AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಂದ್ರ ಸರ್ಕಾರದಿಂದ ಹೊಸ ಮೈಲಿಗಲ್ಲು: ವರ್ಷಗಳ ನಷ್ಟದ ಬಳಿಕ 2,701 ಕೋಟಿ ರೂ. ನಿವ್ವಳ ಲಾಭಗಳಿಸಿದ ಡಿಸ್ಕಾಂಗಳು!

ವರ್ಷಗಳ ನಷ್ಟದ ಬಳಿಕ ದೇಶದ ವಿದ್ಯುತ್ ವಿತರಣಾ ಕಂಪನಿಗಳು 2024-25ರಲ್ಲಿ 2,701 ಕೋಟಿ ರೂ. ನಿವ್ವಳ ಲಾಭ ಗಳಿಸಿರುವುದಾಗಿ ಪಿಐಬಿ ತನ್ನ ಎಕ್ಸ್ ಖಾತೆಯಲ್ಲಿ ಪ್ರಕಟಿಸಿದೆ. ಕೇಂದ್ರ ಸರ್ಕಾರದ ಆಡಳಿತಾತ್ಮಕ ಸುಧಾರಣೆಗಳು, ಸ್ಮಾರ್ಟ್ ಮೀಟರಿಂಗ್ ಹಾಗೂ ತಾಂತ್ರಿಕ ನಷ್ಟದ ಇಳಿಕೆಯಿಂದಾಗಿ ವಿದ್ಯುತ್ ಕ್ಷೇತ್ರವು ಐತಿಹಾಸಿಕ ಚೇತರಿಕೆ ಕಂಡಿದೆ.

ಕೇಂದ್ರ ಸರ್ಕಾರದಿಂದ ಹೊಸ ಮೈಲಿಗಲ್ಲು: ವರ್ಷಗಳ ನಷ್ಟದ ಬಳಿಕ 2,701 ಕೋಟಿ ರೂ. ನಿವ್ವಳ ಲಾಭಗಳಿಸಿದ ಡಿಸ್ಕಾಂಗಳು!
ವರ್ಷಗಳ ನಷ್ಟದ ಬಳಿಕ 2,701 ಕೋಟಿ ರೂ. ನಿವ್ವಳ ಲಾಭಗಳಿಸಿದ ದಿಸ್ಕಾಂಗಳು!
ಭಾವನಾ ಹೆಗಡೆ
|

Updated on:Sep 12, 2026 | 1:00 PM

Share

ಮುಖ್ಯಾಂಶಗಳು

  • ಪಿಐಬಿ ಎಕ್ಸ್ ಖಾತೆ ಮಾಹಿತಿ: 2024-25ರಲ್ಲಿ 2,701 ಕೋಟಿ ರೂ. ಲಾಭಗಳಿಸಿದ ವಿದ್ಯುತ್ ಡಿಸ್ಕಾಂಗಳು.
  • ಡಿಸ್ಕಾಂಗಳ ತಾಂತ್ರಿಕ ನಷ್ಟ ಶೇ 22.62 ರಿಂದ ಶೇ 15.04 ಕ್ಕೆ ಇಳಿಕೆ.
  • ವಿದ್ಯುತ್ ಉತ್ಪಾದಕರಿಗೆ ಪಾವತಿಸಬೇಕಿದ್ದ ಬಾಕಿ ಮೊತ್ತದಲ್ಲಿ ಶೇ 96 ರಷ್ಟು ಬೃಹತ್ ಇಳಿಕೆ.

ನವದೆಹಲಿ, ಸೆಪ್ಟೆಂಬರ್ 12: ದೇಶದ ವಿದ್ಯುತ್ ವಿತರಣಾ ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆ ಗಾಳಿ ಬೀಸುತ್ತಿದ್ದು, ಭಾರತೀಯ ವಿದ್ಯುತ್ ವಿತರಣಾ ಕಂಪನಿಗಳು (ಡಿಸ್ಕಾಂಗಳು) ನಷ್ಟದ ದಿನಗಳಿಗೆ ವಿದಾಯ ಹೇಳಿ ಭರ್ಜರಿ ಚೇತರಿಕೆ ಕಂಡಿವೆ. ಈ ಕುರಿತು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ತನ್ನ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, 2024-25ರ ಆರ್ಥಿಕ ವರ್ಷದಲ್ಲಿ ವಿದ್ಯುತ್ ಡಿಸ್ಕಾಂಗಳು ಒಟ್ಟಾರೆಯಾಗಿ 2,701 ಕೋಟಿ ರೂ. ನಿವ್ವಳ ಲಾಭ (PAT) ದಾಖಲಿಸಿ ಹೊಸ ದಾಖಲೆ ಬರೆದಿವೆ. 2023-24ರಲ್ಲಿ 25,553 ಕೋಟಿ ರೂ. ಹಾಗೂ 2013-14ರಲ್ಲಿ ಬರೋಬ್ಬರಿ 67,962 ಕೋಟಿ ರೂ. ನಷ್ಟದಲ್ಲಿದ್ದ ಈ ವಲಯಕ್ಕೆ ಇದು ಅತ್ಯಂತ ಮಹತ್ವದ ಮೈಲಿಗಲ್ಲಾಗಿದೆ ಎಂದು ಕೇಂದ್ರ ವಿದ್ಯುತ್ ಸಚಿವ ಮನೋಹರ್ ಲಾಲ್ ಹರ್ಷ ವ್ಯಕ್ತಪಡಿಸಿದ್ದಾರೆ.

ಸುಧಾರಣಾ ಕ್ರಮಗಳಿಂದ ಚೇತರಿಸಿಕೊಂಡ ವಿದ್ಯುತ್ ವಿತರಣಾ ಸಂಸ್ಥೆಗಳು

ಪಿಐಬಿ ಹಂಚಿಕೊಂಡಿರುವ ಮಾಹಿತಿಯಂತೆ, ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಹಾಗೂ ಕೇಂದ್ರ ವಿದ್ಯುತ್ ಸಚಿವ ಮನೋಹರ್ ಲಾಲ್ ಅವರ ನೇತೃತ್ವದಲ್ಲಿ ಕೈಗೊಂಡ ಕ್ರಾಂತಿಕಾರಿ ಸುಧಾರಣೆಗಳು ಈ ಅಭೂತಪೂರ್ವ ಯಶಸ್ಸಿಗೆ ಕಾರಣವಾಗಿವೆ. ರೀವ್ಯಾಂಪ್ಡ್ ಡಿಸ್ಟ್ರಿಬ್ಯೂಷನ್ ಸೆಕ್ಟರ್ ಸ್ಕೀಮ್ (RDSS), ಸ್ಮಾರ್ಟ್ ಮೀಟರಿಂಗ್ ತಂತ್ರಜ್ಞಾನ ಹಾಗೂ ಪಾರದರ್ಶಕ ವಿದ್ಯುತ್ ದರ ನೀತಿಗಳು ಡಿಸ್ಕಾಂಗಳ ಆರ್ಥಿಕ ಶಿಸ್ತನ್ನು ಬಲಪಡಿಸಿವೆ.

ಬಾಕಿ ಪಾವತಿಯಲ್ಲಿ ಬೃಹತ್ ಇಳಿಕೆ

ಕೇಂದ್ರದ ನಿಯಮಿತ ನಿಗಾವಹಿಸುವಿಕೆಯಿಂದಾಗಿ, 2013-14ರಲ್ಲಿ ಶೇ 22.62 ರಷ್ಟಿದ್ದ ತಾಂತ್ರಿಕ ಹಾಗೂ ವಾಣಿಜ್ಯ ನಷ್ಟವು 2024-25ರ ವೇಳೆಗೆ ಶೇ 15.04 ಕ್ಕೆ ಕುಸಿದಿದೆ. ಅಷ್ಟೇ ಅಲ್ಲದೆ, ವಿದ್ಯುತ್ ಉತ್ಪಾದನಾ ಕಂಪನಿಗಳಿಗೆ ಪಾವತಿಸಬೇಕಿದ್ದ ಬಾಕಿ ಹಣದಲ್ಲಿ ಶೇ 96 ರಷ್ಟು ಇಳಿಕೆಯಾಗಿದ್ದು, 2022ರಲ್ಲಿದ್ದ 1,39,947 ಕೋಟಿ ರೂ. ಬಾಕಿ ಮೊತ್ತವು 2026ರ ಜನವರಿ ವೇಳೆಗೆ ಕೇವಲ 4,927 ಕೋಟಿ ರೂ.ಗೆ ತಲುಪಿದೆ. ಈ ಮೂಲಕ ದೇಶದ ವಿದ್ಯುತ್ ವಲಯವು ‘ವಿಕಸಿತ ಭಾರತ’ದತ್ತ ಯಶಸ್ವಿ ಹೆಜ್ಜೆ ಇಟ್ಟಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:52 pm, Sat, 12 September 26

Follow Us