ಎನ್​ಡಿಎ ಸಂಸದೀಯ ಸಭೆ ಆರಂಭಕ್ಕೂ ಮುನ್ನ ಸಂವಿಧಾನಕ್ಕೆ ನಮಸ್ಕರಿಸಿದ ಮೋದಿ

|

Updated on: Jun 07, 2024 | 2:22 PM

ಸಂಸದೀಯ ಸಭೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಸಂವಿಧಾನ ಸಧನದಲ್ಲಿ ಸಂವಿಧಾನಕ್ಕೆ ನಮಸ್ಕರಿಸಿದರು.

ಎನ್​ಡಿಎ ಸಂಸದೀಯ ಸಭೆ ಆರಂಭಕ್ಕೂ ಮುನ್ನ ಸಂವಿಧಾನಕ್ಕೆ ನಮಸ್ಕರಿಸಿದ ಮೋದಿ
ನರೇಂದ್ರ ಮೋದಿ
Follow us on

ಲೋಕಸಭಾ ಚುನಾವಣೆ(Lok Sabha Election)ಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ಬಹುಮತ ಪಡೆದಿದ್ದು, ಸರ್ಕಾರ ರಚಿಸಲು ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಸಂಸದೀಯ ಸಭೆ ನಡೆದಿದ್ದು ಅಲ್ಲಿ ಎನ್​ಡಿಎಯ ಎಲ್ಲಾ ಸಂಸದರು ಒಕ್ಕೂರಲಿನಿಂದ ಮೋದಿಯನ್ನು ನಾಯಕನನ್ನಾಗಿ ಆಯ್ಕೆ ಮಾಡಿದರು.

ಸಭೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಸಂವಿಧಾನ ಸಧನದಲ್ಲಿ ಸಂವಿಧಾನಕ್ಕೆ ನಮಸ್ಕರಿಸಿದರು ಬಳಿಕ ಮಿತ್ರ ಪಕ್ಷಗಳ ಮುಖ್ಯಸ್ಥರಾದ ಚಂದ್ರಬಾಬು ನಾಯ್ಡು, ನಿತೀಶ್​ ಕುಮಾರ್ ಹಾಗೂ ಎಚ್​ಡಿ ಕುಮಾರಸ್ವಾಮಿ ಬಳಿ ಮಾತನಾಡಿದರು.
ಬಳಿಕ ಮಾತನಾಡಿದ ಮೋದಿ, ‘‘ಸರ್ಕಾರ ನಡೆಸಲು ಬಹುಮತ ಅಗತ್ಯ ದೇಶವನ್ನು ಮುನ್ನಡೆಸಲು ಒಮ್ಮತ ಅಗತ್ಯ’’ ಎಂದು ಹೇಳಿದರು.

ಚುನಾವಣೆಯ ಸಮಯದಲ್ಲಿ ಪ್ರಧಾನಿ ಮೋದಿ ಸಂವಿಧಾನವನ್ನು ಬದಲಿಸಲು ಹೊರಟಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಇದೀಗ ಪ್ರಧಾನಿ ಮೋದಿ ಸಂವಿಧಾನಕ್ಕೆ ನಮಸ್ಕರಿಸುವ ಮೂಲಕ ಅಂತಃ ಯಾವುದೇ ನಿರ್ಧಾರವಿಲ್ಲ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ.

1975ರಲ್ಲಿ ದೇಶದ ಸಂವಿಧಾನದ ಆತ್ಮ, ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿದವರು ಇಂದು ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂಬ ಸುಳ್ಳಿನ ಪ್ರಚಾರದ ಸರಕು ಹಿಡಿದು ಓಡಾಡುತ್ತಿದ್ದಾರೆ. ಇಂಥ ಅಪಪ್ರಚಾರಗಳಿಗೆ ಜನ ಕಿವಿಗೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರೂ ಕೂಡ ಉತ್ತರ ಪ್ರದೇಶದಲ್ಲಿ ಸಾಕಷ್ಟು ಮತಗಳನ್ನು ಕಳೆದುಕೊಳ್ಳಲು ಕಾರಣವಾಯಿತು.

ಮತ್ತಷ್ಟು ಓದಿ: ಮುಂದಿನ ಬಾರಿ ಮೋದಿ ಚುನಾವಣೆಯಲ್ಲಿ ನಿಂತಾಗ ಈಗ ಅಲ್ಲಿ ಇಲ್ಲಿ ಗೆದ್ದಿರುವವರೂ ಸೋಲ್ತಾರೆ: ನಿತೀಶ್​ ಕುಮಾರ್

ಇದಾದ ನಂತರ ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ, ನಿತಿನ್ ಗಡ್ಕರಿ ಮತ್ತು ಎನ್‌ಡಿಎ ಪಾಲುದಾರ ಟಿಡಿಪಿಯ ಚಂದ್ರಬಾಬು ನಾಯ್ಡು, ಜೆಡಿಯುನ ನಿತೀಶ್ ಕುಮಾರ್, ಶಿವಸೇನೆಯ ಏಕನಾಥ್ ಶಿಂಧೆ ಸೇರಿದಂತೆ ಇತರ ನಾಯಕರು ಭಾಗವಹಿಸಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ