ಸುವೇಂದು ಅಧಿಕಾರಿಗೆ ಸಿಐಡಿಯಿಂದ ಸಮನ್ಸ್​​; 3ವರ್ಷಗಳ ನಂತರ ಸಾವಿನ ಕೇಸ್​ಗೆ ಬಂತು ಜೀವ !

ಸುವೇಂದು ಅಧಿಕಾರಿ ಅಂಗರಕ್ಷಕ ಸುಭಭ್ರತ ಚಕ್ರವರ್ತಿಯವರು ಮೃತಪಟ್ಟಿದ್ದು ಮೂರು ವರ್ಷಗಳ ಹಿಂದೆ. ಆಗ ಸುವೇಂದು ಟಿಎಂಸಿಯಲ್ಲೇ ಇದ್ದರು.

ಸುವೇಂದು ಅಧಿಕಾರಿಗೆ ಸಿಐಡಿಯಿಂದ ಸಮನ್ಸ್​​; 3ವರ್ಷಗಳ ನಂತರ ಸಾವಿನ ಕೇಸ್​ಗೆ ಬಂತು ಜೀವ !
ಸುವೇಂದು ಅಧಿಕಾರಿ
Follow us
TV9 Web
| Updated By: Lakshmi Hegde

Updated on: Sep 05, 2021 | 10:52 AM

ಪಶ್ಚಿಮ ಬಂಗಾಳ ಬಿಜೆಪಿ ನಾಯಕ, ನಂದಿಗ್ರಾಮ ಶಾಸಕ ಸುವೇಂದು ಅಧಿಕಾರಿ (Suvendu Adhikari)  ಗೆ ಸಿಐಡಿ ಸಮನ್ಸ್​ (CID Summoned) ನೀಡಿದೆ. ಸುವೇಂದು ಅಧಿಕಾರಿ ಅಂಗರಕ್ಷಕ ಸುಭಭ್ರತ ಚಕ್ರವರ್ತಿ ಅಸಹಜ ಸಾವಿನ ಸಂಬಂಧ ಈ ಸಮನ್ಸ್​ ನೀಡಲಾಗಿದ್ದು, ಅದರ ಅನ್ವಯ ಸೋಮವಾರ (ನಾಳೆ) ಅವರು ವಿಚಾರಣೆಗೆ ಹಾಜರಾಗಬೇಕಿದೆ. ಚಕ್ರವರ್ತಿ ಸಾವಿನ ತನಿಖೆಯನ್ನು ಸಿಐಡಿಗೆ ವಹಿಸಲಾಗಿದ್ದು, ಅದರ ಭಾಗವಾಗಿ ಜುಲೈನಲ್ಲಿ ಸಿಐಡಿಯ ನಾಲ್ವರು ಅಧಿಕಾರಿಗಳಿರುವ ನಿಯೋಗ ಪುರ್ಬಾ ಮೇದಿನಿಪುರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಸುವೇಂದು ಅಧಿಕಾರಿ ಅಂಗರಕ್ಷಕ ಸುಭಭ್ರತ ಚಕ್ರವರ್ತಿಯವರು ಮೃತಪಟ್ಟಿದ್ದು ಮೂರು ವರ್ಷಗಳ ಹಿಂದೆ. ಆಗ ಸುವೇಂದು ಟಿಎಂಸಿಯಲ್ಲೇ ಇದ್ದರು. ಮಮತಾ ಬ್ಯಾನರ್ಜಿ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು. ಚಕ್ರವರ್ತಿ ಸಾವು ಸಹಜವಾಗಿರಲಿಲ್ಲ. ಆದರೆ ಆಗ ಆ ಪ್ರಕರಣ ದೊಡ್ಡದಾಗಿರಲಿಲ್ಲ. ಪುರ್ಬಾ ಮೇದಿನಿಪುರದ ಕಾಂತಿ ಪೊಲೀಸ್​ ಠಾಣೆಯಲ್ಲಿ , ಸುಭಭ್ರತ ಚರ್ಕವರ್ತಿ ಪತ್ನಿ ಸುಪರ್ಣಾ ಕಂಜಿಲಾಲ್​ ದೂರು ದಾಖಲಿಸಿದ್ದರು. ಆದರೆ ಈ ಬಾರಿಯ ಜುಲೈನಲ್ಲಿ ಸಿಐಡಿ ಅದನ್ನು ಕೈಗೆತ್ತಿಕೊಂಡಿದೆ. ಸುಭಭ್ರತ ಚಕ್ರವರ್ತಿ ಸಾವಿಗೆ ಸಂಬಂಧಪಟ್ಟಂತೆ ಕಾಂಟೈ ಠಾಣೆಯಿಂದ ಅಗತ್ಯ ದಾಖಲೆಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸುಭಭ್ರತ ಚಕ್ರವರ್ತಿ ರಾಜ್ಯ ಸಶಸ್ತ್ರ ಪೊಲೀಸ್​ ಪಡೆಯ ಸಿಬ್ಬಂದಿಯಾಗಿದ್ದರು. ಸುವೇಂದು ಅಧಿಕಾರಿ ಸಂಸದರಾಗಿದ್ದಾಗಿನಿಂದಲೂ ಅವರ ಬೆಂಗಾವಲು ಪಡೆಯಲ್ಲಿ ಇದ್ದರು. 2015ರಲ್ಲಿ ಸಚಿವರಾಗಿದ್ದಾಗಲೂ ಸುಭಭ್ರತ ಅವರೊಂದಿಗೇ ಇದ್ದರು. ಆದರೆ 2018ರ ಅಕ್ಟೋಬರ್​ನಲ್ಲಿ ತಮಗೆ ತಾವೇ ಗುಂಡು ಹೊಡೆದುಕೊಂಡು ಮೃತಪಟ್ಟಿದ್ದರು. ಹಾಗೇ ಸಾಯಲು ಕಾರಣ ಗೊತ್ತಾಗಿರಲಿಲ್ಲ. ನಂತರ ಅವರ ಪತ್ನಿ ದೂರು ದಾಖಲಿಸಿ, ನನ್ನ ಪತಿಯ ಸಾವು ತೀರ ಅಸಹಜ ಎನ್ನಿಸುತ್ತಿದೆ. ತನಿಖೆ ನಡೆಯಬೇಕು ಎಂದಿದ್ದರು.

ಬಿಜೆಪಿ ಅಚ್ಚರಿ 2018ರಲ್ಲೇ ಸುಭಭ್ರತ ಚಕ್ರವರ್ತಿಯವರು ಮೃತಪಟ್ಟಿದ್ದಾರೆ. ಆದರೆ ಈಗ್ಯಾಕೆ ಆ ಪ್ರಕರಣ ಸಿಐಡಿಗೆ ವಹಿಸಲ್ಪಟ್ಟಿದೆ ಅರ್ಥವಾಗುತ್ತಿಲ್ಲ ಎಂದು ಬಿಜೆಪಿ ಅಚ್ಚರಿ ವ್ಯಕ್ತಪಡಿಸಿದೆ. ಸುವೇಂದು ಅಧಿಕಾರಿ ಟಿಎಂಸಿಯಲ್ಲಿದ್ದಾಗ ಪೊಲೀಸ್​ ಸ್ಟೇಶನ್​ಗೆ ಸೀಮಿತವಾಗಿದ್ದ ಕೇಸ್​ ಇದೀಗ ಒಮ್ಮೆಲೆ ಸಿಐಡಿಗೆ ಹೋಗಿದೆ. ಸುವೇಂದು ಅಧಿಕಾರಿ ಟಿಎಂಸಿಯಿಂದ ಬಿಜೆಪಿಗೆ ಬಂದು, ಕಳೆದ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಗೆದ್ದಿದ್ದಾರೆ. ಇದೀಗ ಪಶ್ಚಿಮ ಬಂಗಾಳ ಬಿಜೆಪಿ ಪ್ರತಿಪಕ್ಷ ನಾಯಕರಾಗಿದ್ದಾರೆ.

ಇದನ್ನೂ ಓದಿ: ‘ಉರಿ’ ಸಿನಿಮಾದ ಚೆಲುವೆ ಯಾಮಿ ಗೌತಮ್​ ಫಿಟ್ನೆಸ್​ ಹಿಂದಿದೆ ಎರಡು ಗುಟ್ಟುಗಳು​

Viral Video: ಕ್ಯೂಟ್ ಸ್ಮೈಲ್ ಮಾಡುತ್ತಾ ಮೇಕೆ ಜೊತೆ ಸೆಲ್ಫಿ ತೆಗೆಯೋಕೆ ಹೋದ ಯುವತಿಯ ಫಜೀತಿ ನೋಡಿ

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?