ಸಂಸತ್ ಮುಂಗಾರು ಅಧಿವೇಶನ ಇಂದಿನಿಂದ ಆರಂಭ; ಸರಕಾರದ ವಿರುದ್ಧ ಸವಾರಿಗೆ ಪ್ರತಿಪಕ್ಷಗಳು ಸಜ್ಜು

Parliament Monsoon Session 2021; ಕೊರೊನಾ ಆತಂಕದ ನಡುವೆಯೇ ಸಂಸತ್‌ ಮುಂಗಾರು ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಹಲವು ವಿಷಯಗಳಲ್ಲಿ ಸರಕಾರದ ವಿರುದ್ಧ ಸವಾರಿಗೆ ಪ್ರತಿಪಕ್ಷಗಳು ಸಜ್ಜಾಗಿರುವುದರಿಂದ ಮೊದಲ ದಿನದಿಂದಲೇ ಕಲಾಪ ಕಾವೇರುವ ಸಾಧ್ಯತೆಯಿದೆ. ಇದರ ನಡುವೆ ರೈತ ಸಂಘಟನೆಗಳು ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಲು ಸಜ್ಜಾಗಿವೆ.

ಸಂಸತ್ ಮುಂಗಾರು ಅಧಿವೇಶನ ಇಂದಿನಿಂದ ಆರಂಭ; ಸರಕಾರದ ವಿರುದ್ಧ ಸವಾರಿಗೆ ಪ್ರತಿಪಕ್ಷಗಳು ಸಜ್ಜು
ಸಂಸತ್ ಭವನ (ಸಾಂದರ್ಭಿಕ ಚಿತ್ರ)
TV9kannada Web Team

| Edited By: Ayesha Banu

Jul 19, 2021 | 7:42 AM

ದೆಹಲಿ: ಕೊರೊನಾ ಆತಂಕದ ನಡುವೆಯೇ ಸಂಸತ್ ಮುಂಗಾರು ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಮಾನ್ಸೂನ್ ಅಧಿವೇಶನದಲ್ಲಿ ಅನೇಕ ಮಹತ್ವದ ಮಸೂದೆಗಳ ಮಂಡಿಸಲಿದೆ. ಪಿಆರ್‌ಎಸ್ ಲೆಜಿಸ್ಲೇಟೀವ್ ಪ್ರಕಾರ, 38 ಮಸೂದೆಗಳು ಸಂಸತ್‌ನಲ್ಲಿ ಅಂಗೀಕಾರಕ್ಕೆ ಪೆಂಡಿಂಗ್ ಇವೆ. ಇವುಗಳ ಪೈಕಿ 9 ಮಸೂದೆಗಳು ಪರಿಗಣಿಸಿ, ಅಂಗೀಕಾರಕ್ಕೆ ಪೆಂಡಿಂಗ್ ಇವೆ. ಇನ್ನೂ 17 ಮಸೂದೆಗಳು ಮಂಡನೆಯಾಗಬೇಕಿದೆ. ಹೊಸ ವಿಧೇಯಕಗಳ ಪೈಕಿ ಮೂರು ಇತ್ತೀಚೆಗೆ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾದ ವಿಧೇಯಕಗಳಾಗಿವೆ. 6 ವಾರಗಳೊಳಗೆ ಸದನದ ಅನುಮೋದನೆ ಪಡೆಯಬೇಕಿದೆ. ಅಗತ್ಯ ರಕ್ಷಣೆ ಸೇವಾ ವಿಧೇಯಕ, ರಾಷ್ಟ್ರ ರಾಜಧಾನಿ ಹಾಗೂ ಅಕ್ಕಪಕ್ಕದ ಪ್ರದೇಶಗಳಲ್ಲಿ ವಾಯು ಗುಣಮಟ್ಟ ನಿರ್ವಹಣೆ ಆಯೋಗ ವಿಧೇಯಕ ಸೇರಿ ಹಲವು ಹೊಸ ವಿಧೇಯಕಗಳನ್ನು ಮಂಡಿಸಲಾಗುತ್ತದೆ.

ಸರಕಾರ ವಿರುದ್ದ ಸಮರಕ್ಕೆ ಪ್ರತಿಪಕ್ಷಗಳು ಸನ್ನದ್ಧ ಮುಂಗಾರು ಅಧಿವೇಶನದ ಮೊದಲ ದಿನವೇ ಕಾವೇರುವ ಸಾಧ್ಯತೆ ಇದೆ. ತೈಲ ಬೆಲೆ ಏರಿಕೆ, ಕೃಷಿ ಕಾಯಿದೆಗಳು, ಕೊರೊನಾ 2ನೇ ಅಲೆಯಲ್ಲಿ ಉಂಟಾದ ಸಮಸ್ಯೆಗಳು, ರಾಜ್ಯಗಳಲ್ಲಿ ಲಸಿಕೆ ಕೊರತೆ ಸಮಸ್ಯೆ ಸೇರಿ ಹಲವು ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ಕೇಂದ್ರ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಜ್ಜಾಗಿವೆ. ಅಲ್ಲದೆ, ಶತಾಯಗತಾಯ ಕೇಂದ್ರ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು ಎಂದು ಪ್ರತಿಪಕ್ಷಗಳು ನಿರ್ಧರಿಸಿದ್ದು, ಸಂಸತ್ತಿನ ಉಭಯ ಸದನಗಳಲ್ಲಿ ರೈತರ ಸಮಸ್ಯೆಗಳ ಕುರಿತು ನಿಲುವಳಿ ಮಂಡಿಸಲು ಮುಂದಾಗಿವೆ.

ಇನ್ನು ಲೋಕಸಭಾ ಸದಸ್ಯರ ಪೈಕಿ 444 ಮಂದಿ ಕೊರೊನಾ ಲಸಿಕೆ ಪಡೆದಿದ್ದಾರೆ. ರಾಜ್ಯಸಭಾ ಸದಸ್ಯರ ಪೈಕಿ 218 ಮಂದಿ ಕೊರೊನಾ ಲಸಿಕೆ ಪಡೆದಿದ್ದಾರೆ. ಹೀಗಾಗಿ ಈ ಬಾರಿ ಬೆಳಿಗ್ಗೆಯಿಂದ ಸಂಜೆಯವರೆಗೆ ಎರಡು ಸದನಗಳು ಪ್ರತೇಕವಾಗಿ ಮಾಮೂಲಿಯಂತೆ ನಡೆಯಲಿವೆ. ಕಳೆದ ಬಾರಿಯಂತೆ ಬೆಳಿಗ್ಗೆಯೊಂದು ಸದನ, ಸಂಜೆಯೊಂದು ಸದನದ ಕಲಾಪ ನಡೆಯಲ್ಲ.

ಸದನದ ಒಳಗೆ ಪ್ರತಿಪಕ್ಷಗಳು ಹೋರಾಟ ನಡೆಸಿದ್ರೆ. ಹೊರಗೆ ರೈತರು ಪ್ರತಿಭಟನೆ ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಕೇಂದ್ರ ಸರ್ಕಾರ ತಂದಿರುವ 3 ಕೃಷಿ ಕಾಯ್ದೆ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನಗಳು ಇದೀಗ ಮುಂಗಾರು ಅಧಿವೇಶನ ಟಾರ್ಗೆಟ್ ಮಾಡಿಕೊಂಡಿದ್ದಾರೆ. ಕಳೆದ ಬಾರಿ ಟ್ರಾಕ್ಟರ್ ರ್ಯಾಲಿ ಆಯೋಜಿಸಿ ಗಲಭೆಗೆ ಕಾರಣವಾಗಿದ್ದ ರೈತ ಸಂಘಟನೆಗಳು ಇದೀಗ ಸಂಸತ್ ಹೊರಭಾಗದಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ಜುಲೈ 22 ರಿಂದ ಪ್ರತಿಭಟನೆ ಆರಂಭಿಸಲು ಭಾರತೀಯ ಕಿಸಾನ್ ಯೂನಿಯನ್ ಸಂಘಟದ ಮುಖಂಡ ರಾಕೇಶ್ ಟಿಕಾಯತ್ ಕರೆ ನೀಡಿದ್ದಾರೆ.

ಇದನ್ನೂ ಓದಿ: ಮುಂಗಾರು ಅಧಿವೇಶನ ನಡೆಯುವ ಎಲ್ಲ ದಿನ ಸಂಸತ್ತಿನ ಎದುರು ರೈತರ ಧರಣಿ: ಸಂಯುಕ್ತ ಕಿಸಾನ್ ಮೋರ್ಚಾ ಘೋಷಣೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada