Amazon Mega Music Fest: ಸಂಗೀತ ಪ್ರಿಯರಿಗೆ ಸಂತಸದ ಸುದ್ದಿ; ಆಡಿಯೊ ಡಿವೈಸ್​ಗಳಿಗೆ ಅಮೆಜಾನ್ ಆಫರ್!

ಬೋಟ್, ಸೋನಿ, ಜೆಬಿಎಲ್, ಬೋಸ್ ಹಾಗೂ ಕ್ಯಾಸಿಯೊ ಕಂಪೆನಿಗಳ ಬ್ರಾಂಡೆಡ್ ಸಾಧನಗಳು ಕೂಡ ಅಮೆಜಾನ್ ಮೆಗಾ ಮ್ಯೂಸಿಕ್ ಸೇಲ್​ನಲ್ಲಿ ಲಭ್ಯವಿರಲಿದೆ. ಈ ಮಾರಾಟ ನಾಳೆ ಅಂದರೆ ಮಾರ್ಚ್ 24ರ ವರೆಗೂ ಇರಲಿದೆ. ಸಂಗೀತಪ್ರಿಯರು ಮಾರಾಟದ ಸದುಪಯೋಗ ಮಾಡಿಕೊಳ್ಳಬಹುದು.

Amazon Mega Music Fest: ಸಂಗೀತ ಪ್ರಿಯರಿಗೆ ಸಂತಸದ ಸುದ್ದಿ; ಆಡಿಯೊ ಡಿವೈಸ್​ಗಳಿಗೆ ಅಮೆಜಾನ್ ಆಫರ್!
ಸಾಂದರ್ಭಿಕ ಚಿತ್ರ
Follow us
TV9 Web
| Updated By: ganapathi bhat

Updated on:Apr 05, 2022 | 1:17 PM

ಅಮೆಜಾನ್ ಸಂಸ್ಥೆ ಸಂಗೀತ ಪ್ರಿಯರಿಗೆ ಸಂತಸದ ಸುದ್ದಿಯೊಂದನ್ನು ನೀಡಿದೆ. ಮೆಗಾ ಮ್ಯೂಸಿಕ್ ಫೆಸ್ಟ್ ಎಂಬ ಆನ್​ಲೈನ್ ಸೇಲ್ ಸೋಮವಾರ (ಮಾರ್ಚ್ 22) ಆರಂಭವಾಗಿದೆ. ಇದರಲ್ಲಿ ಹೆಡ್​ಫೋನ್​ಗಳು, ಸ್ಪೀಕರ್​ಗಳು, ಗಿಟಾರ್, ಸೌಂಡ್​ಬಾರ್​ಗಳು ಹಾಗೂ ಸಂಗೀತಕ್ಕೆ ಸಂಬಂಧಿಸಿದ ಇತರ ಪರಿಕರಗಳ ಮಾರಾಟ ನಡೆಯಲಿದೆ. ಬೋಟ್, ಸೋನಿ, ಜೆಬಿಎಲ್, ಬೋಸ್ ಹಾಗೂ ಕ್ಯಾಸಿಯೊ ಕಂಪೆನಿಗಳ ಬ್ರಾಂಡೆಡ್ ಸಾಧನಗಳು ಕೂಡ ಅಮೆಜಾನ್ ಮೆಗಾ ಮ್ಯೂಸಿಕ್ ಸೇಲ್​ನಲ್ಲಿ ಲಭ್ಯವಿರಲಿದೆ. ಈ ಮಾರಾಟ ನಾಳೆ ಅಂದರೆ ಮಾರ್ಚ್ 24ರ ವರೆಗೂ ಇರಲಿದೆ. ಸಂಗೀತಪ್ರಿಯರು ಮಾರಾಟದ ಸದುಪಯೋಗ ಮಾಡಿಕೊಳ್ಳಬಹುದು.

ಬೋಟ್ ಕಂಪೆನಿಯ ಏರ್​ಪಾಡ್ 441 ₹ 2,499 ಕ್ಕೆ ಲಭ್ಯವಾಗಲಿದೆ. ಸೋನಿ WF-1000X M3 ವಯರ್​ಲೆಸ್ ಇಯರ್​ಬಡ್​ಗಳು ಕೂಡ ಕಡಿಮೆ ದರಕ್ಕೆ ಸಿಗಲಿದೆ. ಈ ಪರಿಕರವು HD Noise-Cancelling Processor QN1e ಮತ್ತು 24 ಗಂಟೆಗಳವರೆಗೆ ಬರುವ ಬ್ಯಾಟರಿ ಜೊತೆಗೆ ಗ್ರಾಹಕರಿಗೆ ಲಭ್ಯವಾಗಲಿದೆ. ಸೋನಿ ಇಯರ್​ಬಡ್​ಗಳು ₹ 14,690 ಕ್ಕೆ ಸಿಗಲಿದೆ.

ಹೊಸ ಸ್ಪೀಕರ್​ಗಾಗಿ ನೀವು ಹುಡುಕಾಟ ನಡೆಸುತ್ತಿದ್ದರೆ, ಸೇಲ್​ನಲ್ಲಿರುವ ಬೋಟ್ ಆವಂತೆ 1800 ನ್ನು ಪರಿಗಣಿಸಬಹುದಾಗಿದೆ. 6,499 ರೂಪಾಯಿಯ ಸ್ಪೀಕರ್ 60W ವಯರ್​ಲೆಸ್ ಊಫರ್ ಮತ್ತು 2.1 ಚಾನೆಲ್ ಸೌಂಡ್ ಸಿಸ್ಟಮ್​ನೊಂದಿಗೆ ಗ್ರಾಹಕರಿಗೆ ಲಭ್ಯವಾಗಲಿದೆ. LG ಸಂಸ್ಥೆ ಕೂಡ ₹ 16,450ಕ್ಕೆ ತನ್ನ ಸೌಂಡ್ ಬಾರ್ SN4Y ವಯರ್​ಲೆಸ್ ಸಬ್​ಊಫರ್ ನೀಡುತ್ತಿದೆ.

ಅಲ್ಲದೆ, ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ (Fab Phones Fest) ಎಂಬ ಮಾರಾಟವನ್ನೂ ಮಾಡುತ್ತಿದೆ. ವಿವಿಧ ಬ್ರಾಂಡ್​ಗಳ ಸ್ಮಾರ್ಟ್​ಫೋನ್​ಗಳನ್ನು ಮಾರಾಟ ಮಾಡುತ್ತಿದೆ. ಮಾರ್ಚ್ 25, 2021ರ ವರೆಗೆ ಈ ಮಾರಾಟ ನಡೆಯಲಿದ್ದು, ಸ್ಮಾರ್ಟ್​ಫೋನ್ ಹಾಗೂ ಇತರ ಪರಿಕರಗಳ ಮೇಲೆ ಶೇ. 40ರಷ್ಟು ಆಫರ್ ಇರಲಿದೆ.

ಈ ಮಾರಾಟದಲ್ಲಿ ಗ್ರಾಹಕರು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿಕೊಳ್ಳುವ ಮೂಲಕ ₹ 1,000 ರಿಯಾಯಿತಿ ಪಡೆಯಬಹುದಾಗಿದೆ. ಎಕ್ಸ್​ಚೇಂಜ್ ಆಫರ್ ಮೂಲಕ ₹ 2,000 ರಿಯಾಯಿತಿ ಮತ್ತು 12 ತಿಂಗಳಿಗೆ No cost EMI ಸೌಲಭ್ಯ ಪಡೆಯಬಹುದಾಗಿದೆ. ಅಮೆಜಾನ್ ಪ್ರೈಮ್ ಸಬ್​ಸ್ಕ್ರೈಬ್ ಮಾಡಿಕೊಂಡವರು HDFC ಬ್ಯಾಂಕ್ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ, ಪ್ರತಿ ತಿಂಗಳಿಗೆ ₹ 1,333 no cost EMI ಸೌಲಭ್ಯ ಪಡೆದುಕೊಳ್ಳಬಹುದು.

ಇದನ್ನೂ ಓದಿ: ಗ್ರಾಹಕರಿಗೆ ಆಕರ್ಷಕ ಆಫರ್​ಗಳನ್ನು ಘೋಷಿಸಿದ ಬಿಎಸ್ಎನ್ಎಲ್, ಕೇವಲ ರೂ.129 ಗಳಿಗೆ 300 ಚ್ಯಾನೆಲ್​ಗಳು!

ಇದನ್ನೂ ಓದಿ: Reliance Jioದಿಂದ ಗ್ರಾಹಕರಿಗೆ ಸಿಹಿ ಸುದ್ದಿ! ಜಿಯೋ ಪರಿಚಯಿಸಿದ ಮೂರು ವಿಶೇಷ ಆಫರ್​ಗಳಿವು

Published On - 6:23 pm, Tue, 23 March 21

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್