ಪ್ರಧಾನಿ ಮೋದಿಗೆ 5 ಕೋಟಿ ಪೋಸ್ಟ್​ಕಾರ್ಡ್​ ಕಳಿಸಲಿರುವ ಬಿಜೆಪಿ; ಹುಟ್ಟುಹಬ್ಬದ ನಿಮಿತ್ತ ಸೇವಾ-ಸಮರ್ಪಣ ಅಭಿಯಾನ

| Updated By: Lakshmi Hegde

Updated on: Sep 05, 2021 | 11:59 AM

PM Narendra Modi: ಪ್ರಧಾನಿ ನರೇಂದ್ರ ಮೋದಿಯವರು 2001ರ ಅಕ್ಟೋಬರ್​ನಲ್ಲಿ ಮೊದಲ ಬಾರಿಗೆ ಗುಜರಾತ್​ ಮುಖ್ಯಮಂತ್ರಿಯಾದರು. ಅಲ್ಲಿಂದಲೂ ಅವರು ಪ್ರಮುಖ ಹುದ್ದೆಯನ್ನೇ ನಿಭಾಯಿಸುತ್ತ ಬಂದಿದ್ದಾರೆ.

ಪ್ರಧಾನಿ ಮೋದಿಗೆ 5 ಕೋಟಿ ಪೋಸ್ಟ್​ಕಾರ್ಡ್​ ಕಳಿಸಲಿರುವ ಬಿಜೆಪಿ; ಹುಟ್ಟುಹಬ್ಬದ ನಿಮಿತ್ತ ಸೇವಾ-ಸಮರ್ಪಣ ಅಭಿಯಾನ
ಪ್ರಧಾನಿ ನರೇಂದ್ರ ಮೋದಿ
Follow us on

ಪ್ರಧಾನಿ ನರೇಂದ್ರ ಮೋದಿ ( PM Narendra Modi) ಯವರ ಜನ್ಮದಿನ ಸಮೀಪಿಸುತ್ತಿದ್ದು, ಈ ಬಾರಿ ಬಿಜೆಪಿ ಬಹುದೊಡ್ಡ ಪ್ಲ್ಯಾನ್​ ಹಾಕಿಕೊಂಡಿದೆ. ಸೆಪ್ಟೆಂಬರ್​ 17ರಂದು ಪ್ರಧಾನಿ ಮೋದಿ 71ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಹಾಗೇ, ರಾಜಕೀಯದಲ್ಲಿ ಉನ್ನತ ಹುದ್ದೆಗೇರಿ 20 ವರ್ಷ ತುಂಬಿದ ಹಿನ್ನೆಲೆಯಲ್ಲಿ ಬಿಜೆಪಿ ಸೇವಾ ಮತ್ತು ಸಮರ್ಪಣ ಅಭಿಯಾನ (Seva and Samarpan Abhiyan) ಹಮ್ಮಿಕೊಳ್ಳಲು ನಿರ್ಧರಿಸಿದೆ. ಈ ಅಭಿಯಾನ ಸೆಪ್ಟೆಂಬರ್​ 17ರಿಂದ ಪ್ರಾರಂಭವಾಗಿ, 20ದಿನಗಳ ಕಾಲ ನಡೆಯಲಿದೆ. ಈ 20ದಿನಗಳ ಅಭಿಯಾನದ ಪ್ರಯುಕ್ತ ಬಿಜೆಪಿ ದೇಶಾದ್ಯಂದ ಸಾಮೂಹಿಕ ಸ್ವಚ್ಛತಾ ಕೆಲಸ ನಡೆಸಲಿದೆ. ಹಾಗೇ ರಕ್ತದಾನ ಶಿಬಿರಗಳಂಥ ಸಮಾಜ ಸೇವಾ ಕಾರ್ಯ ಹಮ್ಮಿಕೊಳ್ಳಲಿದೆ. ಆಚರಣೆ ಕುರಿತಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಈಗಾಗಲೇ ಎಲ್ಲ ಘಟಕಗಳಿಗೂ ನಿರ್ದೇಶನ ನೀಡಿದ್ದಾರೆ. ಉತ್ತರಪ್ರದೇಶ ಬಿಜೆಪಿ 71 ಸ್ಥಳಗಳಲ್ಲಿ ಗಂಗಾನದಿಯನ್ನು ಸ್ವಚ್ಛಗೊಳಿಸಲಿದೆ. 

ಇನ್ನೊಂದು ಬಹುಮುಖ್ಯವಾಗಿ, ದೇಶಾದ್ಯಂತ ಎಲ್ಲ ಬಿಜೆಪಿ ಬೂತ್​ಗಳಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ 5 ಕೋಟಿಗಳಷ್ಟು ಅಂಚೆಪತ್ರ (Postcard) ಕಳಿಸುವ ಮೂಲಕ ಅಭಿನಂದನೆ ಸಲ್ಲಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿಯವರು ತಮ್ಮನ್ನು ತಾವು ಸಾರ್ವಜನಿಕ ಸೇವೆಗೆ ತೊಡಗಿಸಿಕೊಳ್ಳುವುದಲ್ಲದೆ, ಬಿಜೆಪಿ ಪಕ್ಷದ ಪ್ರತಿ ಸದಸ್ಯರೂ ತಮ್ಮನ್ನು ತಾವು ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವಲ್ಲಿ ತುಂಬ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸಲು 5 ಕೋಟಿ ಪೋಸ್ಟ್ ಕಾರ್ಡ್​ ಕಳಿಸಿಕೊಡಲಾಗುವುದು ಎಂದು ಬಿಜೆಪಿ ಹೇಳಿಕೆ ಬಿಡುಗಡೆ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿಯವರು 2001ರ ಅಕ್ಟೋಬರ್​ನಲ್ಲಿ ಮೊದಲ ಬಾರಿಗೆ ಗುಜರಾತ್​ ಮುಖ್ಯಮಂತ್ರಿಯಾದರು. ಅಲ್ಲಿಂದಲೂ ಅವರು ಪ್ರಮುಖ ಹುದ್ದೆಯನ್ನೇ ನಿಭಾಯಿಸುತ್ತ ಬಂದಿದ್ದಾರೆ. ಅವರು ರಾಜಕೀಯದ ಪ್ರಮುಖ ಹುದ್ದೆಯಲ್ಲಿ ಇದ್ದು, 20 ವರ್ಷ ಕಳೆದಿದೆ. ತಮ್ಮನ್ನು ತಾವು ಸಂಪೂರ್ಣವಾಗಿ ಸಾರ್ವಜನಿಕ ಜೀವನಕ್ಕೆ ಅರ್ಪಿಸಿಕೊಂಡಿದ್ದಾರೆ.  ಅವರಿಗೆ ಧನ್ಯವಾದ ಸಲ್ಲಿಸುವ ಸಲುವಾಗಿ  ಬಡವರಿಗೆ ಉಚಿತ ಆಹಾರ ಮತ್ತು ಲಸಿಕೆಯನ್ನು ನೀಡಲಾಗುವುದು. ಅದಕ್ಕಾಗಿ ಅಭಿಯಾನ ನಡೆಸಲಾಗುವುದು ಎಂದು ಪಕ್ಷ ಹೇಳಿದೆ.

ಆರೋಗ್ಯ ಶಿಬಿರಗಳು, ಪ್ರಧಾನಿ ಮೋದಿಯವರ ಜೀವನ, ಸಾಧನೆ ಬಗ್ಗೆ ಪ್ರಸ್ತುತ ಪಡಿಸುವ ಸಮಾರಂಭಗಳು ನಡೆಯಲಿವೆ. ಹಾಗೇ, ಜನಪ್ರತಿನಿಧಿಗಳು ಉಚಿತವಾಗಿ ರೇಷನ್​ ನೀಡಲಿದ್ದಾರೆ. ಕೊವಿಡ್​ 19 ಸೋಂಕಿನಿಂದ ಪಾಲಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳನ್ನು ಗುರುತಿಸಿ, ಅವರಿಗೆ ಪಿಎಂ ಕೇರ್ಸ್​ ಯೋಜನೆಯಡಿ ಸೌಲಭ್ಯ ಒದಗಿಸುವ ಕೆಲಸವನ್ನೂ ಬಿಜೆಪಿ ಕಾರ್ಯಕರ್ತರು ಮಾಡಲಿದ್ದಾರೆ ಎಂದು ಪಕ್ಷ ಹೇಳಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿಯವರು ಪಡೆದ ಉಡುಗೋರೆಗಳನ್ನು  pmmemontos.gov.in. ಸರ್ಕಾರಿ ವೆಬ್​ಸೈಟ್​ನಲ್ಲಿ ಹರಾಜು ಇಡಲಾಗುತ್ತದೆ ಎಂದೂ ಹೇಳಲಾಗಿದೆ.

ಇದನ್ನೂ ಓದಿ: Viral Video: ಸೈಕಲ್ ಹತ್ತಿ ಸ್ಟಂಟ್ ಮಾಡಲು ಹೋಗಿ ಯಡವಟ್ಟಾಯ್ತು; ವಿಡಿಯೋ ಫುಲ್ ವೈರಲ್ ಆಯ್ತು

Coronavirus Cases in India: ಭಾರತದಲ್ಲಿ 42,766 ಹೊಸ ಕೊವಿಡ್ -19 ಪ್ರಕರಣ ಪತ್ತೆ, 308 ಮಂದಿ ಸಾವು