ಮುಂಗಾರು ಅಧಿವೇಶನ ನಡೆಯುವ ಎಲ್ಲ ದಿನ ಸಂಸತ್ತಿನ ಎದುರು ರೈತರ ಧರಣಿ: ಸಂಯುಕ್ತ ಕಿಸಾನ್ ಮೋರ್ಚಾ ಘೋಷಣೆ

ಪ್ರತಿಪಕ್ಷಗಳ ಎಲ್ಲ ಸಂಸದರಿಗೂ ಪತ್ರ ಬರೆದು ಕೃಷಿ ಕಾನೂನು ರದ್ದತಿಗೆ ಒತ್ತಾಯಿಸಿ ಸಂಸತ್ ಭವನದ ಒಳಗೂ ಪ್ರತಿಭಟನೆ ನಡೆಸಬೇಕೆಂದು ವಿನಂತಿಸಲಾಗುವುದು ಎಂದು ತಿಳಿಸಿದೆ.

ಮುಂಗಾರು ಅಧಿವೇಶನ ನಡೆಯುವ ಎಲ್ಲ ದಿನ ಸಂಸತ್ತಿನ ಎದುರು ರೈತರ ಧರಣಿ: ಸಂಯುಕ್ತ ಕಿಸಾನ್ ಮೋರ್ಚಾ ಘೋಷಣೆ
ಪ್ರಾತಿನಿಧಿಕ ಚಿತ್ರ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on: Jul 04, 2021 | 9:07 PM

ದೆಹಲಿ: ನೂತನ ಕೃಷಿ ಕಾಯ್ದೆ ರದ್ದುಪಡಿಸಬೇಕೆಂದು ಆಗ್ರಹಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ 40 ರೈತ ಸಂಘಟನೆಗಳ ಕೇಂದ್ರ ಸಮಿತಿ ಸಂಯುಕ್ತ ಕಿಸಾನ್ ಮೋರ್ಚಾ ಸಂಸತ್ತಿನ ಮುಂಗಾರು ಅಧಿವೇಶನ ಸಂದರ್ಭದಲ್ಲಿ ಪ್ರತಿದಿನ ಸಂಸತ್ ಭವನದ ಎದುರು ಧರಣಿ ನಡೆಸುವುದಾಗಿ ತಿಳಿಸಿದೆ. ಈ ಬಗ್ಗೆ ಚೇತವನಿ ಪತ್ರವನ್ನು (ಎಚ್ಚರಿಕೆ ಪತ್ರ) ಪ್ರತಿಪಕ್ಷಗಳ ಎಲ್ಲ ಸಂಸದರಿಗೆ ನೀಡುವುದಾಗಿ ಮೋರ್ಚಾ ತಿಳಿಸಿದೆ. ಕೃಷಿ ಕಾನೂನು ರದ್ದತಿಗೆ ಒತ್ತಾಯಿಸಿ ಸಂಸತ್ ಭವನದ ಒಳಗೂ ಪ್ರತಿಭಟನೆ ನಡೆಸಬೇಕೆಂದು ವಿನಂತಿಸಲಾಗುವುದು ಎಂದು ತಿಳಿಸಿದೆ.

ಮುಂಗಾರು ಅಧಿವೇಶನದ ಸಂದರ್ಭದಲ್ಲಿ ಪ್ರತಿದಿನ 200 ರೈತರು ಸಂಸತ್ ಭವನದ ಎದುರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಭಾನುವಾರ ಪ್ರಕಟಿಸಿದೆ. ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ 40ಕ್ಕೂ ರೈತ ಸಂಘಟನೆಗಳನ್ನು ಸಂಯುಕ್ತ ಕಿಸಾನ್ ಮೋರ್ಚಾ ಪ್ರತಿನಿಧಿಸುತ್ತದೆ. ಅಧಿವೇಶನ ಆರಂಭಕ್ಕೂ 2 ದಿನ ಮೊದಲು ಪ್ರತಿಪಕ್ಷಗಳ ಎಲ್ಲ ಸದಸ್ಯರಿಗೂ ಸೂಚನಾ ಪತ್ರ ನೀಡಲಾಗುವುದು ಎಂದು ಮೋರ್ಚಾ ಹೇಳಿದೆ.

‘ನಾವು ಹೊರಗೆ ಕುಳಿತು ಪ್ರತಿಭಟನೆ ನಡೆಸುತ್ತಿರುತ್ತೇವೆ. ಈ ಸಂದರ್ಭ ಪ್ರತಿದಿನವೂ ಅಧಿವೇಶನದಲ್ಲಿ ಕೃಷಿ ಕಾಯ್ದೆಯ ವಿಚಾರವನ್ನು ಪ್ರಸ್ತಾಪಿಸಬೇಕೆಂದು ವಿನಂತಿಸುತ್ತೇವೆ. ಸಭಾತ್ಯಾಗದ ಮೂಲಕ ಕೇಂದ್ರ ಸರ್ಕಾರಕ್ಕೆ ಅನುಕೂಲ ಮಾಡಿಕೊಡಬೇಡಿ ಎಂದು ಹೇಳುತ್ತೇವೆ. ಸರ್ಕಾರವು ಕೃಷಿ ಕಾಯ್ದೆಗಳ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವವರೆಗೂ ಅಧಿವೇಶನ ನಡೆಯಲು ಬಿಡಬಾರದು’ ಎಂದು ರೈತ ನಾಯಕ ಗುರ್ನಮ್ ಸಿಂಗ್ ಚರುನಿ ಹೇಳಿದರು.

ಜುಲೈ 19ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಿದೆ. ಅವರು ನಮ್ಮ ಬೇಡಿಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವವರೆಗೂ ನಾವು ಸಂಸತ್ತಿನ ಎದುರು ಪ್ರತಿಭಟಿಸುತ್ತಿರುತ್ತೇವೆ. ಪ್ರತಿ ರೈತ ಸಂಘಟನೆಯಿಂದ ತಲಾ ಐವರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಚರುನಿ ಮಾಹಿತಿ ನೀಡಿದರು. ಪೆಟ್ರೋಲ್, ಡೀಸೆಲ್ ಮತ್ತು ಎಲ್​ಪಿಜಿ ಸಿಲಿಂಡರ್ ದರ ಏರಿಕೆ ವಿರೋಧಿಸಿ ಜುಲೈ 8ರಂದು ದೇಶವ್ಯಾಪಿ ಪ್ರತಿಭಟನೆಗೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದೆ.

‘ನೀವು ಯಾವ ವಾಹನ ಹೊಂದಿದ್ದರೆ ಅದನ್ನು ಬಳಸಿ. ಟ್ರ್ಯಾಕ್ಟರ್​, ಟ್ರಾಲಿ, ಕಾರು, ಸ್ಕೂಟರ್ ಏನಿದ್ದರೆ ಅದನ್ನು ಸಮೀಪದ ಹೆದ್ದಾರಿಯಲ್ಲಿ ನಿಲ್ಲಿಸಿ ರಸ್ತೆತಡೆ ಮಾಡಿ. ಆದರೆ ಟ್ರಾಫಿಕ್ ಜಾಂ ಮಾಡಬೇಡಿ’ ಎಂದು ಅವರು ಕೋರಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಎಲ್​ಪಿಜಿ ಸಿಲಿಮಡರ್​ಗಳನ್ನೂ ತನ್ನಿ ಎಂದು ಹೇಳಿದ್ದಾರೆ. ಪಂಜಾಬ್, ಹರ್ಯಾಣ ಮತ್ತು ಉತ್ತರ ಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳ ರೈತರು ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಪ್ರಸ್ತಾಪಿತ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

(Samyukt Kisan Morcha Decides to protest every day outside Parliament during monsoon session)

ಇದನ್ನೂ ಓದಿ: Farmers Protest: ಇಂದು ಬೆಂಗಳೂರಿನಲ್ಲಿ ರೈತರಿಂದ ಕೃಷಿ ಕಾಯ್ದೆ ವಿರೋಧಿಸಿ ರಾಜಭವನ ಚಲೋ; ಪ್ರತಿಭಟನೆ ಸಾಗುವ ಮಾರ್ಗ ಹೀಗಿದೆ

ಇದನ್ನೂ ಓದಿ: ಕೇಂದ್ರದ ಹೊಸ ಕೃಷಿ ಕಾಯ್ದೆಗಳ ಫಲ: ಪಂಜಾಬ್​ ರೈತರ ಗೋಧಿ ಖರೀದಿಸಿ ನೇರವಾಗಿ ಅವರ ಖಾತೆಗೆ ಹಣ ವರ್ಗಾಯಿಸಿದ ಕೇಂದ್ರ ಆಹಾರ ನಿಗಮ​

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ