ಕೋಟಿ ಕೋಟಿ ರಾಮ ಭಕ್ತರ ಕನಸು ನನಸಾಯಿತು! ಮಂದಿರ ಶಿಲಾನ್ಯಾಸ ನೆರವೇರಿಸಿದ ಪ್ರಧಾನಿ ಮೋದಿ

| Updated By: ಸಾಧು ಶ್ರೀನಾಥ್​

Updated on: Aug 05, 2020 | 1:31 PM

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸವನ್ನ ಪ್ರಧಾನಿ ಮೋದಿ ನೆರವೇರಿಸಿದರು. ಇದರೊಂದಿಗೆ ಕೋಟಿ ಕೋಟಿ ರಾಮ ಭಕ್ತರ ಕನಸು ನನಸಾಯಿತು! ಮಧ್ಯಾಹ್ನ 12 ಗಂಟೆಗೆ ರಾಮ ಮಂದಿರದ ಗರ್ಭಗುಡಿಯ ಸ್ಥಾನದಲ್ಲಿ ಶಿಲಾನ್ಯಾಸದ ಪೂಜಾಕೈಂಕರ್ಯದಲ್ಲಿ ಭಾಗಿಯಾದರು. ನಂತರ ಪ್ರಧಾನಿ ಮೋದಿ ಬೆಳ್ಳಿ ಗುದ್ದಲಿಯನ್ನ ಸ್ಪರ್ಶಿಸುವ ಮುಖಾಂತರ ಶಿಲಾನ್ಯಾಸ ನೆರವೇರಿಸಿದರು. ರಾಮ ಮಂದಿರದ ಶಿಲಾನ್ಯಾಸಕ್ಕೆ 9 ಇಟ್ಟಿಗೆಗಳ ಬಳಕೆಯಾಯಿತು. ಈ ಇಟ್ಟಿಗೆಗಳನ್ನು ಭಕ್ತರು ಜಗತ್ತಿನ ವಿವಿಧ ಭಾಗಗಳಿಂದ 1989ರಲ್ಲಿ ಕಳುಹಿಸಿದ್ದರು. ಜೊತೆಗೆ, ಸುಮಾರು 2,000 ಪುಣ್ಯಕ್ಷೇತ್ರಗಳಿಂದ ಪವಿತ್ರ ಮಣ್ಣು ಹಾಗೂ 100 […]

ಕೋಟಿ ಕೋಟಿ ರಾಮ ಭಕ್ತರ ಕನಸು ನನಸಾಯಿತು! ಮಂದಿರ ಶಿಲಾನ್ಯಾಸ ನೆರವೇರಿಸಿದ ಪ್ರಧಾನಿ ಮೋದಿ
Follow us on

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸವನ್ನ ಪ್ರಧಾನಿ ಮೋದಿ ನೆರವೇರಿಸಿದರು. ಇದರೊಂದಿಗೆ ಕೋಟಿ ಕೋಟಿ ರಾಮ ಭಕ್ತರ ಕನಸು ನನಸಾಯಿತು!

ಮಧ್ಯಾಹ್ನ 12 ಗಂಟೆಗೆ ರಾಮ ಮಂದಿರದ ಗರ್ಭಗುಡಿಯ ಸ್ಥಾನದಲ್ಲಿ ಶಿಲಾನ್ಯಾಸದ ಪೂಜಾಕೈಂಕರ್ಯದಲ್ಲಿ ಭಾಗಿಯಾದರು. ನಂತರ ಪ್ರಧಾನಿ ಮೋದಿ ಬೆಳ್ಳಿ ಗುದ್ದಲಿಯನ್ನ ಸ್ಪರ್ಶಿಸುವ ಮುಖಾಂತರ ಶಿಲಾನ್ಯಾಸ ನೆರವೇರಿಸಿದರು. ರಾಮ ಮಂದಿರದ ಶಿಲಾನ್ಯಾಸಕ್ಕೆ 9 ಇಟ್ಟಿಗೆಗಳ ಬಳಕೆಯಾಯಿತು.

ಈ ಇಟ್ಟಿಗೆಗಳನ್ನು ಭಕ್ತರು ಜಗತ್ತಿನ ವಿವಿಧ ಭಾಗಗಳಿಂದ 1989ರಲ್ಲಿ ಕಳುಹಿಸಿದ್ದರು. ಜೊತೆಗೆ, ಸುಮಾರು 2,000 ಪುಣ್ಯಕ್ಷೇತ್ರಗಳಿಂದ ಪವಿತ್ರ ಮಣ್ಣು ಹಾಗೂ 100 ನದಿಗಳಿಂದ ಜಲವನ್ನು ಸಹ ಪೂಜೆಯ ವೇಳೆ ಇರಿಸಲಾಗಿತ್ತು.

ಶಿಲಾನ್ಯಾಸದ ವಿಧಿವಿಧಾನಗಳ ಬಳಿಕ ಸ್ವಲ್ಪ ದೂರದಲ್ಲಿ ನಿರ್ಮಿಸಲಾಗಿದ್ದ ವೇದಿಕೆಗೆ ತೆರಳಿದ ಪ್ರಧಾನಿ ಮೋದಿ ಮುಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Published On - 12:54 pm, Wed, 5 August 20