PM Modi in Kargil: ದೀಪಾವಳಿಯೆಂದರೆ ಭಯೋತ್ಪಾದನೆಯ ಅಂತ್ಯದ ಹಬ್ಬ; ಕಾರ್ಗಿಲ್‌ನಲ್ಲಿ ಪ್ರಧಾನಿ ಮೋದಿ
ಸಶಸ್ತ್ರ ಪಡೆಗಳಲ್ಲಿ ಮಹಿಳಾ ಕೆಡೆಟ್‌ಗಳ ಸೇರ್ಪಡೆ ಕುರಿತು ಕಾರ್ಗಿಲ್‌ನಲ್ಲಿ ಮಾತನಾಡಿದ ಪ್ರಧಾನಮಂತ್ರಿ ಮೋದಿ, ಭಾರತೀಯ ಸೇನೆಗೆ ಹೆಣ್ಣುಮಕ್ಕಳ ಆಗಮನದಿಂದ ನಮ್ಮ ಶಕ್ತಿ ಹೆಚ್ಚಲಿದೆ ಎಂದು ಹೇಳಿದ್ದಾರೆ.
ಕಾರ್ಗಿಲ್: ಅಧಿಕಾರವಿಲ್ಲದೆ ಶಾಂತಿಯನ್ನು ಪಡೆಯುವುದು ಅಸಾಧ್ಯ. ನಮ್ಮ ಸರ್ಕಾರ ಯಾವಾಗಲೂ ಯುದ್ಧವನ್ನು ಕೊನೆಯ ಆಯ್ಕೆ ಎಂದು ಪರಿಗಣಿಸುತ್ತದೆ ಎಂದು ಕಾರ್ಗಿಲ್‌ನಲ್ಲಿ (Kargil) ಸೈನಿಕರೊಂದಿಗೆ ದೀಪಾವಳಿ ಆಚರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ. ನಾವು ಯಾವಾಗಲೂ ಯುದ್ಧವನ್ನು ಕೊನೆಯ ಆಯ್ಕೆ ಎಂದು ಪರಿಗಣಿಸಿದ್ದೇವೆ. ಅದು ಲಂಕಾ ಅಥವಾ ಕುರುಕ್ಷೇತ್ರದಲ್ಲಿ ಯುದ್ಧದಲ್ಲೇ ಇರಲಿ, ಕೊನೆಯವರೆಗೂ ಯುದ್ಧ ನಡೆಯದಂತೆ ತಡೆಯಲು ಎಲ್ಲ ಪ್ರಯತ್ನಗಳನ್ನು ಮಾಡಲಾಯಿತು. ನಾವು ವಿಶ್ವಶಾಂತಿಯ ಪರವಾಗಿದ್ದೇವೆ. ದೀಪಾವಳಿ (Deepavali) ಎಂದರೆ ಭಯೋತ್ಪಾದನೆಯ ಅಂತ್ಯದ ಹಬ್ಬ. ಕಾರ್ಗಿಲ್ ಅದನ್ನು ಸಾಬೀತುಪಡಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಸಶಸ್ತ್ರ ಪಡೆಗಳಲ್ಲಿ ಮಹಿಳಾ ಕೆಡೆಟ್‌ಗಳ ಸೇರ್ಪಡೆ ಕುರಿತು ಪ್ರಧಾನಮಂತ್ರಿ ಮೋದಿ, “ಭಾರತೀಯ ಸೇನೆಗೆ ಹೆಣ್ಣುಮಕ್ಕಳ ಆಗಮನದಿಂದ ನಮ್ಮ ಶಕ್ತಿ ಹೆಚ್ಚಲಿದೆ” ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸೈನಿಕರನ್ನು ತಮ್ಮ ಕುಟುಂಬ ಎಂದು ಕರೆದಿದ್ದಾರೆ. ಸೈನಿಕರಿಲ್ಲದೆ ನಮ್ಮ ದೇಶದ ಜನರು ನೆಮ್ಮದಿಯಿಂದ ದೀಪಾವಳಿಯನ್ನು ಆಚರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಭಯೋತ್ಪಾದನೆ ವಿರುದ್ಧದ ಸೈನಿಕರ ಹೋರಾಟವನ್ನು ಶ್ಲಾಘಿಸಿದ ಅವರು, ಡ್ರಾಸ್, ಬಟಾಲಿಕ್ ಮತ್ತು ಟೈಗರ್ ಹಿಲ್ ಅವರ ಧೈರ್ಯಕ್ಕೆ ಸಾಕ್ಷಿಯಾಗಿದೆ. ಕಾರ್ಗಿಲ್‌ನಲ್ಲಿ ನಮ್ಮ ಸೈನಿಕರು ಭಯೋತ್ಪಾದನೆಯನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ, ಈ ಘಟನೆಗೆ ನಾನೇ ಸಾಕ್ಷಿಯಾಗಿದ್ದೇನೆ ಎಂದು ಹೇಳಿದರು.
Prime Minister Shri @narendramodi has landed in Kargil, where he will celebrate Diwali with our brave soldiers. pic.twitter.com/RQxanDEgDK
— PMO India (@PMOIndia) October 24, 2022
ಇದನ್ನೂ ಓದಿ: Deepavali 2022: ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಹಲವು ಗಣ್ಯರಿಂದ ದೀಪಾವಳಿಯ ಶುಭಾಶಯ
ಭಾರತಕ್ಕೆ ಈಗ ಜಾಗತಿಕವಾಗಿ ಗೌರವ ಸಿಗುತ್ತಿದೆ. ನೀವು ನಮ್ಮ ಗಡಿಗಳನ್ನು ರಕ್ಷಿಸುತ್ತಿರುವಾಗ ನಾವು ನಮ್ಮ ಶತ್ರುಗಳ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳುತ್ತಿದ್ದೇವೆ. ನಮಗೆ ಸವಾಲು ಎದುರಾದರೆ, ತಮ್ಮದೇ ಭಾಷೆಯಲ್ಲಿ ಶತ್ರುಗಳಿಗೆ ಹೇಗೆ ತಕ್ಕ ಪ್ರತ್ಯುತ್ತರ ನೀಡಬೇಕೆಂದು ನಮ್ಮ ಸಶಸ್ತ್ರ ಪಡೆಗಳಿಗೆ ತಿಳಿದಿದೆ ಎಂದು ಮೋದಿ ಹೇಳಿದ್ದಾರೆ.
Privileged to spend Diwali with our brave Jawans in Kargil. https://t.co/ZQ0rP8GB8U
— Narendra Modi (@narendramodi) October 24, 2022
ಭ್ರಷ್ಟಾಚಾರದ ಬಗ್ಗೆ ಹಿಂದಿನ ಸರ್ಕಾರಗಳ ವಿರುದ್ಧ ಹರಿಹಾಯ್ದ ಮೋದಿ, ದುರಾಡಳಿತವು ದೇಶದ ಅಭಿವೃದ್ಧಿಯ ಸಾಮರ್ಥ್ಯವನ್ನು ನಿರ್ಬಂಧಿಸಿದೆ. ಇಂದು ದೇಶವು ಭ್ರಷ್ಟಾಚಾರದ ವಿರುದ್ಧ ನಿರ್ಣಾಯಕ ಯುದ್ಧವನ್ನು ನಡೆಸುತ್ತಿದೆ. ಭ್ರಷ್ಟರು ಎಷ್ಟೇ ಶಕ್ತಿಶಾಲಿಯಾಗಿದ್ದರೂ ಅವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ದುರಾಡಳಿತವು ದೀರ್ಘಕಾಲದವರೆಗೆ ದೇಶದ ಸಾಮರ್ಥ್ಯವನ್ನು ಸೀಮಿತಗೊಳಿಸಿತು. ಅದು ನಮ್ಮ ಅಭಿವೃದ್ಧಿಯ ದಾರಿಗೆ ತಡೆಯೊಡ್ಡಿತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
From this victorious land of Kargil, I wish the countrymen and the world a very happy #Diwali. There has not been a single war with Pakistan where Kargil has not hoisted the flag of victory. Diwali means ‘festival of end of terror’ and Kargil made it possible: PM Narendra Modi pic.twitter.com/utvHJLzUdq
— ANI (@ANI) October 24, 2022
ಇದನ್ನೂ ಓದಿ: Deepavali 2022: ಕಾರ್ಗಿಲ್‌ನಲ್ಲಿ ಸೈನಿಕರೊಂದಿಗೆ ಪ್ರಧಾನಿ ಮೋದಿ ದೀಪಾವಳಿ ಸಂಭ್ರಮ
2014ರಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಉತ್ತರಾಖಂಡ, ಹಿಮಾಚಲ ಪ್ರದೇಶ, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಗಳಂತಹ ರಾಜ್ಯಗಳಲ್ಲಿ ಸೈನಿಕರೊಂದಿಗೆ ಸಮಯ ಕಳೆಯುವ ಮೂಲಕ ಪ್ರಧಾನಿ ದೀಪಾವಳಿಯನ್ನು ಆಚರಿಸುತ್ತಿದ್ದಾರೆ. ಪ್ರಧಾನಿಯಾಗಿ ಮೋದಿಯವರು ಅಧಿಕಾರ ವಹಿಸಿಕೊಂಡ ಮೊದಲ ವರ್ಷ ಅಂದರೆ 2014ರಲ್ಲಿ ಸಿಯಾಚಿನ್‌ನಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿದರು. 2015ರಲ್ಲಿ ಅವರು ಪಂಜಾಬ್‌ಗೆ ಭೇಟಿ ನೀಡಿ 1965ರ ಪಾಕಿಸ್ತಾನದೊಂದಿಗಿನ ಯುದ್ಧದಲ್ಲಿ ಭಾರತೀಯ ಸೇನೆಯ 50 ವರ್ಷಗಳ ಸಾಧನೆಯನ್ನು ಆಚರಿಸಿದ್ದರು. 2016ರಲ್ಲಿ, ಅವರು ಭದ್ರತಾ ಸಿಬ್ಬಂದಿಯೊಂದಿಗೆ ಹಬ್ಬವನ್ನು ಕಳೆಯಲು ಚೀನಾ ಗಡಿಯ ಬಳಿಗೆ ಹೋಗಿದ್ದರು. 2017 ರಲ್ಲಿ ಉತ್ತರ ಕಾಶ್ಮೀರದ ಗುರೆಜ್ ಸೆಕ್ಟರ್‌ನಲ್ಲಿ ದೀಪಾವಳಿ ಆಚರಿಸಿದ್ದರು.
During the Ukraine war, we saw how our national flag became a shield for our citizens stranded there. India’s respect has increased across the world. It’s happening because India is standing successfully against its internal & external enemies: PM Narendra Modi, in Kargil pic.twitter.com/HrrppKWR0z
— ANI (@ANI) October 24, 2022
2018ರಲ್ಲಿ ಅವರು ಉತ್ತರಾಖಂಡದ ಹರ್ಸಿಲ್ನಲ್ಲಿ ದೀಪಾವಳಿ ಆಚರಿಸಿದ್ದರು. 2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ಸೈನಿಕರ ಜೊತೆ ಕಳೆದಿದ್ದರು. ಕಳೆದ ವರ್ಷ ಅವರು ಜಮ್ಮು ಕಾಶ್ಮೀರದಲ್ಲಿರುವ ನೌಶೆರಾದಲ್ಲಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:31 pm, Mon, 24 October 22