ದೆಹಲಿ: ಡಿಸೆಂಬರ್ 1ರಿಂದ ಭಾರತೀಯ ರೈಲ್ವೆ ಇಲಾಖೆ ದೇಶದಲ್ಲಿ ಮತ್ತೊಮ್ಮೆ ರೈಲು ಸಂಚಾರ ನಿಲ್ಲಿಸಲಿದೆ. ಜೊತೆಗೆ, ಬಹುತೇಕ ಕೊವಿಡ್ ವಿಶೇಷ ಟ್ರೇನ್ಗಳೂ ಕೂಡ ಸಂಚಾರ ಮಾಡುವುದಿಲ್ಲ ಎಂಬ ಒಂದು ಮೆಸೇಜ್ ಇತ್ತೀಚೆಗೆ WhatsAppನಲ್ಲಿ ಹರಿದಾಡುತ್ತಿದೆ.
ಅದನ್ನು ನೋಡಿದ ಜನರು ಹಾಗೂ ಡಿಸೆಂಬರ್ನಲ್ಲಿ ಪ್ರಯಾಣಿಸಲು ಮುಂಗಡವಾಗಿ ಟಿಕೆಟ್ ಬುಕ್ ಮಾಡಿದ್ದವರು ಗಾಬರಿಯಾಗಿದ್ದಾರೆ ಎಂದು ಹೇಳಲಾಗಿದೆ. ಏನಿದು ಏಕಾಏಕಿ ನಿರ್ಧಾರ ಎಂಬರ್ಥದ ಚರ್ಚೆಯನ್ನು ಸೋಷಿಯಲ್ ಮೀಡಿಯಾಗಳಲ್ಲಿ ನಡೆಸುತ್ತಿದ್ದಾರೆ. ಹಾಗೊಮ್ಮೆ ನಿಮಗೂ ಈ ಮೆಸೇಜ್ ಬಂದಿದ್ದರೆ ಇದನ್ನು ಖಂಡಿತ ನಂಬಬೇಡಿ. ಯಾಕಂದ್ರೆ, ಇದೊಂದು ಪಕ್ಕಾ ಸುಳ್ಳು ಸುದ್ದಿ.
ಹೌದು, ರೈಲು ಸಂಚಾರ ಸ್ಥಗಿತಗೊಳ್ಳುವ ಬಗ್ಗೆ PIB (ಪ್ರೆಸ್ ಇನ್ಫರ್ಮೇಶನ್ ಬ್ಯೂರೋ) ಫ್ಯಾಕ್ಟ್ಚೆಕ್ ನಡೆಸಿದ್ದು ಅದರ ಅಸಲಿಯತ್ತನ್ನು ತನ್ನ ಟ್ವಿಟರ್ನಲ್ಲಿ ಪೋಸ್ಟ್ ಮಾಡಿಕೊಂಡಿದೆ. ಕೊವಿಡ್ ಹಿನ್ನೆಲೆಯಲ್ಲಿ ಶುರುವಾದ ವಿಶೇಷ ರೈಲುಗಳು ಸೇರಿ ಯಾವ ರೈಲುಗಳ ಸಂಚಾರವೂ ಸ್ಥಗಿತಗೊಳ್ಳುವುದಿಲ್ಲ. ಭಾರತೀಯ ರೈಲ್ವೆ ಇಲಾಖೆ ಅಂಥ ನಿರ್ಧಾರಗಳನ್ನು ಕೈಗೊಂಡಿಲ್ಲ. ಯಾರೂ ಹೆದರುವ ಅಥವಾ ಗಾಬರಿಯಾಗುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಹಾಗೇ, ಸುಳ್ಳು WhatsApp ಮೆಸೇಜ್ನ ಸ್ಕ್ರೀನ್ಶಾಟ್ ಕೂಡ ಶೇರ್ ಮಾಡಿಕೊಂಡಿದೆ.
ಕೊವಿಡ್ ಬಿಕ್ಕಟ್ಟು ಶುರುವಾದಾಗಿನಿಂದ ಒಂದಲ್ಲ ಒಂದು ಸುಳ್ಳುಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇವೆ. ಈ ಹಿಂದೆಯೂ ಹಲವು ವದಂತಿಗಳು ಹರಿದಾಡಿದ್ದು ಜನರು ಗಲಿಬಿಲಿಗೊಳ್ಳುವಂಥ ಘಟನೆಗಳು ಸಹ ನಡೆದಿತ್ತು. 2019ರ ಡಿಸೆಂಬರ್ನಲ್ಲಿ ಫ್ಯಾಕ್ಟ್ಚೆಕ್ ವಿಭಾಗವನ್ನು ಶುರು ಮಾಡಿದ PIB ಕೊವಿಡ್, ಲಾಕ್ಡೌನ್, ವಾಹನಗಳ ಸಂಚಾರ ಸೇರಿ ಅನೇಕ ವಿಚಾರಗಳಲ್ಲಿ ಹರಡಿದ್ದ ಸುಳ್ಳುಸುದ್ದಿಗಳ ಬಗ್ಗೆ ಫ್ಯಾಕ್ಟ್ಚೆಕ್ ನಡೆಸಿ, ಜನರಿಗೆ ಸತ್ಯಾಂಶ ತಿಳಿಸುವ ಕೆಲಸದಲ್ಲಿ ತೊಡಗಿದೆ.
It is claimed in a #WhatsApp forward that all trains including the #COVID19 special trains will stop operating after 1st December. #PIBFactCheck: This claim is #Fake. @RailMinIndia has taken no such decision on halting of train services after 1st December. pic.twitter.com/3ZeGyCEaOw
— PIB Fact Check (@PIBFactCheck) November 23, 2020
Published On - 7:10 pm, Mon, 23 November 20