ಕೇಂದ್ರದ ಹೊಸ ಕೃಷಿ ಕಾಯ್ದೆಗಳ ಫಲ: ಪಂಜಾಬ್​ ರೈತರ ಗೋಧಿ ಖರೀದಿಸಿ ನೇರವಾಗಿ ಅವರ ಖಾತೆಗೆ ಹಣ ವರ್ಗಾಯಿಸಿದ ಕೇಂದ್ರ ಆಹಾರ ನಿಗಮ​

ಕಳೆದ ವರ್ಷ ಕೇಂದ್ರ ಸರಕಾರ ತಂದ ಕೃಷಿ ಕಾಯ್ದೆಗಳ ಬಗ್ಗೆ ಇಡೀ ದೇಶ ಮಾತ್ರ ಅಲ್ಲ, ಅಂತರಾಷ್ಟ್ರೀಯ ಮಟ್ಟದಲ್ಲೂ ಚರ್ಚೆ ನಡೆದಿತ್ತು. ಈ ವರ್ಷ ಪಂಜಾಬಿನಲ್ಲಿ ಗೋಧಿ ಬೆಳೆದ ರೈತರು ಮಧ್ಯವರ್ತಿಗಳಿಲ್ಲದೇ ತಾವು ಬೆಳೆದ ಫಸಲನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಿ ಖುಷಿಯಾಗಿದ್ದಾರೆ.

ಕೇಂದ್ರದ ಹೊಸ ಕೃಷಿ ಕಾಯ್ದೆಗಳ ಫಲ: ಪಂಜಾಬ್​ ರೈತರ ಗೋಧಿ ಖರೀದಿಸಿ ನೇರವಾಗಿ ಅವರ ಖಾತೆಗೆ ಹಣ ವರ್ಗಾಯಿಸಿದ ಕೇಂದ್ರ ಆಹಾರ ನಿಗಮ​
Punjab Farmers
bhaskar hegde

| Edited By: Skanda

May 15, 2021 | 12:50 PM

ಕಳೆದ ಐದು ತಿಂಗಳಿನಿಂದ ನಡೆಯುತ್ತಿರುವ ಕೊರೊನಾದ ಎರಡನೇ ಅಲೆಯಿಂದ ಆದ ಸಂಕಷ್ಟ ಮತ್ತು ಕೇಂದ್ರ ಸರಕಾರ ತಂದ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಆಂದೋಲನದ ಮಧ್ಯೆ, ಪಂಜಾಬಿನಲ್ಲಿ ಗೋಧಿ ಸಂಗ್ರಹ ಹಿಂದಿನ ಎಲ್ಲ ದಾಖಲೆಗಳನ್ನು ಮೀರಿಸಿದೆ. ಸರ್ಕಾರ ನಿಗದಿಪಡಿಸಿದ ಗುರಿಗಿಂತ 132.08 ಲಕ್ಷ ಮೆಟ್ರಿಕ್ ಟನ್ ಗೋಧಿ ಸಂಗ್ರಹಿಸಲಾಗಿದೆ. ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ 2 ಲಕ್ಷ ಮೆಟ್ರಿಕ್ ಟನ್ ಹೆಚ್ಚು ಗೋಧಿ ಸಂಗ್ರಹವಾಗಿದೆ. ಕೇಂದ್ರ ಆಹಾರ ನಿಗಮಕ್ಕೆ ನೀಡಿದ ಗೋಧಿಗೆ ಪ್ರತಿಯಾಗಿ 9 ಲಕ್ಷಕ್ಕೂ ಹೆಚ್ಚು ರೈತರು ರೂ. 23,000 ಕೋಟಿ ಹಣವನ್ನು ಪಡೆಯುತ್ತಿದ್ದಾರೆ. ಈ ಬಾರಿ, ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಹಣ ಹಾಕಲಾಗುತ್ತಿದೆ. ಪಂಜಾಬ್‌ನಲ್ಲಿ ಮೊದಲ ಬಾರಿಗೆ ಆರ್ತೀಯರ ಅಥವಾ ಮಧ್ಯವರ್ತಿಗಳ ಸಹಾಯವಿಲ್ಲದೇ, ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾಯಿಸುವ ವಿಧಾನ ಈ ವರ್ಷದಿಂದ ಜಾರಿಗೆ ಬಂದಿದೆ. ಕಳೆದ ಏಪ್ರಿಲ್ 10 ರಂದು ಪ್ರಾರಂಭವಾದ ಮತ್ತು ಮೊನ್ನೆ ಗುರುವಾರ ಕೊನೆಗೊಂಡ ಈ ಪ್ರಕ್ರಿಯೆ 12 ದಿನ ಮೊದಲೇ ಮುಗಿದಿದೆ. ಕೇಂದ್ರ ಆಹಾರ ನಿಗಮ ದಾಖಲೆಗಳ ಪ್ರಕಾರ, ಪಂಜಾಬ್ ಇತಿಹಾಸದಲ್ಲಿ ಅತಿ ಹೆಚ್ಚು ಗೋಧಿ ಸಂಗ್ರಹವಾದ ವರ್ಷ ಎಂಬುದನ್ನು ತೋರಿಸುತ್ತದೆ. 2009-10ರವರೆಗೆ ಈ ಸಂಖ್ಯೆ 100 ಲಕ್ಷ ಮೆಟ್ರಿಕ್ ಟನ್‌ಗಳ ಅಡಿಯಲ್ಲಿತ್ತು. ಕಳೆದ ವರ್ಷ 8.8 ರೈತರು ಮಾರುಕಟ್ಟೆಗೆ ಬಂದರೆ, ಈ ವರ್ಷ ಅದಕ್ಕೂ ಮೀರಿ 9 ಲಕ್ಷಕ್ಕೂ ಹೆಚ್ಚು ರೈತರು ತಮ್ಮ ಧಾನ್ಯದೊಂದಿಗೆ ಮಾರುಕಟ್ಟೆಗೆ ಬಂದಿರುವುದು ವಿಶೇಷ. ಸುಮಾರು 35 ಲಕ್ಷ ಹೆಕ್ಟೇರ್ ಗೋಧಿ ಕೃಷಿಗೆ ಮೀಸಲಾಗಿರುವ ಪಂಜಾಬ್, ವಾರ್ಷಿಕವಾಗಿ ಸುಮಾರು 17-18 ದಶಲಕ್ಷ ಟನ್ ಗೋಧಿಯನ್ನು ಉತ್ಪಾದಿಸುತ್ತದೆ.

ಇದು ಹೇಗೆ ಸಾಧ್ಯ ಆಯ್ತು? ರೈತರ ಆಂದೋಲನದ ಕೇಂದ್ರಬಿಂದುವಾಗಿರುವ ಮಾಲ್ವಾ ಪ್ರದೇಶದಲ್ಲಿ ಸಂಗ್ರಹಣೆ ಕಡಿಮೆ ಇದ್ದರೂ, ದೋಬಾ ಮತ್ತು ಮಜಾದಲ್ಲಿ ಜಾಸ್ತಿ ಗೋಧಿ ಮಾರುಕಟ್ಟೆಗೆ ಬಂದಿತ್ತು. ವಾಸ್ತವವಾಗಿ, ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆ ಸಂಗ್ರಹವನ್ನು ಕಂಡಿದ್ದ ಜಿಲ್ಲೆಗಳು, ಈ ಬಾರಿ ಹೆಚ್ಚಿನ ವ್ಯವಹಾರವನ್ನು ಕಂಡಿವೆ.

ಖಾತೆಗಳಿಗೆ ನೇರ ಪಾವತಿ ಮಾಡುವ ಕ್ರಮವೇ ಇದಕ್ಕೆ ಒಂದು ಪ್ರಮುಖ ಕಾರಣ ಎಂದು ಪಂಜಾಬ್ ಆಹಾರ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ನಿರ್ದೇಶಕ ರವಿ ಭಗತ್ ಹೇಳಿದ್ದಾರೆ. ಸರ್ಕಾರವು ರೈತರನ್ನು ಅನಾಜ್ ಖಾರಿದ್ ಪೋರ್ಟಲ್ನಲ್ಲಿ ನೋಂದಾಯಿಸಿದ್ದು ಹಣವನ್ನು ಅವರ ಖಾತೆಗಳಿಗೆ ಜಮಾ ಮಾಡುತ್ತಿರುವುದರಿಂದ ಇದು ಸಾಧ್ಯವಾಗಿದೆ ಎಂದಿದ್ದಾರೆ. ಭಾರತೀಯ ಕಿಸಾನ್ ಯೂನಿಯನ್ (ಡಕೌಂಡಾ) ನಾಯಕ ಜಗಮೋಹನ್ ಸಿಂಗ್ ಅವರು, ಗೋಧಿ ಮಂಡಿಗೆ ಬರಲು ಒಂದು ಪ್ರಮುಖ ಕಾರಣವೆಂದರೆ ಎಂಎಸ್ಪಿಯನ್ನು ನೇರವಾಗಿ ಖಾತೆಗಳಿಗೆ ಪಾವತಿಸುವುದು, ಇದರಿಂದ ರೈತರು ಹಿಟ್ಟು ಮಿಲ್ಲರ್‌ಗಳಿಗೆ ಬದಲಾಗಿ ಗೋಧಿ ಮಡಿಗೆ ಹೋದರು ಎಂಉ ಅಭಿಪ್ರಾಯಪಟ್ಟಿದ್ದಾರೆ. ಪಂಜಾಬ್ ಮಂಡಿ ಮಂಡಳಿಯ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ರೈತರು ಸಹ ಎಂಎಸ್ಪಿ (ಕ್ವಿಂಟಲ್‌ಗೆ 1,975 ರೂ.) ಲಾಭ ಪಡೆಯಲು ಬಯಸಿದ್ದರು, ಅದು ಉಳಿಯುವುದಿಲ್ಲ ಎಂದು ನಂಬಿದ್ದರು. ಆದರೆ, ಕೊವಿಡ್ ಕಾರಣದಿಂದಾಗಿ ಮಾರುಕಟ್ಟೆಯಲ್ಲಿ ಖಾಸಗಿ ಮಧ್ಯವರ್ತಿಗಳು ಕಡಿಮೆ ಬಂದಿದ್ದರಿಂದ ಹೆಚ್ಚಿನ ಗೋಧಿ ಸರ್ಕಾರಿ ಮಂಡಳಿಗಳಿಗೆ ಬರಲು ಸಾಧ್ಯವಾಯಿತು.

ಅಂತಹ ಒಬ್ಬ ರೈತ ಗುರುದೀಪ್ ಸಿಂಗ್, ಲುಧಿಯಾನ ಜಿಲ್ಲೆಯ ಜಾಗ್ರಾವ್ ಬಳಿಯ ಚಕ್ ಕಲಾನ್ ಗ್ರಾಮದ 20 ಎಕರೆ ಪ್ರದೇಶದಲ್ಲಿ ಗೋಧಿ ಬಿತ್ತನೆ ಮಾಡಿದ್ದಾರೆ ಮತ್ತು ಸುಮಾರು 400 ಕ್ವಿಂಟಾಲ್ ಅನ್ನು 8 ಲಕ್ಷ ರೂ.ಗೆ ಮಾರಾಟ ಮಾಡಿದ್ದಾರೆ ಎಂದು ಹೇಳಿದರು. ಹಣವು ನೇರವಾಗಿ ಬರುವ ಈ ವ್ಯವಸ್ಥೆಯಿಂದ ನನಗೆ ತುಂಬಾ ಸಂತೋಷವಾಗಿದೆ. ಈ ಬಾರಿ ಎಂಎಸ್‌ಪಿ ಕೂಡ ಉತ್ತಮವಾಗಿದ್ದರಿಂದ ನನ್ನ ಸಂಪೂರ್ಣ ಬೆಳೆ ಸರ್ಕಾರಿ ಸಂಸ್ಥೆಗಳಿಗೆ ಮಾರಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:

ಗೋಧಿ ಸಂಗ್ರಹಣೆ; 11.6 ಲಕ್ಷ ರೈತರು ಎಂಎಸ್​ಪಿ ಮೂಲಕ ಪಡೆದಿದ್ದು ₹24 ಸಾವಿರ ಕೋಟಿ: ಕೇಂದ್ರ ಸರ್ಕಾರ

Joe Biden led USA Govt Backs India Farm Laws ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆಗೆ ಬೆಂಬಲ ಸೂಚಿಸಿದ ಅಮೆರಿಕ

(Farm laws enacted by Centre paid dividends Punjab farmers sold wheat to procurement centers without middlemen)

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada