ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಉರುಸ್ಗೆ ಸಚಿವ ಮುಖ್ತರ್ ಅಬ್ಬಾಸ್ ನಖ್ವಿ ಮೂಲಕ ಚಾದರ್ ಕಳಿಸಿಕೊಟ್ಟ ಪ್ರಧಾನಿ ಮೋದಿ
ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಉರುಸ್ನಂದು, ದರ್ಗಾಕ್ಕೆ ಸಾಮಾನ್ಯವಾಗಿ ಹಿಂದು ಮತ್ತು ಮುಸ್ಲಿಂ ಎರಡೂ ಸಮುದಾಯದವರು ಚಾದರ್ ಸಮರ್ಪಿಸುತ್ತಾರೆ. ದೇಶಾದ್ಯಂತ ಇರುವ ಅನೇಕರು ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ.
ಖ್ವಾಜಾ ಮೊಯಿನುದ್ದೀನ್ ಚಿಸ್ತಿ 810ನೇ ಉರುಸ್ ಹಿನ್ನೆಲೆಯಲ್ಲಿ ಅಜ್ಮೀರ್ ಶರಿಫ್ ದರ್ಗಾಕ್ಕೆ ಅರ್ಪಿಸಲೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚಾದರ್ವೊಂದನ್ನು, ಅಲ್ಪಸಂಖ್ಯಾತ ಇಲಾಖೆ ಸಚಿವ ಮುಖ್ತರ್ ಅಬ್ಬಾಸ್ ನಖ್ವಿಯವರಿಗೆ ನೀಡಿದ್ದಾರೆ. ಬಳಿಕ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ತಾವು ನಖ್ವಿಯವರಿಗೆ ಚಾದರ್ ನೀಡುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಚಾದರ್ ಅಜ್ಮೇರ್ ದರ್ಗಾಕ್ಕೆ ಅರ್ಪಿತವಾಗಲಿದೆ ಎಂದು ಹೇಳಿದ್ದಾರೆ. ಈ ಬಾರಿ ಅಜ್ಮೇರ್ ದರ್ಗಾದಲ್ಲಿ ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿಯವರ 810ನೇ ಉರುಸ್ ಅಂದರೆ ಪುಣ್ಯತಿಥಿ ನಡೆಯುತ್ತಿದೆ. ಅಂದಹಾಗೆ, ಪ್ರಧಾನಿ ಮೋದಿಯವರು ಇದೇ ಮೊದಲ ಬಾರಿಯಲ್ಲ. ಹಿಂದೆ ಕೂಡ ಮುಖ್ತರ್ ಅಬ್ಬಾಸ್ ನಖ್ವಿಯವರ ಮೂಲಕವೇ ದರ್ಗಾಕ್ಕೆ ಚಾದರ್ ನೀಡಿದ್ದಾರೆ.
Presented the Chadar which shall be offered at the Ajmer Sharif Dargah on the Urs of Khwaja Moinuddin Chishti. pic.twitter.com/SJhObXNhRA
— Narendra Modi (@narendramodi) February 2, 2022
ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಉರುಸ್ನಂದು, ದರ್ಗಾಕ್ಕೆ ಸಾಮಾನ್ಯವಾಗಿ ಹಿಂದು ಮತ್ತು ಮುಸ್ಲಿಂ ಎರಡೂ ಸಮುದಾಯದವರು ಚಾದರ್ ಸಮರ್ಪಿಸುತ್ತಾರೆ. ದೇಶಾದ್ಯಂತ ಇರುವ ಅನೇಕರು ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಮುಸ್ಲಿಂ ಸಮುದಾಯದ ಜನಸಾಮಾನ್ಯರು, ನಟರು, ರಾಜಕಾರಣಿಗಳು ಉರುಸ್ ಸಂದರ್ಭದಲ್ಲಿ ಇಲ್ಲಿಗೆ ಬರುತ್ತಾರೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೂಡ ಮಂಗಳವಾರ ದರ್ಗಾಕ್ಕೆ ಚಾದರ್ ಕಳಿಸಿಕೊಟ್ಟಿದ್ದಾರೆ. ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಉರುಸ್ಗಾಗಿ ರಾಹುಲ್ ಗಾಂಧಿಯವರು ಚಾದರ್ ಕೊಟ್ಟಿದ್ದನ್ನು ಕಾಂಗ್ರೆಸ್ನ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಇಮ್ರಾನ್ ಪ್ರತಾಪ್ಗಢಿ ದೃಢಪಡಿಸಿದ್ದಾರೆ.
ಖ್ವಾಜಾ ಗರೀಬ್ ನವಾಜ್ ಎಂದು ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಸೂಫಿ ಸಂತರಾಗಿದ್ದರು. ಇವರು ಪ್ರವಾದಿ ಮುಹಮ್ಮದ್ ಅವರ ನೇರ ವಂಶಸ್ಥರು ಎಂದೂ ಹೇಳಲಾಗಿದೆ. ಇವರು ಹುಟ್ಟಿದ್ದು ಸಿಸ್ತಾನ್ನಲ್ಲಿ. ಇಂದಿನ ಪೂರ್ವ ಇರಾನ್ ಮತ್ತು ದಕ್ಷಿಣ ಅಫ್ಘಾನಿಸ್ತಾನದ ಪ್ರದೇಶದಲ್ಲ ಈ ಸಿಸ್ತಾನ್ ಇದೆ. ಸಿಸ್ತಾನ್ನಿಂದ ಲಾಹೋರ್ಗೆ ಬಂದು, ಅಲ್ಲಿಂದ ದೆಹಲಿಗೆ ತಲುಪಿದ್ದರು. ಕೊನೆಗೆ ರಾಜಸ್ಥಾನದ ಅಜ್ಮೇರ್ನಲ್ಲಿ ಶಾಶ್ವತವಾಗಿ ನೆಲೆಸಿದರು. ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅಜ್ಮೇರ್ನಲ್ಲಿಯೇ ಇದೆ. ಅವರು ನಿಧನರಾದ ದಿನವನ್ನು ಉರುಸ್ ಎಂದು ಆಚರಿಸಲಾಗುತ್ತದೆ.
ಇದನ್ನೂ ಓದಿ: ಇನ್ಸ್ಟಾಗ್ರಾಂನಲ್ಲಿ ಹೊಸ ಪೋಸ್ಟ್ ಶೇರ್ ಮಾಡಿ, ಡಿಲೀಟ್ ಮಾಡಿದ ಕಂಗನಾ; ಅದರಲ್ಲಿತ್ತು ಹೊಸ ಸಮಾಚಾರ!
Published On - 8:23 am, Thu, 3 February 22