ಯೋಧರ ಜತೆ ದೀಪಾವಳಿ: ಜೈಸಲ್ಮೇರ್​ನಲ್ಲಿ ಯೋಧರಿಗೆ ಜೈ ಜೈ ಅನ್ನಲಿರುವ ಪ್ರಧಾನಿ ಮೋದಿ

| Updated By: ಸಾಧು ಶ್ರೀನಾಥ್​

Updated on: Nov 14, 2020 | 9:37 AM

ದೆಹಲಿ: ಪ್ರಧಾನಿ ನರೇಂದ್ರ ಮೋದಿಗೆ ಈ ಬಾರಿಯ ಬೆಳಕಿನ ಹಬ್ಬ ದೀಪಾವಳಿಯನ್ನು ಯೋಧರ ಜತೆ ಆಚರಿಸಲಿದ್ದಾರೆ. ಇಂದು ಜೈಸಲ್ಮೇರ್‌ಗೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ಜೈಸಲ್ಮೇರ್‌ನಲ್ಲಿ ಬಿಎಸ್‌ಎಫ್ ಯೋಧರ ಜತೆ ದೀಪಾವಳಿ ಆಚರಿಸಲಿದ್ದಾರೆ. ಈ ವೇಳೆ ಪ್ರಧಾನಿಗೆ ಸಿಡಿಎಸ್ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಾಣೆ ಸಾಥ್ ನೀಡಲಿದ್ದಾರೆ. ಸತತ ಏಳನೇ ವರ್ಷವೂ ತಮ್ಮ ಸಂಪ್ರದಾಯವನ್ನು ಅನುಸರಿಸಿ ಮೋದಿ ಅವರು ಇಂದು ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಸೈನಿಕರು ಮತ್ತು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧರೊಂದಿಗೆ […]

ಯೋಧರ ಜತೆ ದೀಪಾವಳಿ: ಜೈಸಲ್ಮೇರ್​ನಲ್ಲಿ ಯೋಧರಿಗೆ ಜೈ ಜೈ ಅನ್ನಲಿರುವ ಪ್ರಧಾನಿ ಮೋದಿ
Follow us on

ದೆಹಲಿ: ಪ್ರಧಾನಿ ನರೇಂದ್ರ ಮೋದಿಗೆ ಈ ಬಾರಿಯ ಬೆಳಕಿನ ಹಬ್ಬ ದೀಪಾವಳಿಯನ್ನು ಯೋಧರ ಜತೆ ಆಚರಿಸಲಿದ್ದಾರೆ. ಇಂದು ಜೈಸಲ್ಮೇರ್‌ಗೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ.

ಜೈಸಲ್ಮೇರ್‌ನಲ್ಲಿ ಬಿಎಸ್‌ಎಫ್ ಯೋಧರ ಜತೆ ದೀಪಾವಳಿ ಆಚರಿಸಲಿದ್ದಾರೆ. ಈ ವೇಳೆ ಪ್ರಧಾನಿಗೆ ಸಿಡಿಎಸ್ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಾಣೆ ಸಾಥ್ ನೀಡಲಿದ್ದಾರೆ.

ಸತತ ಏಳನೇ ವರ್ಷವೂ ತಮ್ಮ ಸಂಪ್ರದಾಯವನ್ನು ಅನುಸರಿಸಿ ಮೋದಿ ಅವರು ಇಂದು ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಸೈನಿಕರು ಮತ್ತು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧರೊಂದಿಗೆ ದೀಪಾವಳಿಯನ್ನು ಆಚರಿಸಲಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಹಲವಾರು ಪ್ರದೇಶಗಳಲ್ಲಿ ಪಾಕಿಸ್ತಾನದ ಸೈನಿಕರು ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸುತ್ತಿದ್ದಾರೆ. ದಾಳಿ-ಪ್ರತಿದಾಳಿಯಲ್ಲಿ ಭಾತರದ ನಾಲ್ವರು ಸೈನಿಕರು ಹುತಾತ್ಮರಾಗಿದ್ದು, ಪಾಕಿಸ್ತಾನದ 11 ಸೈನಿಕರು ಮೃತಪಟ್ಟಿದ್ದಾರೆ.