ಇಂದು ಉತ್ತರಾಖಂಡ್​​ಗೆ ಪ್ರಧಾನಿ ಮೋದಿ ಭೇಟಿ; 35 ಪಿಎಸ್​ಎ ಆಮ್ಲಜನಕ ಸ್ಥಾವರಗಳ ಲೋಕಾರ್ಪಣೆ

2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡ್​ಗೆ ಭೇಟಿ ನೀಡಿದ ಮೇಲೆ ಮತ್ತೆ ಆಗಮಿಸಿರಲಿಲ್ಲ. ಮುಂದಿನ ವರ್ಷ ಇಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಆ ದೃಷ್ಟಿಯಿಂದ ಪ್ರಧಾನಿ ಭೇಟಿ ಮಹತ್ವ ಪಡೆದುಕೊಂಡಿದೆ.

ಇಂದು ಉತ್ತರಾಖಂಡ್​​ಗೆ ಪ್ರಧಾನಿ ಮೋದಿ ಭೇಟಿ; 35 ಪಿಎಸ್​ಎ ಆಮ್ಲಜನಕ ಸ್ಥಾವರಗಳ ಲೋಕಾರ್ಪಣೆ
ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ (PM Narendra Modi)ಯವರು ಇಂದು ಉತ್ತರಾಖಂಡ್​ಗೆ ಭೇಟಿ ನೀಡಲಿದ್ದು, ಪಿಎಂ ಕೇರ್ಸ್ ನಿಧಿ​ (PM CARES Fund) ಯಿಂದ ನಿರ್ಮಾಣ ಮಾಡಲಾಗಿರುವ 35 ಪ್ರೆಶರ್​ ಸ್ವಿಂಗ್ ಹೀರಿಕೊಳ್ಳುವಿಕೆಯ ಆಮ್ಲಜನಕ ಸ್ಥಾವರ (35 Pressure Swing Adsorption (PSA) oxygen plants)ಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಕಾರ್ಯಕ್ರಮ ರಿಶಿಕೇಶದಲ್ಲಿರುವ ಏಮ್ಸ್​​ನಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಪ್ರಧಾನಮಂತ್ರಿ ಕಚೇರಿ ಮಾಹಿತಿ ನೀಡಿದೆ.  

ಈ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ನಿನ್ನೆ ಟ್ವೀಟ್ ಮಾಡಿದ್ದರು. ನಾನು ನಾಳೆ (ಅಕ್ಟೋಬರ್​ 7) ದೇವಭೂಮಿ ಉತ್ತರಾಖಂಡ್​ಗೆ ತೆರಳುತ್ತಿದ್ದೇನೆ. ಅಲ್ಲಿ ನಡೆಯಲಿರುವ ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ನಿರ್ಮಾಣವಾಗಿರುವ 35 ಪಿಎಸ್​ಎ ಆಕ್ಸಿಜನ್​ ಸ್ಥಾವರಗಳನ್ನು ಲೋಕಾರ್ಪಣೆ ಮಾಡಲಾಗುವುದು. ಇದೊಂದು ಪ್ರಮುಖ ಆರೋಗ್ಯ ಸೌಕರ್ಯವಾಗಿದ್ದು, ಹೆಚ್ಚಿನ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದಿದ್ದರು.

2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡ್​ಗೆ ಭೇಟಿ ನೀಡಿದ ಮೇಲೆ ಮತ್ತೆ ಆಗಮಿಸಿರಲಿಲ್ಲ. ಮುಂದಿನ ವರ್ಷ ಇಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಆ ದೃಷ್ಟಿಯಿಂದ ಪ್ರಧಾನಿ ಭೇಟಿ ಮಹತ್ವ ಪಡೆದುಕೊಂಡಿದೆ. ಅಂದಹಾಗೆ ಇಂದಿನ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರ ಜತೆ ಕೇಂದ್ರ ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ, ಉತ್ತರಾಖಂಡ ರಾಜ್ಯಪಾಲ ಗುರ್ಮಿತ್​ ಸಿಂಗ್​, ಮುಖ್ಯಮಂತ್ರಿ ಪುಷ್ಕರ್​ ಸಿಂಗ್​ ಧಮಿ ಕೂಡ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭೇಟಿ; ಚಾಮರಾಜನಗರದಲ್ಲಿ ನೂತನ ಆಸ್ಪತ್ರೆ ಉದ್ಘಾಟನೆ

‘ಪುಷ್ಪ’ ಚಿತ್ರದ ಒಂದೇ ಹಾಡಿನಲ್ಲಿ ಡ್ಯಾನ್ಸ್​ ಮಾಡಲು 2 ಕೋಟಿ ರೂ. ಸಂಬಳ ಕೇಳಿದ ನೋರಾ ಫತೇಹಿ

Read Full Article

Click on your DTH Provider to Add TV9 Kannada