AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡನೇ ಡೋಸ್ ಲಸಿಕೆಯ ಅವಧಿ 12 ವಾರದಿಂದ 8 ವಾರಕ್ಕೆ ಇಳಿಕೆ‌ ಮಾಡಲು ಇಂಗ್ಲೆಂಡ್ ಸರ್ಕಾರದಿಂದ ತಿರ್ಮಾನ

ಅಸ್ಟ್ರಾಜನಿಕ್ ಕಂಪನಿಯ ಲಸಿಕೆ ನೀಡುತ್ತಿರುವ ಇಂಗ್ಲೆಂಡ್ ತನ್ನು ಬಳಿ ಹೆಚ್ಚಿನ ಲಸಿಕೆಯ ದಾಸ್ತಾನು ಇರುವುದರಿಂದ 8 ವಾರದೊಳಗೆ ಎರಡನೇ ಡೋಸ್ ನೀಡಿಕೆ‌ಗೆ ತಿರ್ಮಾನಿಸಿದೆ.

ಎರಡನೇ ಡೋಸ್ ಲಸಿಕೆಯ ಅವಧಿ 12 ವಾರದಿಂದ 8 ವಾರಕ್ಕೆ ಇಳಿಕೆ‌ ಮಾಡಲು ಇಂಗ್ಲೆಂಡ್ ಸರ್ಕಾರದಿಂದ ತಿರ್ಮಾನ
ಪ್ರಾತಿನಿಧಿಕ ಚಿತ್ರ
preethi shettigar
|

Updated on: May 15, 2021 | 2:31 PM

Share

ಇಂಗ್ಲೆಂಡ್​ನಲ್ಲಿ ಎರಡನೇ ಡೋಸ್ ಕೊರೊನಾ ಲಸಿಕೆಯ ಅವಧಿಯನ್ನು 12 ವಾರದಿಂದ 8 ವಾರಗಳಿಗೆ ಇಳಿಕೆ‌ ಮಾಡಲು ಇಂಗ್ಲೆಂಡ್ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಅಸ್ಟ್ರಾಜನಿಕ್ ಕಂಪನಿಯ ಲಸಿಕೆ ನೀಡುತ್ತಿರುವ ಇಂಗ್ಲೆಂಡ್ ತನ್ನು ಬಳಿ ಹೆಚ್ಚಿನ ಲಸಿಕೆಯ ದಾಸ್ತಾನು ಇರುವುದರಿಂದ 8 ವಾರದೊಳಗೆ ಎರಡನೇ ಡೋಸ್ ನೀಡಿಕೆ‌ಗೆ ತಿರ್ಮಾನಿಸಿದೆ. ಈ ಮೊದಲು ಲಸಿಕೆ ಅವಧಿ ಹೆಚ್ಚಿಸಿದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎನ್ನುವ ತಜ್ಞರ ಸಲಹೆಯಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆದರೆ ಇಂಗ್ಲೆಂಡ್ ಸರ್ಕಾರ ಈಗ ಮತ್ತೆ ತನ್ನ ನಿರ್ಧಾರಲ್ಲಿ ಬದಲಾವಣೆ ತಂದಿದೆ.

ಭಾರತದಲ್ಲಿ ಈಗ ಎರಡನೇ ಡೋಸ್ ಲಸಿಕೆ ನೀಡಿಕೆ ಅವಧಿ 12 ರಿಂದ16 ವಾರಗಳಿಗೆ ಹೆಚ್ಚಳ‌‌ ಕೊವಿಶೀಲ್ಡ್​ ಕೊವಿಡ್19 ಲಸಿಕೆಯ ಒಂದು ಡೋಸ್​ನಿಂದ ಇನ್ನೊಂದು ಡೋಸ್ ತೆಗೆದುಕೊಳ್ಳುವ ಅವಧಿಯನ್ನು 12-16 ವಾರಗಳಿಗೆ ವಿಸ್ತರಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಈ ಮೊದಲು ಕೊವಿಶೀಲ್ಡ್ ಮೊದಲ ಡೋಸ್ ತೆಗೆದುಕೊಂಡ 6 ರಿಂದ 8ವಾರದೊಳಗೆ ಇನ್ನೊಂದು ಡೋಸ್ ಲಸಿಕೆ ಪಡೆಯಬೇಕಿತ್ತು. ಇನ್ನು ಕೊವಿಶೀಲ್ಡ್ ಲಸಿಕೆ ಪಡೆಯುವ ಅವಧಿಯ ಬಗ್ಗೆ ಮಾತ್ರ ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, ಕೊವ್ಯಾಕ್ಸಿನ್ ಮೊದಲ ಡೋಸ್​ ಹಾಗೂ ಎರಡನೇ ಡೋಸ್​ ಪಡೆಯುವ ಮಧ್ಯಂತರ ಅವಧಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹಾಗಾಗಿ ಇದು ಕೊವಿಶೀಲ್ಡ್ ಪಡೆಯುವವರಿಗೆ ಮಾತ್ರ ಅನ್ವಯ ಆಗಲಿದೆ. ಮೊದಲು ಕೊವಿಶೀಲ್ಡ್​ ಲಸಿಕೆ ಮೊದಲ ಡೋಸ್ ಪಡೆದ 4 ರಿಂದ 6ವಾರದೊಳಗೆ ಇನ್ನೊಂದು ಡೋಸ್ ಪಡೆಯಲು ಕೇಂದ್ರ ಸೂಚಿಸಿತ್ತು.

ಅದಾದ ನಂತರ ಅದನ್ನು 6-8ವಾರಗಳಿಗೆ ವಿಸ್ತರಿಸಿ, ಇದೀಗ ಮತ್ತೆ 12-16 ವಾರಗಳಿಗೆ ನಿಗದಿಮಾಡಿದೆ. ಕೆಲವು ಅಧ್ಯಯನಗಳನ್ನು ಅವಲೋಕಿಸಿದಾಗ ಕೊವಿಶೀಲ್ಡ್ ಲಸಿಕೆಯ ಮೊದಲ ಮತ್ತು ಎರಡನೇ ಡೋಸ್ ಮಧ್ಯಂತರ ಅವಧಿಯನ್ನು ಹೆಚ್ಚಿಸಬಹುದು ಎಂಬುದು ಸಾಬೀತಾಗಿದೆ. ಹಾಗಾಗಿ 12-16ವಾರಗಳಿಗೆ ವಿಸ್ತರಿಸಿ ಎಂದು ಕೇಂದ್ರಸರ್ಕಾರಕ್ಕೆ ತಜ್ಞರ ತಂಡ ಶಿಫಾರಸು ಮಾಡಿತ್ತು. ಅದಕ್ಕೀಗ ಸರ್ಕಾರ ಸಮ್ಮತಿ ನೀಡಿದೆ. ಇನ್ನು ಅವಧಿ ಹೆಚ್ಚಿಸುವುದಕ್ಕೂ ಮೊದಲು ವಿಶ್ವ ಆರೋಗ್ಯ ಸಂಸ್ಥೆಯ ಗಮನಕ್ಕೂ ಇದನ್ನು ತರಲಾಗಿದೆ.

ಇದನ್ನೂ ಓದಿ:

ಸೆರಮ್ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್ ಲಸಿಕೆ ಅವಧಿ ಹೆಚ್ಚಳದ ಬಗ್ಗೆ ತಜ್ಞರ ಚರ್ಚೆ

Explainer: ವಿದೇಶಿ ಕೊರೊನಾ ಲಸಿಕೆಗಳಿಗೆ ಅನುಮತಿ ನೀಡಲು ತುದಿಗಾಲಲ್ಲಿ ನಿಂತಿದೆ ಭಾರತ ಸರ್ಕಾರ; ಉಂಟಾ ಏನಾದರೂ ಪ್ರಯೋಜನ?

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!