ಈಗ ಸಿಕ್ಕಾಪಟೆ ವೈರಲ್ ಆಗ್ತಿದೆ 1990ರಲ್ಲಿ ನಡೆದ ಮದುವೆಯ ರಿಸಪ್ಷನ್​ ಆಮಂತ್ರಣ ಪತ್ರಿಕೆ; ಯಾಕಿರಬಹುದು ನೋಡಿ !

| Updated By: Lakshmi Hegde

Updated on: Jul 06, 2021 | 3:48 PM

ಅಂದಹಾಗೆ ಇದು 1990ರ ದಶಕದಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ವಿವಾಹವೊಂದರ ಆಮಂತ್ರಣ ಪತ್ರಿಕೆಯಾಗಿದ್ದು, ಇದನ್ನು ನೋಡಿದ ಟ್ವೀಟಿಗರು ವಿಧವಿಧದ ಕಾಮೆಂಟ್​ಗಳನ್ನು ಹಾಕಿದ್ದಾರೆ.

ಈಗ ಸಿಕ್ಕಾಪಟೆ ವೈರಲ್ ಆಗ್ತಿದೆ 1990ರಲ್ಲಿ ನಡೆದ ಮದುವೆಯ ರಿಸಪ್ಷನ್​ ಆಮಂತ್ರಣ ಪತ್ರಿಕೆ; ಯಾಕಿರಬಹುದು ನೋಡಿ !
Invitation Card
Follow us on

ಸಾಮಾನ್ಯವಾಗಿ ಮದುವೆಯಲ್ಲಿ ಎರಡು ವಿಚಾರಗಳಿಗೆ ಪ್ರಾಮುಖ್ಯತೆ ಇದೆ. ಒಂದು ಹೊಸದಾಗಿ ಮದುವೆಯಾದ ಜೋಡಿ ಮತ್ತೊಂದು ಅಲ್ಲಿದ್ದ ಊಟ. ಮೊದಲಿನಿಂದಲೂ ಮದುವೆಗೆ ಹೋದ ಜನರ ಗಮನ ಸೆಳೆಯುವುದು ಇದೆರಡೇ ಆಗಿರುತ್ತದೆ. ಒಂದೊಮ್ಮೆ ಜೋಡಿ ಚೆನ್ನಾಗಿಲ್ಲದಿದ್ದರೂ ಊಟವಂತೂ ಚೆನ್ನಾಗಿರಲೇಬೇಕು. ಮದುವೆ ಅಥವಾ ರಿಸಪ್ಷನ್​ಗೆ ಎಷ್ಟು ರೀತಿಯ ಸಿಹಿತಿಂಡಗಳನ್ನು ಮಾಡಿದ್ದರು? ಊಟಕ್ಕೆ ಏನೇನಿತ್ತು? ಎಷ್ಟು ರುಚಿಯಾಗಿತ್ತು ಎಂಬುದೆಲ್ಲ ಪ್ರಮುಖ ಚರ್ಚೆಯ ವಿಷಯವಾಗುತ್ತದೆ. ಒಂದೇ ಒಂದು ಪದಾರ್ಥ, ತಿನಿಸು ಚೆನ್ನಾಗಿ ಇಲ್ಲದಿದ್ದರೂ ಅದೂ ಹೈಲೈಟ್​ ಆಗುತ್ತದೆ.

ಇದೀಗ 90ರ ದಶಕದಲ್ಲಿ ನಡೆದ ಮದುವೆ ರಿಸಪ್ಷನ್​​ನ ಆಮಂತ್ರಣ ಪತ್ರಿಕೆಯ ಫೋಟೋ ಸಿಕ್ಕಾಪಟೆ ವೈರಲ್​ ಆಗಿದೆ. ಅದೇನಪ್ಪಾ ಅಂಥ ವಿಶೇಷ? ಎಂದು ಕೇಳಿದರೆ ಅದರಲ್ಲಿರುವ ಮೆನುಗಳು. ಅದು ನಿಮಗೆ ಹೋಟೆಲ್​ನಲ್ಲಿ ಕೊಡುವ ಮೆನು ಕಾರ್ಡ್​ನ್ನು ನೆನಪಿಸದೆ ಇದ್ದರೆ ಹೇಳಿ..!

Sad Mandalorian ಎಂಬ ಟ್ವಿಟರ್ ಬಳಕೆದಾರರು ಈ ಆಮಂತ್ರಣ ಪತ್ರಿಕೆಯನ್ನು ಪೋಸ್ಟ್ ಮಾಡಿದ್ದಾರೆ. ಇದು ನನ್ನ ತಂದೆ-ತಾಯಿ ಮದುವೆಯ ರಿಸಪ್ಷನ್​ನ ಇನ್ವಿಟೇಶನ್​ ಕಾರ್ಡ್​. ನನ್ನ ಕಸಿನ್​​ಗೆ ಅವರ ಮನೆಯಲ್ಲಿ ಸಿಕ್ಕಿದ್ದು ಎಂದು ಬರೆದುಕೊಂಡಿದ್ದಾರೆ. ಅದರಲ್ಲಿ ರಿಸಪ್ಷನ್​ಗೆ ತಯಾರಿಸಲಾದ ತಿಂಡಿಗಳ ಉದ್ದವಾದ ಪಟ್ಟಿಯೇ ಇದೆ. ಅಷ್ಟೇ ಅಲ್ಲ, ವೆಜ್​ ಮತ್ತು ನಾನ್​ವೆಜ್​ ಎಂದು ವಿಂಗಡಿಸಿ ಬರೆಯಲಾಗಿದೆ. 17 ಬಗೆಯ ತಿನಿಸುಗಳಿದ್ದವು. ಅದರಲ್ಲಿ ಏನೇನಿತ್ತು ಎಂಬುದನ್ನು ನೀವೇ ಒಮ್ಮೆ ಓದಿಕೊಂಡುಬಿಡಿ.

ಅಂದಹಾಗೆ ಇದು 1990ರ ದಶಕದಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ವಿವಾಹವೊಂದರ ಆಮಂತ್ರಣ ಪತ್ರಿಕೆಯಾಗಿದ್ದು, ಇದನ್ನು ನೋಡಿದ ಟ್ವೀಟಿಗರು ವಿಧವಿಧದ ಕಾಮೆಂಟ್​ಗಳನ್ನು ಹಾಕಿದ್ದಾರೆ. ಇದರಲ್ಲಿ ಹಾಕಲಾಗಿರುವ ಒಂದೊಂದು ತಿನಿಸುಗಳೂ ಬಾಯಲ್ಲಿ ನೀರೂರಿಸುತ್ತವೆ ಎಂದು ಕೆಲವರು ಬರೆದಿದ್ದಾರೆ. ಅಬ್ಬಾ ಎಂದು ಉದ್ಘಾರವನ್ನೂ ಕೆಲವರು ತೆಗೆದಿದ್ದಾರೆ. ಇಲ್ಲಿದೆ ನೋಡಿ ಇನ್ವಿಟೇಶನ್​ ಕಾರ್ಡ್​ ಫೋಟೋ..

ಇದನ್ನೂ ಓದಿ: ಅಪಘಾತಕ್ಕೀಡಾದ ಕಾರಲ್ಲಿ ನನ್ನ ಪುತ್ರ ಚಿದಾನಂದ ಇರಲಿಲ್ಲ: ಡಿಸಿಎಂ ಲಕ್ಷ್ಮಣ ಸವದಿ
Photos of wedding menu card is goes viral in Social Media