Tamil Nadu Election 2021: ಜಯಲಲಿತಾ-ಎಂಜಿಆರ್​ ದೇವಸ್ಥಾನದಲ್ಲಿ ತೋರಣದಂತೆ ರಾರಾಜಿಸುತ್ತಿವೆ ಪ್ರಧಾನಿ ಮೋದಿ, ಮತ್ತಿತರ ಬಿಜೆಪಿ ನಾಯಕರ ಫೋಟೋಗಳು!

|

Updated on: Mar 23, 2021 | 6:34 PM

ತಮಿಳುನಾಡಿನಾದ್ಯಂತ ಅಮ್ಮ ಎಂದೇ ಖ್ಯಾತರಾಗಿದ್ದ ಜಯಲಲಿತಾ 2016ರ ಡಿಸೆಂಬರ್​ 5ರಂದು ಮೃತಪಟ್ಟಿದ್ದಾರೆ. ಹಾಗೇ ಎಂಜಿಆರ್ ಅವರು 1987ರ ಡಿಸೆಂಬರ್​ 24ರಂದು ನಿಧನರಾಗಿದ್ದಾರೆ. ಇವರಿಬ್ಬರ ಸ್ಮರಣಾರ್ಥ ದೇಗುಲ ನಿರ್ಮಾಣ ಮಾಡುವಾಗ ಕುಮಾರ್ ಅವರೇ ಮೇಲುಸ್ತುವಾರಿ ವಹಿಸಿದ್ದರು.

Tamil Nadu Election 2021: ಜಯಲಲಿತಾ-ಎಂಜಿಆರ್​ ದೇವಸ್ಥಾನದಲ್ಲಿ ತೋರಣದಂತೆ ರಾರಾಜಿಸುತ್ತಿವೆ ಪ್ರಧಾನಿ ಮೋದಿ, ಮತ್ತಿತರ ಬಿಜೆಪಿ ನಾಯಕರ ಫೋಟೋಗಳು!
ಜಯಲಲಿತಾ-ಎಂಜಿಆರ್​ ದೇವಸ್ಥಾನದಲ್ಲಿ ಬಿಜೆಪಿ ನಾಯಕರ ಫೋಟೋಗಳು
Follow us on

ಮಧುರೈ: ತಮಿಳುನಾಡಿನ ತಿರುಮಂಗಲಂ ಬಳಿಯ ಟಿ ಕಲ್ಲುಪಟ್ಟಿ ಎಂಬಲ್ಲಿ ಜೆ.ಜಯಲಲಿತಾ ಹಾಗೂ ಎಂ.ಜಿ.ರಾಮಚಂದ್ರನ್​ ಅವರ ದೇವಸ್ಥಾನವನ್ನು ಕಟ್ಟಲಾಗಿದ್ದು, ಇತ್ತೀಚೆಗಷ್ಟೇ ಅದನ್ನು ಎಐಎಡಿಎಂಕೆ ಸರ್ಕಾರ ಉದ್ಘಾಟನೆಯನ್ನೂ ಮಾಡಿದೆ. ಆದರೆ ತಮಿಳುನಾಡು ವಿಧಾನಸಭೆ ಚುನಾವಣೆ ಇನ್ನೇನು ಕೆಲವೇ ದಿನಗಳು ಇರುವಾಗ ಇಲ್ಲೊಂದು ವಿಚಿತ್ರ ನಡೆದಿದೆ. ಜಯಲಲಿತಾ ಮತ್ತು ಎಂ.ಜಿ.ರಾಮಚಂದ್ರನ್ ಅವರ ಸ್ಮರಣಾರ್ಥ ನಿರ್ಮಿಸಲಾದ ದೇವಸ್ಥಾನದಲ್ಲಿ ಈಗ ಪ್ರಧಾನಿ ನರೇಂದ್ರ ಮೋದಿ, ಅಮಿತ್​ ಷಾ ಸೇರಿ ಹಲವು ಬಿಜೆಪಿ ನಾಯಕರ ಫೋಟೋಗಳು ರಾರಾಜಿಸುತ್ತಿವೆ. ದೇವಸ್ಥಾನದ ಮೇಲ್ಭಾಗದಲ್ಲಿ ತೋರಣದಂತೆ ಫೋಟೋಗಳನ್ನು ಕಟ್ಟಲಾಗಿದೆ.

ಏಪ್ರಿಲ್​ 6ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಎಐಎಡಿಎಂಕೆ ಜತೆ ಮೈತ್ರಿ ಮಾಡಿಕೊಂಡು ಸ್ಪರ್ಧೆಗೆ ಇಳಿದಿದ್ದು ಗೊತ್ತೇ ಇದೆ. ಎರಡೂ ಪಕ್ಷಗಳ ಅಭ್ಯರ್ಥಿಗಳು ಜತೆಯಾಗಿ ಚುನಾವಣಾ ಪ್ರಚಾರದಲ್ಲೂ ತೊಡಗಿದ್ದಾರೆ. ಆದರೆ ಈಗ ತಮಿಳುನಾಡಿನ ಮಹಾನ್​ ನಾಯಕರೆನ್ನಿಸಿಕೊಂಡ ಜಯಲಲಿತಾ ಮತ್ತು ಎಂಜಿಆರ್​ ಗಾಗಿ ಕಟ್ಟಿಸಿರುವ ದೇವಾಲಯದಲ್ಲಿ ಪ್ರಧಾನಿ ಮೋದಿ ಮತ್ತಿತರ ಬಿಜೆಪಿ ನಾಯಕರ ಫೋಟೋ ಇದ್ದಿದ್ದು, ಅನೇಕರಲ್ಲಿ ಅಚ್ಚರಿ ಮೂಡಿಸಿದೆ.

ಇನ್ನು ದೇವಸ್ಥಾನದಲ್ಲಿ ನರೇಂದ್ರ ಮೋದಿಯವರಾದಿಯಾಗಿ ಹಲವರ ಫೋಟೋವನ್ನು ಇಟ್ಟ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡಿನ ಕಂದಾಯ ಸಚಿವ ಆರ್​.ಬಿ.ಉದಯ್​ಕುಮಾರ್​, ಜಯಲಲಿತಾ ಅಮ್ಮನವರ ತ್ಯಾಗ, ಧೈರ್ಯವನ್ನು ಇಡೀ ಜಗತ್ತಿಗೇ ಸಾರುವ ಸಲುವಾಗಿ ದೇವಾಲಯ ನಿರ್ಮಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಈ ದೇಶಕ್ಕೆ ಹಲವು ಅಭಿವೃದ್ಧಿ ಯೋಜನೆಗಳನ್ನು ಕೊಟ್ಟಿದೆ. ಜೆಪಿ ನಡ್ಡಾ ಆರೋಗ್ಯ ಸಚಿವರಾಗಿದ್ದಾಗಲೇ ಮಧುರೈನಲ್ಲಿ ಏಮ್ಸ್​ ಆಸ್ಪತ್ರೆ ಕಟ್ಟಲಾಯಿತು. ಇನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​​ ಅವರು ಕೂಡ ಮಧುರೈನ್ನು ತುಂಬ ಹೊಗಳಿದ್ದಾರೆ. ಈ ಎಲ್ಲ ಕಾರಣಕ್ಕೆ ಪ್ರಧಾನಿ ಮೋದಿ, ಅಮಿತ್ ಷಾ ಸೇರಿ ಹಲವು ಪ್ರಮುಖ ಬಿಜೆಪಿ ನಾಯಕರ ಫೋಟೋವನ್ನು ಜಯಲಲಿತಾ-ಎಂಜಿಆರ್ ದೇವಸ್ಥಾನದಲ್ಲಿ ಇಡಲಾಗಿದೆ ಎಂದು ತಿಳಿಸಿದ್ದಾರೆ.

ತಮಿಳುನಾಡಿನಾದ್ಯಂತ ಅಮ್ಮ ಎಂದೇ ಖ್ಯಾತರಾಗಿದ್ದ ಜಯಲಲಿತಾ 2016ರ ಡಿಸೆಂಬರ್​ 5ರಂದು ಮೃತಪಟ್ಟಿದ್ದಾರೆ. ಹಾಗೇ ಎಂಜಿಆರ್ ಅವರು 1987ರ ಡಿಸೆಂಬರ್​ 24ರಂದು ನಿಧನರಾಗಿದ್ದಾರೆ. ಇವರಿಬ್ಬರ ಸ್ಮರಣಾರ್ಥ ದೇಗುಲ ನಿರ್ಮಾಣ ಮಾಡುವಾಗ ಕುಮಾರ್ ಅವರೇ ಮೇಲುಸ್ತುವಾರಿ ವಹಿಸಿದ್ದರು. ಸುಮಾರು 12 ಎಕರೆ ಜಾಗದಲ್ಲಿ ಕಟ್ಟಲಾಗಿದ್ದು, ಇಲ್ಲಿಗೆ ಅನೇಕರು ಆಗಮಿಸುತ್ತಾರೆ. ಇದರ ಹೊರತಾಗಿ ಮರೀನಾ ಬೀಚ್​ನಲ್ಲಿ ಕೂಡ ಜಯಲಲಿತಾ, ಎಂಜಿಆರ್​ ಅವರ ದೊಡ್ಡ ಸ್ಮಾರಕಗಳು ಇವೆ.

ಇದನ್ನೂ ಓದಿ: Amazon Mega Music Fest: ಸಂಗೀತ ಪ್ರಿಯರಿಗೆ ಸಂತಸದ ಸುದ್ದಿ; ಆಡಿಯೊ ಡಿವೈಸ್​ಗಳಿಗೆ ಅಮೆಜಾನ್ ಆಫರ್!

ಈ ಕಂಪನಿಯಲ್ಲಿದೆ ವೆಕೆನ್ಸಿ.. ತಿಂಗಳಿಗೆ 7 ಲಕ್ಷ ರೂ.ಗೂ ಅಧಿಕ ಸಂಬಳ; ಆಸಕ್ತಿ ಇದ್ದರೆ ಜೂ.30ರೊಳಗೆ ಅರ್ಜಿ ಸಲ್ಲಿಸಿ

Published On - 6:26 pm, Tue, 23 March 21