Updated on:Oct 09, 2023 | 1:09 PM
ಭಾರತ ಪ್ರವಾಸದಲ್ಲಿರುವ ತಾಂಜೇನಿಯಾ ಅಧ್ಯಕ್ಷ ಸಾಮಿಯಾ ಸುಲುಹು ಹಸನ್ ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು.
ತಾಂಜೇನಿಯಾ ಅಧ್ಯಕ್ಷ ಸಾಮಿಯಾ ಸುಲುಹು ಹಸನ್ ಅವರು ರಾಷ್ಟ್ರಪತಿ ದ್ರೌಪರಿ ಮುರ್ಮು ಮತ್ತು ಪ್ರಧಾನಿ ಮೋದಿ ಅವರನ್ನು ದೆಹಲಿಯಲ್ಲಿ ಭೇಟಿಯಾದರು.
ಸಾಮಿಯಾ ಸುಲುಹು ಹಸನ್ ಅವರಿಗೆ ಭಾರತ ಭವ್ಯ ಸ್ವಾಗತವನ್ನು ನೀಡಿದೆ. ಈ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪರಿ ಮುರ್ಮು ಮತ್ತು ಪ್ರಧಾನಿ ಮೋದಿ ಆತ್ಮೀಯವಾಗಿ ಸ್ವಾಗತಿಸಿದರು.
ಪ್ರಧಾನಿ ಮೋದಿ ಅವರು ರಾಷ್ಟ್ರ ರಾಜಧಾನಿಯ ಹೈದರಾಬಾದ್ ಹೌಸ್‌ನಲ್ಲಿ ತಾಂಜೇನಿಯಾ ಅಧ್ಯಕ್ಷ ಹಸನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು. ಸಭೆಯಲ್ಲಿ, ಉಭಯ ದೇಶಗಳ ನಡುವೆ ವಿವಿಧ ಕ್ಷೇತ್ರಗಳಲ್ಲಿ ತಿಳುವಳಿಕೆ ಪತ್ರ (ಎಂಒಯು) ವಿನಿಮಯ ನಡೆಯಲಿದೆ.
ದ್ರೌಪರಿ ಮುರ್ಮು ಅವರ ಆಹ್ವಾನ ಮೇರೆಗೆ ಭಾರತಕ್ಕೆ ಭೇಟಿ ನೀಡಿದ ತಾಂಜೇನಿಯಾ ಅಧ್ಯಕ್ಷರನ್ನು ಭಾನುವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವೆ ಅನ್ನಪೂರ್ಣ ದೇವಿ ಬರಮಾಡಿಕೊಂಡರು.
ಸಾಮಿಯಾ ಸುಲುಹು ಹಸನ್ ಅವರು ಉಭಯ ದೇಶಗಳ ನಡುವಿನ ಅತ್ಯುತ್ತಮ ಸಂಬಂಧವನ್ನು ಶ್ಲಾಘಿಸಿದರು. ಇನ್ನು ಅವರು ಈ ಭೇಟಿ ಭಾರತ ಮತ್ತು ತಾಂಜಾನಿಯಾದ ರಾಜಕೀಯ ಹಾಗೂ ಆರ್ಥಿಕ ಅಭಿವೃದ್ಧಿ ಮಾತುಕತೆಯ ಉದ್ದೇಶವಾಗಿದೆ.
ನಮ್ಮ ಎರಡು ದೇಶಗಳ ನಡುವೆ ದಶಕಗಳಿಂದ ಉತ್ತಮ ಸಂಬಂಧವಿದೆ. ಇನ್ನು ಈ ಭೇಟಿ ಉಭಯ ರಾಷ್ಟ್ರಗಳ ರಾಜಕೀಯ ಹಾಗೂ ಆರ್ಥಿಕ ಅಭಿವೃದ್ಧಿಗೆ ಮುನ್ನಡಿಯಾಗಿದೆ ಎಂದು ಸಾಮಿಯಾ ಸುಲುಹು ಹಸನ್ ಹೇಳಿದರು.
Published On - 1:08 pm, Mon, 9 October 23