ಬಕ್ರೀದ್​ಗಾಗಿ ಕೊವಿಡ್-19 ನಿಯಮಗಳನ್ನು ಸಡಲಿಸಿದ ಕೇರಳ ಸರ್ಕಾರದ ನಿರ್ಧಾರ ಆಘಾತಕರವೆಂದ ಐಎಮ್ಎ

ಲಾಕ್​ಡೌನ್ ಒಳಗೊಂಡ ನಿರ್ಬಂಧಗಳು, ಎಷ್ಟೇ ಸೀಮಿತಗೊಳಿಸಿದರೂ ಬೃಹತ್ ಪ್ರಮಾಣದ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗನ್ನು ಸೃಷ್ಟಿಸುತ್ತಿದೆ ಎಂದು ವಿಜಯನ್ ಹೇಳಿದ್ದು ಈ ಕಾರಣಕ್ಕಾಗೇ ಕೋವಿಡ್-19 ದೈನಂದಿನ ಪ್ರಕರಣಗಳನ್ನು ಪರಿಶೀಲಿಸಿ ಕೆಲ ಸಡಲಿಕೆಗಳನ್ನು ಪ್ರಕಟಿಸಲಾಗಿದೆ ಎಂದಿದ್ದಾರೆ.

ಬಕ್ರೀದ್​ಗಾಗಿ ಕೊವಿಡ್-19 ನಿಯಮಗಳನ್ನು ಸಡಲಿಸಿದ ಕೇರಳ ಸರ್ಕಾರದ ನಿರ್ಧಾರ ಆಘಾತಕರವೆಂದ ಐಎಮ್ಎ
ಸಾಂದರ್ಭಿಕ ಚಿತ್ರ
TV9kannada Web Team

| Edited By: Arun Belly

Jul 18, 2021 | 9:17 PM

ನವದೆಹಲಿ: ಈದ್-ಅಲ್-ಅದಾ (ಬಕ್ರೀದ್) ಪ್ರಯುಕ್ತ ಕೊವಿಡ್-19 ಸುರಕ್ಷತಾ ನಿಯಮಗಳನ್ನು ಮೂರು ದಿನಗಳ ಆವಧಿಗೆ ಸಡಲಿಸಿರುವ ಕೇರಳ ಸರ್ಕಾರದ ನಿರ್ಧಾರದ ವಿರುದ್ಧ ಭಾರತದ ಉನ್ನತ ವೈದ್ಯಕೀಯ ಸಂಸ್ಥೆ ಇಂಡಿಯನ್ ಮೆಡಿಕಲ್ ಆಸೋಸಿಯೇಷನ್ (ಐಎಮ್​ಎ) ಎಚ್ಚರಿಕೆಯನ್ನು ನೀಡಿದೆ. ಮೂರನೇ ಅಲೆ ಭಾರತವನ್ನು ಅಪ್ಪಳಿಸುವ ಹಿನ್ನೆಲೆಯಲ್ಲಿ ನಿಸ್ವಾರ್ಥ ಮನೋಭಾವದಿಂದ ಕೇರಳ ಸರ್ಕಾರವು ತನ್ನ ಆದೇಶವನ್ನು ಹಿಂಪಡೆಯದಿದ್ದರೆ ತನಗೆ ಸುಪ್ರೀಮ್ ಕೋರ್ಟ್​ ಕದ ತಟ್ಟದೆ ಬೇರೆ ದಾರಿಯಿರುವುದಿಲ್ಲ ಎಂದು, ಐ ಎಮ್ ​ಎ ಹೇಳಿದೆ.

ಕೇರಳದಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಳವಳ ವ್ಯಕ್ತಪಡಿಸಿ ಪ್ರತ್ಯೇಕವಾಗಿ ಎಚ್ಚರಿಸಿದ್ದಾರೆ ಮತ್ತು ಅನೇಕ ರಾಜ್ಯಗಳು ಪುಣ್ಯಕ್ಷೇತ್ರಗಳ ಯಾತ್ರೆಗಳನ್ನು ರದ್ದು ಮಾಡಿದ್ದರೂ ಕೇರಳ ಸರ್ಕಾರ ಮಾತ್ರ ಕೊವಿಡ್ ನಿಯಮಗಳನ್ನು ಬಕ್ರೀದ್​ಗಾಗಿ ಸಡಿಲಗೊಳಿಸಿ ಆದೇಶ ಹೊರಡಿಸಿರುವುದು, ಆಘಾತವನ್ನುಂಟು ಮಾಡಿದೆ ಎಂದು ಐಎಮ್​ಎ ಹೇಳಿದೆ.

‘ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶ ಮತ್ತು ಉತ್ತಾರಾಖಂಡ ಮೊದಲಾದ ಉತ್ತರ ಭಾರತದ ರಾಜ್ಯಗಳು ಸಾರ್ವಜನಿಕ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಚನಾತ್ಮಕ ದೃಷ್ಟಿಕೋನದೊಂದಿಗೆ ಸಾಂಪ್ರದಾಯಿಕ ಪುಣ್ಯ ಯಾತ್ರೆಗಳನ್ನು ರದ್ದು ಮಾಡಿದ್ದರೆ, ಕೇರಳ ಈ ರಾಜ್ಯಗಳಿಗೆ ವ್ಯತಿರಿಕ್ತವಾದ ನಿಲುವು ತಳೆದು ನಿಯಮಗಳನ್ನು ಸಡಲಿಸಿರುವುದು ನಿಜಕ್ಕೂ ದುರಂತ,’ ಎಂದು ತಾನು ಬಿಡುಗಡೆ ಮಾಡಿರುವ ಹೇಳಿಕೆಯೊಂದರಲ್ಲಿ ಐ ಎಮ್ ​ಎ ತಿಳಿಸಿದೆ.

ಬುಧವಾರದಂದು ಆಚರಿಸಲಾಗುವ ಬಕ್ರೀದ್ ಪ್ರಯುಕ್ತ ರವಿವಾರದಿಂದ ಆರಂಭಗೊಂಡು ಮೂರು ದಿನಗಳವರೆಗೆ (ಬುಧವಾರದವರಗೆ) ಲಾಕ್​ಡೌನ್ ನಿಯಮಗಳನ್ನು ಕೇರಳ ಸರ್ಕಾರ ತೆರವುಗೊಳಿಸಿದೆ. ಈ ಮೂರು ದಿನಗಳವರಗೆ ರಾಜ್ಯದಲ್ಲಿ ಬಟ್ಟೆ ಅಂಗಡಿಗಳು, ಚಪ್ಪಲಿ, ಆಭರಣ, ಗಿಫ್ಟ್ ಸಾಮಾನುಗಳ ಅಂಗಡಿಗಳು, ಗೃಹೋಪಯೋಗಿ ಸಾಧನ ಮತ್ತು ಎಲೆಕ್ಟ್ರಾನಿಕ್ಸ್ ಮಳಿಗೆಗಳು ಗ್ರಾಹಕರಿಗಾಗಿ ತೆರೆದಿರುತ್ತವೆ.

ಕೇರಳ ಸರ್ಕಾರದ ನಿರ್ಧಾರ ಸಾಮಾಜಿಕ ಜಾಲತಾಣಗಳಲ್ಲಿ ಗಂಭೀರ ಸ್ವರೂಪದ ಚರ್ಚೆಗೆ ಗ್ರಾಸವಾಗಿದೆ. ಕನ್ವರ್ ಯಾತ್ರೆಯನ್ನು ರದ್ದು ಮಾಡಿದ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳ ನಿರ್ಧಾರವನ್ನು ಕೇರಳದ ನಿರ್ಧಾರದೊಂದಿಗೆ ತುಲನೆ ಮಾಡಲಾಗುತ್ತಿದೆ.

ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ  ಅವರು ಕೇರಳ ಸರ್ಕಾರ ನಿರ್ಧಾರವನ್ನು ತಮ್ಮ ಟ್ವೀಟ್​ನಲ್ಲಿ ಟೀಕಿಸಿ ಕನ್ವರ್ ಯಾತ್ರೆ ತಪ್ಪು ಅನ್ನುವುದಾದರೆ, ಬಕ್ರೀದ್ ಹಬ್ಬದ ಸಾರ್ವಜನಿಕ ಅಚರಣೆಯೂ ತಪ್ಪು ಎಂದಿದ್ದಾರೆ.

ಬಕ್ರೀದ್​ಗಾಗಿ ವಿನಾಯಿತಿಗಳೊಂದಿಗೆ, ಸಿನಿಮಾ ಚಿತ್ರೀಕರಣ ಮತ್ತು ದೇವಸ್ಥಾನಗಳಿಗೆ ಭೇಟಿ ನೀಡುವ ವಿಷಯಗಳಿಗೂ ಕೇರಳ ಸರ್ಕಾರ ಸಡಲಿಕೆ ಘೋಷಿಸಿದೆ. ಸದರಿ ವಿನಾಯಿತಿಗಳನ್ನು ಪ್ರಕಟಿಸಿದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇರಳ ಈಗ ಎದುರಿಸುತ್ತಿರುವ ಗಂಭೀರ ಸ್ಥಿತಿಯಿಂದ ಹೊರಬರಬೇಕಾದರೆ ನಿಯಮಗಳು ಜಾರಿಯಲ್ಲಿರಬೇಕು ಅಂತಲೂ ಹೇಳಿದರು.

ಲಾಕ್​ಡೌನ್ ಒಳಗೊಂಡ ನಿರ್ಬಂಧಗಳು, ಎಷ್ಟೇ ಸೀಮಿತಗೊಳಿಸಿದರೂ ಬೃಹತ್ ಪ್ರಮಾಣದ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗನ್ನು ಸೃಷ್ಟಿಸುತ್ತಿದೆ ಎಂದು ವಿಜಯನ್ ಹೇಳಿದ್ದು ಈ ಕಾರಣಕ್ಕಾಗೇ ಕೋವಿಡ್-19 ದೈನಂದಿನ ಪ್ರಕರಣಗಳನ್ನು ಪರಿಶೀಲಿಸಿ ಕೆಲ ಸಡಲಿಕೆಗಳನ್ನು ಪ್ರಕಟಿಸಲಾಗಿದೆ ಎಂದಿದ್ದಾರೆ.

ಶನಿವಾರದಂದು 16,148 ಹೊಸ ಕೋವಿಡ್-19 ಪ್ರಕರಣಗಳು ಮತ್ತು 114 ಸಾವುಗಳು ಕೇರಳದಲ್ಲಿ ವರದಿಯಾಗಿವೆ. ರಾಜ್ಯದಲ್ಲಿ ಟೆಸ್ಟ್​ ಪಾಸಿಟಿವಿಟಿ ದರ ಶೇಕಡಾ 10.76 ರಷ್ಟಿದೆ. ದೇಶವನ್ನೇ ತತ್ತರಿಸುವಂತೆ ಮಾಡಿದ ಎರಡನೇ ಅಲೆ ಎಲ್ಲ ಕಡೆ ಪೂರ್ತಿಯಾಗಿ ಇಳಿಮುಖಗೊಂಡಿದ್ದರೂ ಕೇರಳ ಮತ್ತು ಈಶಾನ್ಯ ಭಾರತದ ರಾಜ್ಯಗಳಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆ.

ಇದನ್ನೂ ಓದಿ: Bakrid 2021: ಬಕ್ರೀದ್ ನಿಮಿತ್ತ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ; ಮಸೀದಿಗಳಲ್ಲಿ 50 ಜನರಿಗಷ್ಟೇ ಪ್ರಾರ್ಥನೆಗೆ ಅನುಮತಿ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada