾಕಲಾಗಿದೆ.

ಇದನ್ನೂ ಓದಿ:‘ವಾರ್ 2’ Vs ‘ಕೂಲಿ’: ಬುಕ್​ ಮೈ ಶೋನಲ್ಲಿ ಯಾರಿಗೆ ಹೆಚ್ಚಿದೆ ಬೆಂಬಲ?

ಸಿನಿಮಾನಲ್ಲಿ ಗ್ಲಾಮರ್ ದೃಶ್ಯಗಳನ್ನು 50% ಕಡಿಮೆ ಮಾಡುವಂತೆ ಸಿಬಿಎಫ್​ಸಿ ಸಿನಿಮಾ ತಂಡಕ್ಕೆ ಹೇಳಿದೆ. ಅಂದರೆ 9 ಸೆಕೆಂಡುಗಳ ಬಿಕಿನಿ ದೃಶ್ಯಕ್ಕೆ ಚಿತ್ರತಂಡ ಕತ್ತರಿ ಹಾಕುವಂತೆ ಸೂಚಿಸಲಾಗಿದೆ. ಕಿಯಾರಾ ನಟಿಸಿರುವ ‘ಅವಾನ್-ಜವಾನ್’ ಹಾಡಿನ ದೃಶ್ಯಗಳ ಬಗ್ಗೆ ಸೆನ್ಸಾರ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ ಎನ್ನಲಾಗಿದೆ. ಆದರೆ ಸಿನಿಮಾದ ಆಕ್ಷನ್ ದೃಶ್ಯಗಳಲ್ಲಿ ಯಾವುದೆ ಬದಲಾವಣೆಗೆ ಸೂಚಿಸಿಲ್ಲ.

ಸೆನ್ಸಾರ್ ಮಂಡಳಿ ಸೂಚಿಸಿರುವ ಎಲ್ಲ ಬದಲಾವಣೆಗಳನ್ನು ಚಿತ್ರತಂಡ ಈಗಾಗಲೇ ಮಾಡಿದೆ. ಅದರ ಬಳಿಕ ಸಿನಿಮಾಕ್ಕೆ ಯು/ಎ ಪ್ರಮಾಣ ಪತ್ರ ನೀಡಲಾಗಿದ್ದು, 16ಕ್ಕೂ ಹೆಚ್ಚು ವಯಸ್ಸಿನ ಮಕ್ಕಳು ಪೋಷಕರ ನಿಗಾವಣೆಯಲ್ಲಿ ಸಿನಿಮಾ ವೀಕ್ಷಿಸಬಹುದಾಗಿದೆ. ಸಿನಿಮಾದ ಒಟ್ಟು ಕಾಲಾವಧಿ 179 ನಿಮಿಷಗಳಿವೆ. ಸಿನಿಮಾ ಆಗಸ್ಟ್ 14 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!