ಮುಂಬೈ ನಗರದ ಎರಡು ಕಡೆಗಳಲ್ಲಿ ಸಂಭವಿಸಿದ ಗೋಡೆ ಕುಸಿತ ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 18, 2021 | 7:26 PM

ಮುಂಬೈ:  ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮುಂಬೈ ಮಹಾನಗರದ ವಿಕ್ರೋಲಿ ಮತ್ತು ಚೆಂಬೂರ್​ನಲ್ಲಿ ಗೋಡೆಗಳು ಕುಸಿದು ಸಂಭವಿಸಿರುವ ಜೀವಹಾನಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಟ್ವೀಟ್​ಗಳ ಮೂಲಕ ತಮ್ಮ ದುಃಖ ವುಕ್ತಪಡಿಸಿರುವ ಪ್ರಧಾನಿಗಳು ಶೋಕಸಾಗರಲ್ಲಿ ಮುಳುಗಿರುವ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ ಮತ್ತು ಘಟನೆಯಲ್ಲಿ ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ‘ಮುಂಬೈ ನಗರದ ಚೆಂಬೂರ್ ಮತ್ತು ವಿಕ್ರೋಲಿಯಲ್ಲಿ ಗೋಡೆ ಕುಸಿದು ಪ್ರಾಣಹಾನಿ ಸಂಭವಿಸುರುವುದು ಕೇಳಿ ದುಃಖವಾಯಿತು. ಈ ಸಂಕಟದ ಸಮಯದಲ್ಲಿ ದುಃಖದ ಕಡಲಲ್ಲಿ ಮುಳುಗಿರುವ ಮೃತ ವ್ಯಕ್ತಿಗಳ […]

ಮುಂಬೈ ನಗರದ ಎರಡು ಕಡೆಗಳಲ್ಲಿ ಸಂಭವಿಸಿದ ಗೋಡೆ ಕುಸಿತ ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ
ಮುಂಬೈ ಗೋಡೆ ಕುಸಿತ ದುರಂತ
Follow us on

ಮುಂಬೈ:  ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮುಂಬೈ ಮಹಾನಗರದ ವಿಕ್ರೋಲಿ ಮತ್ತು ಚೆಂಬೂರ್​ನಲ್ಲಿ ಗೋಡೆಗಳು ಕುಸಿದು ಸಂಭವಿಸಿರುವ ಜೀವಹಾನಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಟ್ವೀಟ್​ಗಳ ಮೂಲಕ ತಮ್ಮ ದುಃಖ ವುಕ್ತಪಡಿಸಿರುವ ಪ್ರಧಾನಿಗಳು ಶೋಕಸಾಗರಲ್ಲಿ ಮುಳುಗಿರುವ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ ಮತ್ತು ಘಟನೆಯಲ್ಲಿ ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

‘ಮುಂಬೈ ನಗರದ ಚೆಂಬೂರ್ ಮತ್ತು ವಿಕ್ರೋಲಿಯಲ್ಲಿ ಗೋಡೆ ಕುಸಿದು ಪ್ರಾಣಹಾನಿ ಸಂಭವಿಸುರುವುದು ಕೇಳಿ ದುಃಖವಾಯಿತು. ಈ ಸಂಕಟದ ಸಮಯದಲ್ಲಿ ದುಃಖದ ಕಡಲಲ್ಲಿ ಮುಳುಗಿರುವ ಮೃತ ವ್ಯಕ್ತಿಗಳ ಕುಟುಂಬ ಸದಸ್ಯರ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ. ಘಟನೆಯಲ್ಲಿ ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ,’ ಎಂದು ಪ್ರಧಾನಿಗಳು ಟ್ವೀಟ್​ನಲ್ಲಿ ಹೇಳಿದ್ದಾರೆ.

ತಮ್ಮ ಮತ್ತೊಂದು ಟ್ವೀಟ್​ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತ ವ್ಯಕ್ತಿಗಳ ತಲಾ ಕುಟುಂಬದ ಸದಸ್ಯರಿಗೆ 2ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ರೂ. 50,000 ಪರಿಹಾರ ನೀಡಲಾಗುವುದೆಂದು ಹೇಳಿದ್ದಾರೆ

‘ತಲಾ ಎರಡು ಲಕ್ಷ ರೂಪಾಯಿಗಳ ಪರಿಹಾರವನ್ನು ಗೋಡೆ ಕುಸಿತ ದುರಂತದಲ್ಲಿ ಮಡಿದವರ ಕುಟುಂಬದ ಸದಸ್ಯರಿಗೆ ಮತ್ತು ಗಾಯಗೊಂಡವರಿಗೆ ರೂ 50,000 ಪರಿಹಾರವನ್ನು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ನೀಡಲಾಗುವುದು,’ ಎಂದು ಪ್ರಧಾನಿಗಳು ಟ್ವೀಟ್​ ಮಾಡಿದ್ದಾರೆ.

ಶನಿವಾರದಿಂದ ಮುಂಬೈ ಮಹಾನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಗೋಡೆ ಕುಸಿತದ ಎರಡು ಪ್ರಕರಣಗಳು ಜರುಗಿದ್ದು ಎರಡು ಕಡೆಗಳಲ್ಲೂ ಪ್ರಾಣಹಾನಿ ಸಂಭವಿಸಿದೆ. ಮೂಲಗಳ ಪ್ರಕಾರ ಚೆಂಬೂರ್​ನಲ್ಲಿ 15 ಮತ್ತು ವಿಕ್ರೋಲಿಯಲ್ಲಿ 9 ಜನ ಸಾವಿಗೀಡಾಗಿದ್ದಾರೆ.

ಭೂಕುಸಿತದಿಂದ ಗೋಡೆಗಳು ಕುಸಿದಿವೆ ಎಂದು ರಕ್ಷಣಾ ಕಾರ್ಯದಲ್ಲಿ ತೊಡಗಿರುವ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆಯ ಅಧಿಕಾರಿಗಳು ಹೇಳಿದ್ದಾರೆ. ರಕ್ಷಣಾ ಕಾರ್ಯ ಈಗಲೂ ಜಾರಿಯಲ್ಲಿದೆ. ಗಾಯಗೊಂಡವರನ್ನು ಆಸ್ಪತ್ರಗಳಿಗೆ ಸ್ಥಳಾಂತರಿಸಲಾಗಿದೆ.

ಶನಿವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ವಿಕ್ರೋಲಿಯಲ್ಲಿ ಬೆಳಗಿನ ಜಾವ ಸುಮಾರು ಮೂರು ಗಂಟೆಗೆ 5 ಗುಡಿಸಿಲುಗಳು ಕುಸಿದು 9 ಗುಡಿಸಲುವಾಸಿಗಳು ಮರಣವನ್ನಪ್ಪಿದರು ಎಂದು ಬೃಹನ್ಮುಂಬಯಿ ಮುನಿಸಿಪಲ್ ಕಾರ್ಪೋರೇಷನ್ ಅಧಿಕಾರಿಯೊಬ್ಬರು ತಿಳಿಸಿದರು. ಗಾಯಗೊಂಡಿರುವ ಇಬ್ಬರು ವ್ಯಕ್ತಿಗಳನ್ನು ಹತ್ತಿರದ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ಅವರು ಹೇಳಿದರು.

ಕಳೆದ ರಾತ್ರಿ ಸುರಿದ ಮಳೆ, ಮುಂಬೈ ನಿವಾಸಿಗಳಿಗೆ ಜುಲೈ 26, 2005 ರಂದು 24 ಗಂಟೆಗಳಲ್ಲಿ ಸುರಿದ 944 ಮಿಮಿ ಮಳೆಯನ್ನು ನೆನಪಿಸಿದೆ.

ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆಯು (ಐಎಮ್​ಡಿ) ರೆಡ್​ ಅಲರ್ಟ್ ಘೋಷಿಸಿದೆ ಎಂದು ಬಿಎಮ್​ಸಿ ಅಧಿಕಾರಿ ಹೇಳಿದರು.

ಇದನ್ನೂ ಓದಿ: Mumbai Rains: ಮುಂಬೈನಲ್ಲಿ ಭಾರೀ ಮಳೆಯಿಂದ ಕೆರೆಯಾದ ರಸ್ತೆಗಳು; ಬಸ್, ರೈಲು ಸಂಚಾರ ಅಸ್ಯವ್ಯಸ್ತ