ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್ ಲಸಿಕೆ ಅವಧಿ ಹೆಚ್ಚಳದ ಬಗ್ಗೆ ತಜ್ಞರ ಚರ್ಚೆ
ಲಸಿಕೆ ಪಡೆಯದವರಿಗೆ ಮೊದಲ ಡೋಸ್ ಲಸಿಕೆ ನೀಡಿಕೆಗೆ ಕೂಡ ಅನುಕೂಲವಾಗಲಿದೆ. ದೇಶದಲ್ಲಿ ಇದುವರೆಗೂ 18 ವರ್ಷ ಮೇಲ್ಪಟ್ಟವರ ಪೈಕಿ 9 ಲಕ್ಷ ಜನರು ಮಾತ್ರ ಲಸಿಕೆ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ.
ದೆಹಲಿ: ಕೊರೊನಾ ಎರಡನೇ ಅಲೆ ದೇಶದೆಲ್ಲೇಡೆ ವ್ಯಾಪಿಸಿದ್ದು, ಸಾವು – ನೋವಿನ ಸಂಖ್ಯೆಯೂ ಕೂಡ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಲಸಿಕೆ ನೀಡುವಲ್ಲಿ ಈಗಾಗಲೇ ಸರ್ಕಾರ ಮುಂದಾಗಿದೆ. ಆದರೆ ಲಸಿಕೆ ನೀಡುವ ಅವಧಿಯ ಬಗ್ಗೆ ಸದ್ಯ ಹೊಸ ಸಂಶೋದನೆ ನಡೆಸಿದ್ದು, ಲಸಿಕೆ ನೀಡುವ ಕ್ರಮದಲ್ಲಿ ಬದಲಾವಣೆ ಉಂಟಾಗುವ ಸಾಧ್ಯತೆ ಇದೆ. ಆಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್ ಲಸಿಕೆಯ 2 ನೇ ಡೋಸ್ ಲಸಿಕೆ ಪಡೆಯುವ ಅವಧಿ ಹೆಚ್ಚಳದ ಬಗ್ಗೆ ತಜ್ಞರ ಸಮಿತಿಯ ಪರಿಗಣನೆ ನಡೆಯುತ್ತಿದೆ. ಎರಡು ಡೋಸ್ಗಳ ನಡುವಿನ ಅಂತರ ಹೆಚ್ಚಾದಷ್ಟು ಲಸಿಕೆ ಹೆಚ್ಚು ಪರಿಣಾಮಕಾರಿ ಎಂಬ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.
ಮುಂದಿನ ವಾರ ಈ ಬಗ್ಗೆ ತೀರ್ಮಾನ ಕೈಗೊಳ್ಳಲು ತಜ್ಞರ ಸಮಿತಿ ನಿರ್ಧಾರ ಮಾಡಿದ್ದು, ಸದ್ಯ ಮೊದಲ ಡೋಸ್ ಪಡೆದ 6-8 ವಾರಗಳಲ್ಲಿ ಎರಡನೇ ಡೋಸ್ ಪಡೆಯಬೇಕು. ಆರು ವಾರಗಳ ಅಂತರದಲ್ಲಿ ಕೊವಿಶೀಲ್ಡ್ ಲಸಿಕೆ ಪಡೆದರೆ ಶೇಕಡಾ 55 ರಷ್ಟು ಮಾತ್ರ ಪರಿಣಾಮಕಾರಿಯಾಗುತ್ತದೆ . ಆದರೆ ಲ್ಯಾನ್ಸೆಟ್ ಜರ್ನಲ್ನಲ್ಲಿ 12 ವಾರಗಳಲ್ಲಿ ಅಂತರದಲ್ಲಿ ಲಸಿಕೆ ಪಡೆದರೇ ಲಸಿಕೆ ಶೇಕಡಾ 81 ರಷ್ಟು ಪರಿಣಾಮಕಾರಿ ಎಂದು ಸಂಶೋಧನೆ ತಿಳಿಸಿದೆ.
ಇಂಗ್ಲೆಂಡ್, ಕೆನಡಾಗಳಲ್ಲಿ ಎರಡು ಡೋಸ್ ನಡುವಿನ ಅಂತರ 12 ವಾರ ದಿಂದ 16 ವಾರ ಇದೆ. ಎರಡು ಡೋಸ್ ನಡುವಿನ ಅಂತರ ಹೆಚ್ಚಾದಷ್ಟು ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಎರಡು ಡೋಸ್ ನಡುವಿನ ಅಂತರ ಹೆಚ್ಚಾದಷ್ಟು ಭಾರತಕ್ಕೂ ಅನುಕೂಲ. ಲಸಿಕೆಯ ತಕ್ಷಣದ ಬೇಡಿಕೆ ಸ್ವಲ್ಪ ಕಡಿಮೆಯಾಗಲಿದೆ. ಲಸಿಕೆ ಪಡೆಯದವರಿಗೆ ಮೊದಲ ಡೋಸ್ ಲಸಿಕೆ ನೀಡಿಕೆಗೆ ಕೂಡ ಅನುಕೂಲವಾಗಲಿದೆ. ದೇಶದಲ್ಲಿ ಇದುವರೆಗೂ 18 ವರ್ಷ ಮೇಲ್ಪಟ್ಟವರ ಪೈಕಿ 9 ಲಕ್ಷ ಜನರು ಮಾತ್ರ ಲಸಿಕೆ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:
Explainer: ಭಾರತದಲ್ಲಿ 2ನೇ ಡೋಸ್ ಕೊರೊನಾ ಲಸಿಕೆ ಪಡೆಯಲು ಏಕಿಷ್ಟು ಪರದಾಟ? ಪರಿಹಾರವೇನು?