ಮುಂದಿನ ಬಾರಿ ಮೋದಿ ಚುನಾವಣೆಯಲ್ಲಿ ನಿಂತಾಗ ಈಗ ಅಲ್ಲಿ ಇಲ್ಲಿ ಗೆದ್ದಿರುವವರೂ ಸೋಲ್ತಾರೆ: ನಿತೀಶ್​ ಕುಮಾರ್

ಮುಂದಿನ ಬಾರಿ ನೀವು ಚುನಾವಣೆಯಲ್ಲಿ ನಿಂತಾಗ ಈಗ ಗೆದ್ದವರೂ ಸೋಲುತ್ತಾರೆ ಎಂದು ಜೆಡಿಯು ಮುಖ್ಯಸ್ಥ ನಿತೀಶ್​ ಕುಮಾರ್​ ಹೇಳಿದ್ದಾರೆ. ಎನ್​ಡಿಎ ಸಂಸದರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಮುಂದಿನ ಬಾರಿ ಮೋದಿ ಚುನಾವಣೆಯಲ್ಲಿ ನಿಂತಾಗ ಈಗ ಅಲ್ಲಿ ಇಲ್ಲಿ ಗೆದ್ದಿರುವವರೂ ಸೋಲ್ತಾರೆ: ನಿತೀಶ್​ ಕುಮಾರ್
ನಿತೀಶ್​ ಕುಮಾರ್
Follow us
|

Updated on:Jun 07, 2024 | 1:23 PM

ಮುಂದಿನ ಬಾರಿ ನೀವು ಗೆದ್ದಾಗ ಈಗ ಅಲ್ಲಿ ಇಲ್ಲಿ ಗೆದ್ದವರೂ ಸೋಲುತ್ತಾರೆ ಎನ್ನುವ ಭರವಸೆ ನನಗಿದೆ ಎಂದು ಪ್ರಧಾನಿ ಮೋದಿ ಕುರಿತು ಜೆಡಿಯು ಮುಖ್ಯಸ್ಥ ನಿತೀಶ್​ ಕುಮಾರ್(Nitish Kumar)​ ಹೊಗಳಿಕೆಯ ಮಾತನಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ಬಹುಮತಗಳಿಸಿದ್ದು, ಇಂದು ಎನ್​ಡಿಎ ಎಲ್ಲಾ ಸಂಸದರ ಸಭೆ ಕರೆದಿದೆ. ಇಲ್ಲಿ ಎಲ್ಲಾ ಸಂಸದರು 18ನೇ ಲೋಕಸಭೆಯ ನಾಯಕನನ್ನಾಗಿ ನರೇಂದ್ರ ಮೋದಿಯವರನ್ನು ಆಯ್ಕೆ ಮಾಡಿದ್ದಾರೆ.

ಈ ಸಮಯದಲ್ಲಿ ನಿತೀಶ್​ ಕುಮಾರ್ ಮಾತನಾಡಿ, ಈಗ ಯಾರ್ಯಾರು ಅಲ್ಲಲ್ಲಿ ಗೆದ್ದಿದ್ದಾರೋ ಮುಂದಿನ ಅವಧಿಯಲ್ಲಿ ಎಲ್ಲರೂ ಸೋಲುತ್ತಾರೆ ಎನ್ನುವ ಭರವಸೆ ಇದೆ ಎಂದರು.

10 ವರ್ಷಗಳ ಕಾಲ ಪ್ರಧಾನಿ ದೇಶದ ಸೇವೆ ಮಾಡಿದ್ದಾರೆ, ಮುಂದೂ ಕೂಡ ಅವರ ಸೇವೆ ಹೀಗೆ ಮುಂದುವರೆಯಲಿದೆ, ಎಲ್ಲೆಲ್ಲಿ ಕೆಲಸಗಳು ಬಾಕಿ ಉಳಿದಿದ್ದವೋ ಆ ಎಲ್ಲಾ ಕೆಲಸಗಳನ್ನು ಈಗ ಪೂರ್ಣಗೊಳಿಸಲಿದ್ದಾರೆ. 3ನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಹೇಳಿದರು.

ಮತ್ತಷ್ಟು ಓದಿ: ಪ್ರಧಾನಿ ಮೋದಿಯನ್ನು 18ನೇ ಲೋಕಸಭೆಯ ನಾಯಕನನ್ನಾಗಿ ಆಯ್ಕೆ ಮಾಡಿದ ಎನ್​ಡಿಎ ಸಂಸದರು

ಬಿಹಾರದಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲಾಗುವುದು, ನಾವೆಲ್ಲರೂ ಒಗ್ಗೂಡಿರುವುದು ದೊಡ್ಡ ವಿಷಯ ಮತ್ತು ನಾವೆಲ್ಲರೂ ನಿಮ್ಮೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತೇವೆ. ನೀವು ಭಾನುವಾರ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದೀರಿ ಆದರೆ ಇಂದೇ ಪ್ರಮಾಣವಚನ ಸ್ವೀಕರಿಸಬೇಕೆಂದು ನಾನು ಬಯಸಿದ್ದೆ, ನಿಮ್ಮೊಂದಿಗೆ ನಾವಿದ್ದೇವೆ, ನಿಮ್ಮ ನೇತೃತ್ವದಲ್ಲಿ ಕೆಲಸ ಮಾಡಲು ಸಿದ್ಧರಿದ್ದೇವೆ ಎಂದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:17 pm, Fri, 7 June 24

ತಾಜಾ ಸುದ್ದಿ