ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್​ರ 71ನೇ ಪುಣ್ಯತಿಥಿ; ಟ್ವೀಟ್ ಮೂಲಕ ಗೌರವ ಸಲ್ಲಿಸಿ, ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿ

| Updated By: Lakshmi Hegde

Updated on: Dec 15, 2021 | 1:23 PM

Sardar Vallabhbhai Patel Death Anniversary: ಭಾರತ ಬ್ರಿಟೀಷ್​ ಆಡಳಿತದಿಂದ ಸ್ವಾತಂತ್ರ್ಯ ಪಡೆಯುವುದಕ್ಕೂ ಮೊದಲು ಮತ್ತು ನಂತರ 500ಕ್ಕೂ ಹೆಚ್ಚು ರಾಜಪ್ರಭುತ್ವ ರಾಜ್ಯಗಳ ಏಕೀಕರಣ ಹೋರಾಟದಲ್ಲಿ ಸರ್ದಾರ್​ ವಲ್ಲಭಬಾಯಿ ಅವರು ಮುಂಚೂಣಿಯಲ್ಲಿದ್ದರು.

ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್​ರ 71ನೇ ಪುಣ್ಯತಿಥಿ; ಟ್ವೀಟ್ ಮೂಲಕ ಗೌರವ ಸಲ್ಲಿಸಿ, ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿ
ಸರ್ದಾರ್​ ವಲ್ಲಭಬಾಯಿ ಪಟೇಲ್​
Follow us on

ಭಾರತದ ಮೊದಲ ಗೃಹ ಮಂತ್ರಿ, ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿರುವ ಸರ್ದಾರ್ ವಲ್ಲಭಬಾಯಿ ಪಟೇಲ್​​ ಅವರ 71ನೇ ಪುಣ್ಯತಿಥಿ ಇಂದು. ಈ ಹೊತ್ತಲ್ಲಿ ಅವರಿಗೆ ಗೌರವ ಸಲ್ಲಿಸಿ ಪ್ರಧಾನಿ ಮೋದಿ ಮತ್ತಿತರ ಗಣ್ಯರು ಟ್ವೀಟ್ ಮಾಡಿದ್ದಾರೆ. ಸರ್ದಾರ್ ವಲ್ಲಭಬಾಯಿ ಪಟೇಲ್​​ ಅವರ ಪುಣ್ಯತಿಥಿಯಂದು ಅವರನ್ನು ಸ್ಮರಿಸುತ್ತಿದ್ದೇನೆ. ಭಾರತಕ್ಕೆ ಅವರು ನೀಡಿರುವ ಸೇವೆ, ಅವರ ಆಡಳಿತ ಕೌಶಲ, ಇಡೀ ದೇಶವನ್ನು ಒಟ್ಟುಗೂಡಿಸುವ ಅವರ ಪ್ರಯತ್ನಗಳಿಗೆ ನಾವು ಸದಾ ಕೃತಜ್ಞರಾಗಿರಬೇಕು ಎಂದು ಪ್ರಧಾನಿ ಹೇಳಿದ್ದಾರೆ.

ಭಾರತ ಬ್ರಿಟೀಷ್​ ಆಡಳಿತದಿಂದ ಸ್ವಾತಂತ್ರ್ಯ ಪಡೆಯುವುದಕ್ಕೂ ಮೊದಲು ಮತ್ತು ನಂತರ 500ಕ್ಕೂ ಹೆಚ್ಚು ರಾಜಪ್ರಭುತ್ವ ರಾಜ್ಯಗಳ ಏಕೀಕರಣ ಹೋರಾಟದಲ್ಲಿ ಸರ್ದಾರ್​ ವಲ್ಲಭಬಾಯಿ ಅವರು ಮುಂಚೂಣಿಯಲ್ಲಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲೂ ಕೂಡ ಮುಂಚೂಣಿಯಲ್ಲಿದ್ದ ನಾಯಕರು. ಕಾಂಗ್ರೆಸ್​ ಪಕ್ಷದ ನಾಯಕರಾಗಿದ್ದ ಅವರು ವೃತ್ತಿಯಲ್ಲಿ ವಕೀಲರಾಗಿದ್ದರು. ಭಾರತದ ಮೊದಲ ಗೃಹ ಸಚಿವರಾಗಿದ್ದರು ಮತ್ತು ಉಪಪ್ರಧಾನಮಂತ್ರಿಯಾಗಿದ್ದರು. ಗುಜರಾತ್​​ನ ನಾದಿಯಾದ್​​ನಲ್ಲಿ 1875ರ ಅಕ್ಟೋಬರ್​ 31ರಂದು ಜನಿಸಿದ ಸರ್ದಾರ್​ ವಲ್ಲಭಬಾಯಿ ಪಟೇಲ್​, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಅಲ್ಲಿಯೇ ಮುಗಿಸಿದ್ದರು.  ಬ್ರಿಟಿಷರ ವಿರುದ್ಧ ಯಾವುದೇ ಸತ್ಯಾಗ್ರಹ, ಪ್ರತಿಭಟನೆಯಿರಲಿ, ಅದರಲ್ಲಿ ಪಟೇಲ್​ ಸದಾ ಮುಂದಿರುತ್ತಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧಿಯವರ ದಾರಿಯನ್ನೇ ಅನುಸರಿಸಿದ್ದ, ಅವರು ತಮ್ಮ ರಾಜಕೀಯ ಜೀವನದಲ್ಲೂ ಅದನ್ನು ಅಳವಡಿಸಿಕೊಂಡಿದ್ದರು. ಅವರ ಹುಟ್ಟಿದ ದಿನ ಅಂದರೆ ಅಕ್ಟೋಬರ್​ 31ನ್ನು ರಾಷ್ಟ್ರಾದ್ಯಂತ ಏಕತಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಇದನ್ನೂ ಕೂಡ ಪ್ರಧಾನಿ ಮೋದಿ ಸರ್ಕಾರವೇ ಪ್ರಾರಂಭ ಮಾಡಿದೆ. ಇಂದು ಅವರ ಪುಣ್ಯತಿಥಿಯಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್​, ಸಾರಿಗೆ ಸಚಿವ ನಿತಿನ್ ಗಡ್ಕರಿ, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಇತರರು ಟ್ವೀಟ್ ಮೂಲಕ ಗೌರವ ಸಲ್ಲಿಸಿ, ಮಹಾನ್ ನಾಯಕನನ್ನು ಸ್ಮರಿಸಿದ್ದಾರೆ.

ಇದನ್ನೂ ಓದಿ: Semiconductor manufacturing PLI: ಸೆಮಿಕಂಡಕ್ಟರ್ ಉತ್ಪಾದನೆಗೆ ಕೇಂದ್ರದಿಂದ 76 ಸಾವಿರ ಕೋಟಿ ರೂ.