ಪ್ರಧಾನಿಯಾದಾಗಿನಿಂದ ವೈದ್ಯಕೀಯ ವೆಚ್ಚಕ್ಕೆ ಸರ್ಕಾರದಿಂದ ಒಂದು ಪೈಸೆ ಹಣವನ್ನೂ ತೆಗೆದುಕೊಂಡಿಲ್ಲವಂತೆ ಮೋದಿ!

ನರೇಂದ್ರ ಮೋದಿ ಮೇ 2014ರಲ್ಲಿ ಪ್ರಧಾನ ಮಂತ್ರಿಯಾಗಿ ಅಧಿಕಾರವನ್ನು ವಹಿಸಿಕೊಂಡಾಗಿನಿಂದ ಅವರ ವೈದ್ಯಕೀಯ ಆರೈಕೆಗೆ ಒಂದು ರೂಪಾಯಿಯನ್ನು ಕೂಡ ಸರ್ಕಾರದಿಂದ ಖರ್ಚು ಮಾಡಿಲ್ಲ.

ಪ್ರಧಾನಿಯಾದಾಗಿನಿಂದ ವೈದ್ಯಕೀಯ ವೆಚ್ಚಕ್ಕೆ ಸರ್ಕಾರದಿಂದ ಒಂದು ಪೈಸೆ ಹಣವನ್ನೂ ತೆಗೆದುಕೊಂಡಿಲ್ಲವಂತೆ ಮೋದಿ!
ನರೇಂದ್ರ ಮೋದಿ
Edited By:

Updated on: Jan 09, 2023 | 3:15 PM

ನವದೆಹಲಿ: ಜಗತ್ತಿನ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿರುವ ನರೇಂದ್ರ ಮೋದಿ (Narendra Modi) ಅವರಿಗೆ ಇರುವ ಹಿಂಬಾಲಿಕರಿಗೇನೂ ಕಡಿಮೆಯಿಲ್ಲ. ರಾಜಕೀಯವಾಗಿ ತಮ್ಮದೇ ಆದ ವರ್ಚಸ್ಸನ್ನು ಹೊಂದಿರುವ ಪ್ರಧಾನಿ ಮೋದಿ ವೈಯಕ್ತಿಕ ವಿಚಾರದಲ್ಲಿಯೂ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. ಇತ್ತೀಚೆಗಷ್ಟೇ ಅತ್ಯಂತ ಸರಳವಾಗಿ ತಮ್ಮ ತಾಯಿಯ ಅಂತ್ಯಕ್ರಿಯೆ ನೆರವೇರಿಸಿ, ಮತ್ತೆ ಕೆಲಸದಲ್ಲಿ ತೊಡಗಿಕೊಳ್ಳುವ ಮೂಲಕ ಅನೇಕರ ಮೆಚ್ಚುಗೆಗೆ ಪಾತ್ರರಾಗಿದ್ದ ನರೇಂದ್ರ ಮೋದಿಯವರ ಬಗ್ಗೆ ಆರ್​ಟಿಐ (RTI) ಮತ್ತೊಂದು ಮಾಹಿತಿಯನ್ನು ನೀಡಿದೆ.

ಪ್ರಧಾನಿ ಮೋದಿಯವರ ವೈದ್ಯಕೀಯ ವೆಚ್ಚದ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ (ಆರ್​​ಟಿಐ) ಕೇಳಲಾದ ಪ್ರಶ್ನೆಗೆ ಉತ್ತರಿಸಲಾಗಿದ್ದು, ನರೇಂದ್ರ ಮೋದಿ ಮೇ 2014ರಲ್ಲಿ ಪ್ರಧಾನ ಮಂತ್ರಿಯಾಗಿ ಅಧಿಕಾರವನ್ನು ವಹಿಸಿಕೊಂಡಾಗಿನಿಂದ ಅವರ ವೈದ್ಯಕೀಯ ಆರೈಕೆಗೆ ಒಂದು ರೂಪಾಯಿಯನ್ನು ಕೂಡ ಸರ್ಕಾರದಿಂದ ಖರ್ಚು ಮಾಡಿಲ್ಲ. ತಮ್ಮ ಎಲ್ಲ ವೈದ್ಯಕೀಯ ವೆಚ್ಚವನ್ನೂ ಮೋದಿ ಸ್ವಂತ ಹಣದಿಂದಲೇ ಭರಿಸಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ದೇಶದ ಜನತೆ ಅವರನ್ನು ಆರಾಧಿಸಬೇಕೆಂದು ಬಯಸುತ್ತಾರೆ: ರಾಹುಲ್ ಗಾಂಧಿ

ಪುಣೆ ಮೂಲದ ಆರ್‌ಟಿಐ ಕಾರ್ಯಕರ್ತ ಪ್ರಫುಲ್ ಸರ್ದಾ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಪ್ರಧಾನಿ ಕಾರ್ಯಾಲಯ ನೀಡಿದ ಉತ್ತರದಲ್ಲಿ ಇದು ಬಹಿರಂಗವಾಗಿದೆ. ಪ್ರಧಾನಮಂತ್ರಿಗಳ ಕಾರ್ಯಾಲಯವು ನಿರ್ವಹಿಸುತ್ತಿರುವ ಪ್ರಧಾನ ಮಂತ್ರಿಯ ಆರೋಗ್ಯಕ್ಕೆ ಸರ್ಕಾರದ ಖಜಾನೆಯಿಂದ ಯಾವುದೇ ಹಣ ಖರ್ಚು ಮಾಡಿಲ್ಲ ಎಂದು ಉತ್ತರದಲ್ಲಿ ತಿಳಿಸಲಾಗಿದೆ.

ಸಂಸದರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳಿಗೆ ಹಲವಾರು ಸೌಕರ್ಯಗಳನ್ನು ಒದಗಿಸಲಾಗಿದೆ. ಆದರೂ ದೇಶದ ಪ್ರಧಾನಿ ಮೋದಿ ಆ ಸೌಕರ್ಯಗಳನ್ನು ಪಡೆದಿಲ್ಲ. ಪ್ರಧಾನಿ ಮೋದಿ ಅವರ ಎಲ್ಲಾ ಚಿಕಿತ್ಸಾ ವೆಚ್ಚವನ್ನು ಸ್ವಂತ ಹಣದಿಂದಲೇ ಭರಿಸುತ್ತಾರೆ, ಸರ್ಕಾರದ ಬೊಕ್ಕಸದಿಂದ ಒಂದು ರೂಪಾಯಿಯನ್ನು ಕೂಡ ಖರ್ಚು ಮಾಡಿಲ್ಲ. 2014ರಿಂದ ಇಲ್ಲಿಯವರೆಗೆ ಭಾರತ ಮತ್ತು ವಿದೇಶಗಳಲ್ಲಿ ಮೋದಿಯವರ ಚಿಕಿತ್ಸೆಗಾಗಿ ಸರ್ಕಾರದಿಂದ ಯಾವುದೇ ವೆಚ್ಚವನ್ನು ಮಾಡಲಾಗಿಲ್ಲ ಎಂದು ಆರ್​ಟಿಐ ತಿಳಿಸಿದೆ.

ಇದನ್ನೂ ಓದಿ: PM Narendra Modi: ಜಗತ್ತಿನಾದ್ಯಂತ ನೆಲೆಸಿರುವ ವಲಸಿಗ ಭಾರತೀಯರ ಜೊತೆಗಿನ ಮೋದಿ ಬಾಂಧವ್ಯದ ಕ್ಷಣಗಳು ಇಲ್ಲಿವೆ

ಫಿಟ್ ಇಂಡಿಯಾ ಅಭಿಯಾನ ನಡೆಸುತ್ತಿರುವ ಮೋದಿ ಸ್ವತಃ ಫಿಟ್ ಆಗಿರಲು ಹೆಚ್ಚು ಆದ್ಯತೆ ನೀಡುತ್ತಾರೆ. ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳುತ್ತಾರೆ. ತೆರಿಗೆದಾರರ ಹಣವನ್ನು ಪ್ರಧಾನಿ ಮೋದಿ ಯಾವುದೇ ವೈಯಕ್ತಿಕ ಕೆಲಸಗಳಿಗೆ ಬಳಸಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ