ಈ ಕಂಪನಿಯಲ್ಲಿದೆ ವೆಕೆನ್ಸಿ.. ತಿಂಗಳಿಗೆ 7 ಲಕ್ಷ ರೂ.ಗೂ ಅಧಿಕ ಸಂಬಳ; ಆಸಕ್ತಿ ಇದ್ದರೆ ಜೂ.30ರೊಳಗೆ ಅರ್ಜಿ ಸಲ್ಲಿಸಿ

ಹೊಸದಾಗಿ ನೇಮಕವಾದವರು ಒಂದು ಸಲ ಕಂಪನಿಯ ನಿಯಮಗಳನ್ನು, ವೈನ್​ ತಯಾರಿಕೆಯ ವಿಧಾನಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡ ಬಳಿಕ ಅವರ ಉತ್ಸಾಹಕ್ಕೆ ತಕ್ಕಂತೆ ಕೆಲಸ ಮಾಡಲು ಅವಕಾಶ ಕೊಡಲಾಗುತ್ತದೆ. ಹಾಗೇ, ಇಲ್ಲಿಗೆ ಅಪ್ಲೈ ಮಾಡುವವರಿಗೆ ಇ-ಕಾಮರ್ಸ್​ ಗೊತ್ತಿರಬೇಕು.

ಈ ಕಂಪನಿಯಲ್ಲಿದೆ ವೆಕೆನ್ಸಿ.. ತಿಂಗಳಿಗೆ 7 ಲಕ್ಷ ರೂ.ಗೂ ಅಧಿಕ ಸಂಬಳ; ಆಸಕ್ತಿ ಇದ್ದರೆ ಜೂ.30ರೊಳಗೆ ಅರ್ಜಿ ಸಲ್ಲಿಸಿ
ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on: Mar 23, 2021 | 6:01 PM

ಜಗತ್ತಿನಾದ್ಯಂತ ಕೆಲವು ಕಂಪನಿಗಳು ಇವೆ. ಆ ಕಂಪನಿಗಳು ದೊಡ್ಡ ಮಟ್ಟದ ಹೆಸರು ಮಾಡಿರುವ ಜತೆಗೆ ತಮ್ಮ ಉದ್ಯೋಗಿಗಳಿಗೂ ಅಷ್ಟೇ ಸೌಕರ್ಯವನ್ನು ಕೊಡುತ್ತವೆ. ಅಂಥ ಕಂಪನಿಗಳಲ್ಲೊಂದಾದ Murphy-Goode Winery (ಮರ್ಫಿ ಗುಡ್​ ವೈನರಿ)ಯಲ್ಲೀಗ ವೆಕೆನ್ಸಿ ಖಾಲಿಯಿದೆ. ಈ ಹುದ್ದೆಗೆ ನೇಮಕ ಆಗುವವರು ನಿಜಕ್ಕೂ ಅದೃಷ್ಟವಂತರೇ ಎಂದು ಪರಿಗಣಿಸಬೇಕಾಗುತ್ತದೆ. ಯಾಕೆಂದರೆ, ಈ ಕಂಪನಿ ಉದ್ಯೋಗಿಗೆ ಆಫರ್​ ಮಾಡಿದ್ದು ತಿಂಗಳಿಗೆ ಬರೋಬ್ಬರಿ 7ಲಕ್ಷದ 24ಸಾವಿರ ರೂ. ಸಂಬಳ. ಅದರೊಟ್ಟಿಗೆ ಮತ್ತೆ ಕೆಲವು ಸೌಕರ್ಯಗಳನ್ನೂ ನೀಡುವುದಾಗಿ ಹೇಳಿಕೊಂಡಿದೆ.

ಈ ಕಂಪನಿ ಇರುವುದು ಕ್ಯಾಲಿಫೋರ್ನಿಯಾದ ಸೊನೊಮಾದಲ್ಲಿ. ಈಗ ಕರೆ ನೀಡಿರುವುದು ಒಂದು ವರ್ಷದ ಅವಧಿಯ ಪೋಸ್ಟ್​ಗೆ. ಈ ಹುದ್ದೆಗೆ ಯಾರು ಆಯ್ಕೆಯಾಗುತ್ತಾರೋ ಅವರಿಗೆ ಭರ್ಜರಿ ಸ್ಯಾಲರಿ ಜತೆ ಉಚಿತ-ಊಟದ ವ್ಯವಸ್ಥೆಯನ್ನು ಕಂಪನಿಯೇ ಮಾಡಲಿದೆ. ವೈನ್​ ಬಗ್ಗೆ ಸಮಗ್ರ ಮಾಹಿತಿ ಹೊಂದಿರುವ ಯಾರಾದರೂ ಪ್ರಯತ್ನ ಮಾಡಬಹುದು. ನೇಮಕವಾದ ಮೊದಲ 90 ದಿನಗಳು, ಜ್ಯೂನಿಯರ್​ ವೈನ್ ತಯಾರಕ, Murphy-Goode ಕಂಪನಿಯ ಸಂಸ್ಥಾಪಕರಲ್ಲಿ ಒಬ್ಬರ ಪುತ್ರನಾದ ಡೇವ್​ ರೆಡಿ ಅವರೊಟ್ಟಿಗೆ ಕೆಲಸ ಮಾಡಬೇಕು. ಇದು ಒಂದು ತರಬೇತಿಯಂತೆ ಇರುತ್ತದೆ.

ಹೊಸದಾಗಿ ನೇಮಕವಾದವರು ಒಂದು ಸಲ ಕಂಪನಿಯ ನಿಯಮಗಳನ್ನು, ವೈನ್​ ತಯಾರಿಕೆಯ ವಿಧಾನಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡ ಬಳಿಕ ಅವರ ಉತ್ಸಾಹಕ್ಕೆ ತಕ್ಕಂತೆ ಕೆಲಸ ಮಾಡಲು ಅವಕಾಶ ಕೊಡಲಾಗುತ್ತದೆ. ಹಾಗೇ, ಇಲ್ಲಿಗೆ ಅಪ್ಲೈ ಮಾಡುವವರಿಗೆ ಇ-ಕಾಮರ್ಸ್​ ಗೊತ್ತಿರಬೇಕು. ಸಂವಹನದಲ್ಲಿ ಸ್ಟ್ರಾಂಗ್​ ಇರಬೇಕು. 21ವರ್ಷ ಆಗಿಬೇಕು. ಇನ್ನು ಆಸಕ್ತ ಅಭ್ಯರ್ಥಿಗಳು ತಮ್ಮ ಎಲ್ಲ ಮಾಹಿತಿಗಳನ್ನೂ ಒಳಗೊಂಡ ವಿಡಿಯೋವೊಂದನ್ನು ಕಂಪನಿಗೆ ಕಳಿಸಬೇಕು. ನಂತರ ಕಂಪನಿ ಅಭ್ಯರ್ಥಿಯ ಬಗ್ಗೆ ತನಿಖೆ ನಡೆಸಿ, ಸೂಕ್ತರನ್ನು ನೇಮಕ ಮಾಡಿಕೊಳ್ಳುತ್ತದೆ. ನಿಮಗೇನಾದರೂ ಇಂಟರೆಸ್ಟ್​ ಇದ್ದರೆ ಜೂನ್​ 30ರೊಳಗೆ ಅಪ್ಲೈ ಮಾಡಿ. ಒಂದೇ ವರ್ಷದ ಜಾಬ್​ ಆದ್ರೂ ಕೈ ತುಂಬ ದುಡಿಯಬಹುದು ಎಂಬುದರಲ್ಲಿ ಅನುಮಾನವಿಲ್ಲ.

ಇದನ್ನೂ ಓದಿ: ಅಂಡರ್ ವಾಟರ್ ಲವ್ ಪ್ರಪೋಸಲ್ ಬಗ್ಗೆ ಮಾತಾಡಿದ ನಟಿ ಮೆಹ್ರೀನ್ ಪಿರ್ಜಾದಾ…!

ದೇವರ ದರ್ಶನಕ್ಕೂ ಮುಂಚೇ ನಾವು ನಂಬಿರೋ ದೇವರ ದರ್ಶನ ಆಯ್ತು ಎಂದ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್