ಗಾಂಧಿನಗರ: ಗುಜರಾತ್‌ನ ಮೊರ್ಬಿ (Morbi) ಜಿಲ್ಲೆಯ ಮಚ್ಚು ನದಿಗೆ (Machchhu river) ಅಡ್ಡಲಾಗಿ ನಿರ್ಮಿಸಲಾಗಿದ್ದ ತೂಗು ಸೇತುವೆ (cable bridge) ಇಂದು (ಅಕ್ಟೋಬರ್ 30) ಕುಸಿದು ಬಿದಿದ್ದು, ದೊಡ್ಡ ದುರಂತ ಸಂಭವಿಸಿದೆ. ಈ ದುರಂತದಲ್ಲಿ ಈವರೆಗೆ ಸಾವಿನ ಸಂಖ್ಯೆ 90ಕ್ಕೆ ಏರಿಕೆಯಾಗಿದ್ದು, ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಅವರ ಗುಜರಾತ್ ಕಾರ್ಯಕ್ರಮಗಳು ರದ್ದಾಗಿವೆ.
ನಾಳೆ ಅಂದ್ರೆ ಅಕ್ಟೋಬರ್ 31ರಿಂದ ಮೂರು ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಅವರ ಗುಜರಾತ್ ಪ್ರವಾಸ ನಿಗದಿಯಾಗಿತ್ತು ಆದ್ರೆ, ಸೇತುವೆ ದುರಂತ ಸಂಭವಿಸಿದ್ದರಿಂದ ಮೋದಿ ಅವರ ಗುಜರಾತ್ ಪ್ರವಾಸ ಕಾರ್ಯಕ್ರಮಗಳು ಕ್ಯಾನ್ಸಲ್ ಆಗಿವೆ. ಸೋಮವಾರ ಅಹಮದಾಬಾದ್‌ನಲ್ಲಿ ರೋಡ್ ಶೋ ನಿಗದಿಯಾಗಿಯಾಗಿತ್ತು. ಆದ್ರೆ, ಇದೀಗ ಎಲ್ಲಾ ಕಾರ್ಯಕ್ರಮಗಳನ್ನ ರದ್ದು ಮಾಡಿದ್ದು, ಮೂಲಗಳ ಪ್ರಕಾರ ನರೇಂದ್ರ ಮೋದಿ ಅವರು ಗುಜರಾತ್ಗೆ ಆಗಮಿಸಿ ಮೊರ್ಬಿ ನದಿ ಸೇತುವೆ ದುರಂತದ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
PM Modi cancels road show, page committee sammelan in wake of Morbi tragedy
Read @ANI Story | https://t.co/xtgyyyzleH#PMModi #Morbi #MorbiBridgeCollapse #Gujarat pic.twitter.com/7RQalCKavj
— ANI Digital (@ani_digital) October 30, 2022
Breaking News ಗುಜರಾತ್‌ನ ಮೊರ್ಬಿಯಲ್ಲಿ ತೂಗು ಸೇತುವೆ ಕುಸಿತ; 35 ಮಂದಿ ಸಾವು
ಇನ್ನು ಮೊರ್ಬಿ ನದಿ ತೀರದಲ್ಲಿ ಎನ್ಡಿಆರ್ಎಫ್ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ ರಕ್ಷಣಾ ಕಾರ್ಯಚರಣೆ ನಡೆಸಿವೆ. ಆದರೂ ಜನರನ್ನು ತ್ವರಿಗತಿಯಲ್ಲಿ ರಕ್ಷಣೆ ಮಾಡಲು ಆಗುತ್ತಿಲ್ಲ. ಇದರಿಂದ ವಾಯುಸೇನೆ, ನೌಕಪಡೆಯನ್ನೂ ಸಹ ದುರಂತ ಸ್ಥಳಕ್ಕೆ ನಿಯೋಜಿಸಲಾಗಿದೆ. ಅಲ್ಲದೇ ಜನರನ್ನು ಏರ್ ಲಿಫ್ಟ್ ಮಾಡಲು ಹೆಲಿಕಾಪ್ಟರ್ ಸಹ ಕಳುಹಿಸಲಾಗಿದೆ.
ಈಗಾಗಲೇ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಘಟನಾ ಸ್ಥಳಕ್ಕೆ ಆಗಮಿಸಿದ್ದು, ರಕ್ಷಣಾ ಕಾರ್ಯಚರಣೆ ಪರಿಶೀಲನೆ ನಡೆಸಿದ್ದಾರೆ. ಭೂಪೇಂದ್ರ ಅವರು ಮೃತ ಕುಟುಂಬಗಳಿಗೆ ತಲಾ ನಾಲ್ಕು ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದಾರೆ. ಇನ್ನು ಕೇಂದ್ರ ಸರ್ಕಾರವು ಸಹ ಮೃತ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂ ಪರಿಹಾರ ಘೋಷಿಸಿದೆ.
CCTV footage of moment before #Morbi bridge collapse. Deeply painful! ? pic.twitter.com/vtzuPvQ4B8
— YSR (@ysathishreddy) October 31, 2022
Published On - 12:07 am, Mon, 31 October 22