AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿಗೆ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಫೋನ್; ಮಧ್ಯ ಏಷ್ಯಾ, ಹಾರ್ಮುಜ್ ಜಲಸಂಧಿ ಬಗ್ಗೆ ಚರ್ಚೆ

ಫ್ರೆಂಚ್ ಅಧ್ಯಕ್ಷ ಎಮ್ಯಾನ್ಯುಯೆಲ್ ಮ್ಯಾಕ್ರನ್ ಇಂದು ಸಂಜೆ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಕರೆ ಮಾಡಿದ್ದಾರೆ. ಈ ವೇಳೆ ಇಬ್ಬರೂ ನಾಯಕರು ಪಶ್ಚಿಮ ಏಷ್ಯಾದ ಪರಿಸ್ಥಿತಿ, ಹಾರ್ಮುಜ್ ಜಲಸಂಧಿಯ ಭದ್ರತೆಯ ಕುರಿತು ಚರ್ಚೆ ನಡೆಸಿದ್ದಾರೆ. ಮಧ್ಯ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಬೆಂಬಲಿಸಲು ಭಾರತ ಮತ್ತು ಫ್ರಾನ್ಸ್ ಕೆಲಸ ಮಾಡುವುದನ್ನು ಮುಂದುವರಿಸುತ್ತವೆ ಎಂದು ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿಗೆ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಫೋನ್; ಮಧ್ಯ ಏಷ್ಯಾ, ಹಾರ್ಮುಜ್ ಜಲಸಂಧಿ ಬಗ್ಗೆ ಚರ್ಚೆ
Pm Modi With Macron Image Credit source: PTI
ಸುಷ್ಮಾ ಚಕ್ರೆ
|

Updated on: Apr 16, 2026 | 9:57 PM

Share

ನವದೆಹಲಿ, ಏಪ್ರಿಲ್ 16: ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ದೂರವಾಣಿ ಕರೆ ಮಾಡಿದ್ದಾರೆ. ಈ ವೇಳೆ ಇಬ್ಬರೂ ನಾಯಕರು ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಹಾರ್ಮುಜ್ ಜಲಸಂಧಿಯಲ್ಲಿ ಸುರಕ್ಷತೆ ಮತ್ತು ಸಂಚಾರದ ಸ್ವಾತಂತ್ರ್ಯವನ್ನು ತುರ್ತಾಗಿ ಮರುಸ್ಥಾಪಿಸಲು ಕರೆ ನೀಡಿದ್ದಾರೆ. ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ ಪ್ರಧಾನಿ ಮೋದಿ, ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಜೊತೆ ಮಧ್ಯ ಏಷ್ಯಾದಲ್ಲಿ ಉಲ್ಬಣಗೊಳ್ಳುತ್ತಿರುವ ಪ್ರಾದೇಶಿಕ ಬಿಕ್ಕಟ್ಟಿನ ಬಗ್ಗೆ ಚರ್ಚಿಸಿದ್ದಾಗಿ ತಿಳಿಸಿದ್ದಾರೆ.

“ನನ್ನ ಆತ್ಮೀಯ ಸ್ನೇಹಿತರಾದ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರಿಂದ ಫೋನ್ ಕರೆ ಸ್ವೀಕರಿಸಿದೆ. ಪಶ್ಚಿಮ ಏಷ್ಯಾದ ಪರಿಸ್ಥಿತಿಯನ್ನು ನಾವು ಚರ್ಚಿಸಿದ್ದೇವೆ. ಹಾರ್ಮುಜ್ ಜಲಸಂಧಿಯಲ್ಲಿ ಸುರಕ್ಷತೆ ಮತ್ತು ಸಂಚಾರದ ಸ್ವಾತಂತ್ರ್ಯವನ್ನು ತುರ್ತಾಗಿ ಪುನಃಸ್ಥಾಪಿಸುವ ಅಗತ್ಯವನ್ನು ಒಪ್ಪಿಕೊಂಡಿದ್ದೇವೆ” ಎಂದು ಪ್ರಧಾನಿ ಮೋದಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಕ್ಷೇತ್ರ ಪುನರ್ ವಿಂಗಡಣೆಯಿಂದ ದಕ್ಷಿಣ ಭಾರತಕ್ಕೆ ಅನ್ಯಾಯವಾಗದು; ಪ್ರಧಾನಿ ಮೋದಿ ಭರವಸೆ

ಏಪ್ರಿಲ್ 14ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತನಾಡಿದ್ದಾರೆ. ಈ ವರ್ಷ ಇಬ್ಬರು ನಾಯಕರ ನಡುವಿನ ಮೂರನೇ ಕರೆ ಇದಾಗಿತ್ತು. 40 ನಿಮಿಷಗಳಿಗೂ ಹೆಚ್ಚು ಕಾಲ ಇಬ್ಬರೂ ದೂರವಾಣಿಯಲ್ಲಿ ಮಾತನಾಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!
ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ
ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ
ಎರಡನೇ ಪತ್ನಿ ಬೇಕಾ ಎಂದು ನೇರವಾಗಿ ಕೇಳಿದ ಕವಿತಾ; ಚಂದನ್ ಉತ್ತರ ಏನು?
ಎರಡನೇ ಪತ್ನಿ ಬೇಕಾ ಎಂದು ನೇರವಾಗಿ ಕೇಳಿದ ಕವಿತಾ; ಚಂದನ್ ಉತ್ತರ ಏನು?
ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ತುಂಬಾ ಒಳ್ಳೇದು! ಯಾಕೆ ಗೊತ್ತಾ?
ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ತುಂಬಾ ಒಳ್ಳೇದು! ಯಾಕೆ ಗೊತ್ತಾ?
ಇಂದು ಈ ರಾಶಿಯವರು ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಾಗಿ ಭಾಗಿಯಾಗಬೇಕು
ಇಂದು ಈ ರಾಶಿಯವರು ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಾಗಿ ಭಾಗಿಯಾಗಬೇಕು
ವೇಗದ ಶತಕ ಬಾರಿಸಿದ ಮಿಚೆಲ್ ಮಾರ್ಷ್
ವೇಗದ ಶತಕ ಬಾರಿಸಿದ ಮಿಚೆಲ್ ಮಾರ್ಷ್
ಕಲಬುರಗಿ: 1.44 ಕೋಟಿ ರೂ ಮೌಲ್ಯದ ಫೋನ್‌ ಪತ್ತೆ ಮಾಡಿದ್ಹೇಗೆ ಗೊತ್ತಾ?
ಕಲಬುರಗಿ: 1.44 ಕೋಟಿ ರೂ ಮೌಲ್ಯದ ಫೋನ್‌ ಪತ್ತೆ ಮಾಡಿದ್ಹೇಗೆ ಗೊತ್ತಾ?
ಫೋನ್‌ ಕಳೆದುಕೊಂಡು ವ್ಯಕ್ತಿ ಮಾಡಿದ್ದೇನು? ಅನುಭವದ ಮಾತು ಕೇಳಿ
ಫೋನ್‌ ಕಳೆದುಕೊಂಡು ವ್ಯಕ್ತಿ ಮಾಡಿದ್ದೇನು? ಅನುಭವದ ಮಾತು ಕೇಳಿ
ಡಾಲಿ ಧನಂಜಯ್ ಪುತ್ರನಿಗಾಗಿ ಕಲಘಟಗಿ ತೊಟ್ಟಿಲು: ವಿಶೇಷತೆ ತಿಳಿಸಿದ ಸಾಹುಕಾರ್
ಡಾಲಿ ಧನಂಜಯ್ ಪುತ್ರನಿಗಾಗಿ ಕಲಘಟಗಿ ತೊಟ್ಟಿಲು: ವಿಶೇಷತೆ ತಿಳಿಸಿದ ಸಾಹುಕಾರ್
ಕೈಗಾ ಅಣುಸ್ಥಾವರದ ರಕ್ಷಾ ಕವಚ‌ ಹೊತ್ತು ತರುತ್ತಿದ್ದ ವಾಹನ ಪಲ್ಟಿ
ಕೈಗಾ ಅಣುಸ್ಥಾವರದ ರಕ್ಷಾ ಕವಚ‌ ಹೊತ್ತು ತರುತ್ತಿದ್ದ ವಾಹನ ಪಲ್ಟಿ