ದೆಹಲಿ ದಸರಾದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ: ಜಾತೀಯತೆ, ಪ್ರಾದೇಶಿಕತೆ ತೊಡೆದುಹಾಕಲು ಕರೆ

|

Updated on: Oct 24, 2023 | 10:44 PM

PM Narendra Modi in Dussehra celebrations in Delhi: ವಿಜಯದಶಮಿ ಹಬ್ಬವು ಕೇವಲ ರಾವಣನ ಮೇಲೆ ರಾಮನ ವಿಜಯದ ಹಬ್ಬವಾಗಬಾರದು, ಇದು ರಾಷ್ಟ್ರದ ಪ್ರತಿಯೊಂದು ದುಷ್ಟರ ವಿರುದ್ಧ ದೇಶಭಕ್ತಿಯ ವಿಜಯದ ಹಬ್ಬವಾಗಬೇಕು. ಸಮಾಜದಲ್ಲಿನ ಅನಿಷ್ಟ ಮತ್ತು ತಾರತಮ್ಯವನ್ನು ಕೊನೆಗಾಣಿಸಲು ನಾವು ಪ್ರತಿಜ್ಞೆ ಮಾಡಬೇಕು ಎಂದು ಮೋದಿ ಹೇಳಿದರು.

ದೆಹಲಿ ದಸರಾದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ: ಜಾತೀಯತೆ, ಪ್ರಾದೇಶಿಕತೆ ತೊಡೆದುಹಾಕಲು ಕರೆ
ಪ್ರಧಾನಿ ನರೇಂದ್ರ ಮೋದಿ
Follow us on

ನವದೆಹಲಿ, ಅಕ್ಟೋಬರ್ 24: ಸಮಾಜದ ಸಾಮರಸ್ಯವನ್ನು ಹಾಳು ಮಾಡುತ್ತಿರುವ ಜಾತಿವಾದ ಮತ್ತು ಪ್ರಾದೇಶಿಕತೆ ಸೇರಿದಂತೆ ಅಂತಹ ವಿರೂಪಗಳನ್ನು ಕೊನೆಗೊಳಿಸಬೇಕೆಂದು ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ  (Narendra Modi) ಕರೆ ನೀಡಿದ್ದಾರೆ. ನವದೆಹಲಿಯ ದ್ವಾರಕಾ ಸೆಕ್ಟರ್ 10 ರ ರಾಮ್ ಲೀಲಾ ಮೈದಾನದಲ್ಲಿ ನಡೆದ ‘ವಿಜಯ ದಶಮಿ (Vijaya Dashami) ಉತ್ಸವದಲ್ಲಿ ರಾವಣ ಪ್ರತಿಕೃತಿ ದಹನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಸಮಾಜದ ಸೌಹಾರ್ದತೆಗೆ ಧಕ್ಕೆ ಉಂಟು ಮಾಡುತ್ತಿರುವ ಜಾತೀಯತೆ, ಪ್ರಾದೇಶಿಕತೆ ಸೇರಿದಂತೆ ಇನ್ನಿತರ ವಿರೂಪಗಳನ್ನು ಕೊನೆಗಾಣಿಸೋಣ. ಇಂದು, ಕನಿಷ್ಠ ಒಂದು ಬಡ ಕುಟುಂಬದ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಉನ್ನತೀಕರಿಸುವುದು ಸೇರಿದಂತೆ 10 ಪ್ರತಿಜ್ಞೆಗಳನ್ನು ತೆಗೆದುಕೊಳ್ಳುವಂತೆ ನಾನು ದೇಶದ ಜನರನ್ನು ಒತ್ತಾಯಿಸುತ್ತೇನೆ ಎಂದರು.

ಪಿಂಕ್ ಕುರ್ತಾದಲ್ಲಿ ಕೇಸರಿ ಬಣ್ಣದ ನೆಹರೂ ಜಾಕೆಟ್ ಧರಿಸಿದ್ದ ಪ್ರಧಾನಿ ಮೋದಿ, ದಸರಾ ಆಚರಣೆಯಲ್ಲಿ ಪಾಲ್ಗೊಂಡರು ಮತ್ತು ರಾವಣ ದಹನ ಮಾಡಿದರು. ಅವರು ನೀಲಿ ಚೆಕ್‌ಗಳನ್ನು ಹೊಂದಿರುವ ಕೇಸರಿ ಬಣ್ಣದ ಪೇಟವನ್ನು ಸಹ ಧರಿಸಿದ್ದರು.

ನವರಾತ್ರಿ ಮತ್ತು ವಿಜಯದಶಮಿಯ ಸಂದರ್ಭದಲ್ಲಿ ನಾಡಿನ ಜನತೆಗೆ ನನ್ನ ಶುಭಾಶಯಗಳು. ಈ ಬಾರಿ ನಾವು ಚಂದ್ರನ ಮೇಲೆ ವಿಜಯ ಸಾಧಿಸಿ 2 ತಿಂಗಳಾದಾಗ ವಿಜಯದಶಮಿಯನ್ನು ಆಚರಿಸುತ್ತಿದ್ದೇವೆ. ವಿಜಯದಶಮಿಯಂದು ‘ಶಸ್ತ್ರಪೂಜೆ’ ಮಾಡುವ ಸಂಪ್ರದಾಯವಿದೆ. ಆದಾಗ್ಯೂ, ನಮ್ಮ ದೇಶದಲ್ಲಿ, ನಮ್ಮ ಸ್ವಂತ ಭೂಮಿಯನ್ನು ರಕ್ಷಿಸಲು ಆಯುಧಗಳನ್ನು (ಶಸ್ತ್ರಗಳನ್ನು) ಪೂಜಿಸಲಾಗುತ್ತದೆ ಮತ್ತು ಇತರರ ಭೂಮಿಯನ್ನು ವಶಪಡಿಸಿಕೊಳ್ಳಲು ಅಲ್ಲ. ನಾವು ದುರ್ಗಾದೇವಿಯನ್ನು ನಮಗಾಗಿ ಮಾತ್ರವಲ್ಲದೆ ಇಡೀ ಪ್ರಪಂಚದ ಕಲ್ಯಾಣಕ್ಕಾಗಿ ಪೂಜಿಸುತ್ತೇವೆ ಎಂದು ಮೋದಿ ಹೇಳಿದರು.

ವಿಜಯದಶಮಿ ಹಬ್ಬವು ಕೇವಲ ರಾವಣನ ಮೇಲೆ ರಾಮನ ವಿಜಯದ ಹಬ್ಬವಾಗಬಾರದು, ಇದು ರಾಷ್ಟ್ರದ ಪ್ರತಿಯೊಂದು ದುಷ್ಟರ ವಿರುದ್ಧ ದೇಶಭಕ್ತಿಯ ವಿಜಯದ ಹಬ್ಬವಾಗಬೇಕು. ಸಮಾಜದಲ್ಲಿನ ಅನಿಷ್ಟ ಮತ್ತು ತಾರತಮ್ಯವನ್ನು ಕೊನೆಗಾಣಿಸಲು ನಾವು ಪ್ರತಿಜ್ಞೆ ಮಾಡಬೇಕು ಎಂದು ಮೋದಿ ಹೇಳಿದರು.

ಇದನ್ನೂ ಓದಿ: ದೆಹಲಿ: ರಾಮಲೀಲಾ ಮೈದಾನದ ದಸರಾ, ರಾವಣ ದಹನ ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರಧಾನಿ ಮೋದಿ

ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣವನ್ನು ವೀಕ್ಷಿಸಲು ನಾವು ಅದೃಷ್ಟವಂತರು. ರಾಮಲಲ್ಲಾ ದೇವಾಲಯವು ಜಗತ್ತಿಗೆ ಸಂತೋಷವನ್ನು ತರಲಿದೆ. ದಶಕಗಳ ಕಾಯುವಿಕೆಯ ನಂತರ ದೇವಾಲಯ ನಿರ್ಮಾಣವಾಗುತ್ತಿದೆ. ರಾಮಮಂದಿರ ನಿರ್ಮಾಣಕ್ಕಾಗಿ ಇಷ್ಟು ದಿನ ಕಾಯುತ್ತಿದ್ದ ಭಾರತೀಯರ ವಿಜಯವಾಗಿದೆ ಎಂದು ಪ್ರಧಾನಿ ಹೇಳಿದರು.

ಇಂದು ನಾವು ರಾವಣನ ಪ್ರತಿಕೃತಿಯನ್ನು ದಹಿಸುತ್ತಿದ್ದೇವೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳೋಣ. ಆದರೆ ಇದು ಸಮಾಜದ ಪರಸ್ಪರ ಸಾಮರಸ್ಯ ಹದಗೆಡುವ ಪ್ರತಿಯೊಂದು ವಿಕಾರವನ್ನು ಸುಡಬೇಕು. ನಮ್ಮ ದೇಶವನ್ನು ಜಾತಿವಾದ ಮತ್ತು ಪ್ರಾದೇಶಿಕತೆಯ ಹೆಸರಿನಲ್ಲಿ ವಿಭಜಿಸಲು ಪ್ರಯತ್ನಿಸುವ ಶಕ್ತಿಗಳನ್ನು ಸುಟ್ಟುಹಾಕಲಿ ಎಂದು ಮೋದಿ ಆಶಿಸಿದರು.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ