ಇಸ್ರೋ ಮುಖ್ಯಸ್ಥ ಕೆ.ಶಿವನ್​ಗೆ ಧೈರ್ಯ ಹೇಳಿದ ಪ್ರಧಾನಿ

|

Updated on: Sep 07, 2019 | 1:05 PM

ಚಂದ್ರನ ಮೇಲೆ ಲ್ಯಾಂಡ್ ಆಗುವ ಕೊನೆ ಕ್ಷಣದಲ್ಲಿ ಚಂದ್ರಯಾನ-2ಗೆ ಹಿನ್ನಡೆಯುಂಟಾಗಿದೆ. ಹೀಗಾಗಿ ಭಾವುಕರಾಗಿದ್ದ ಇಸ್ರೋ ಮುಖ್ಯಸ್ಥ ಕೆ.ಶಿವನ್​ ಅವರನ್ನು ಪ್ರಧಾನಿ ಮೋದಿ ಆಲಂಗಿಸಿ ಸಂತೈಸಿದ್ದಾರೆ. ಚಂದ್ರಯಾನ-2 ಲ್ಯಾಂಡಿಂಗ್​ ವೀಕ್ಷಣೆಗೆ ಬೆಂಗಳೂರಿನ ಇಸ್ರೋ ಕಚೇರಿಯಲ್ಲಿ ವ್ಯವಸ್ಥೆ ಮಾಡಿಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಕ್ಷಣಕ್ಕಾಗಿ ಎದುರುನೋಡುತ್ತಿದ್ದರು. ಆದ್ರೆ ಕೊನೆಯ ಕ್ಷಣದಲ್ಲಿ ಚಂದ್ರಯಾನ-2 ಸಂಪರ್ಕ ಕಳೆದುಕೊಂಡಿತು. ಈ ಕುರಿತು ಇಂದು ಬೆಳಗ್ಗೆ ಪ್ರಧಾನಿ ಮೋದಿ ಇಸ್ರೋ ಕಂಟ್ರೋಲ್ ಸೆಂಟರ್​ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿ, ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದ್ದಾರೆ. ಬಳಿಕ ಭಾವುಕರಾಗಿದ್ದ […]

ಇಸ್ರೋ ಮುಖ್ಯಸ್ಥ ಕೆ.ಶಿವನ್​ಗೆ ಧೈರ್ಯ ಹೇಳಿದ ಪ್ರಧಾನಿ
Follow us on

ಚಂದ್ರನ ಮೇಲೆ ಲ್ಯಾಂಡ್ ಆಗುವ ಕೊನೆ ಕ್ಷಣದಲ್ಲಿ ಚಂದ್ರಯಾನ-2ಗೆ ಹಿನ್ನಡೆಯುಂಟಾಗಿದೆ. ಹೀಗಾಗಿ ಭಾವುಕರಾಗಿದ್ದ ಇಸ್ರೋ ಮುಖ್ಯಸ್ಥ ಕೆ.ಶಿವನ್​ ಅವರನ್ನು ಪ್ರಧಾನಿ ಮೋದಿ ಆಲಂಗಿಸಿ ಸಂತೈಸಿದ್ದಾರೆ.

ಚಂದ್ರಯಾನ-2 ಲ್ಯಾಂಡಿಂಗ್​ ವೀಕ್ಷಣೆಗೆ ಬೆಂಗಳೂರಿನ ಇಸ್ರೋ ಕಚೇರಿಯಲ್ಲಿ ವ್ಯವಸ್ಥೆ ಮಾಡಿಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಕ್ಷಣಕ್ಕಾಗಿ ಎದುರುನೋಡುತ್ತಿದ್ದರು. ಆದ್ರೆ ಕೊನೆಯ ಕ್ಷಣದಲ್ಲಿ ಚಂದ್ರಯಾನ-2 ಸಂಪರ್ಕ ಕಳೆದುಕೊಂಡಿತು. ಈ ಕುರಿತು ಇಂದು ಬೆಳಗ್ಗೆ ಪ್ರಧಾನಿ ಮೋದಿ ಇಸ್ರೋ ಕಂಟ್ರೋಲ್ ಸೆಂಟರ್​ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿ, ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದ್ದಾರೆ. ಬಳಿಕ ಭಾವುಕರಾಗಿದ್ದ ಕೆ.ಶಿವನ್ ಅವರನ್ನು ಮೋದಿ ತಬ್ಬಿಕೊಂಡು ಸಮಾಧಾನ ಹೇಳಿದ್ದಾರೆ.

ಚಂದ್ರನ ಮೇಲೆ ಇಳಿಯುವ ಕೊನೆಯ 15 ನಿಮಿಷ ಭಾರಿ ಕಷ್ಟದ ಕ್ಷಣಗಳು ಎಂದು ಇಸ್ರೋ ಈ ಮೊದಲೇ ಹೇಳಿತ್ತು. ಚಂದ್ರಯಾನ-2 ಉಡಾವಣೆಯಾದಾಗಿನಿಂದಲೂ ಎಲ್ಲವೂ ಸುಸೂತ್ರವಾಗಿ ನೇರವೇರಿದರೂ, 2.1 ಕಿಲೋ ಮೀಟರ್​ ದೂರು ಇರುವಾಗ ಲ್ಯಾಂಡರ್​ ನೌಕೆ ಸಂಪರ್ಕ ಕಡಿದುಕೊಂಡಿದೆ. ಇದರ ಡೇಟಾವನ್ನು ವಿಶ್ಲೇಷಣೆ ಮಾಡುತ್ತೇವೆಂದು ಇಸ್ರೋ ತಿಳಿಸಿದೆ.