PM Modi Political Rally: 5 ರಾಜ್ಯಗಳಲ್ಲಿ 35 ಚುನಾವಣಾ ಪ್ರಚಾರ ಸಭೆಗಳು -ಬಿಜೆಪಿ ‘ಪೋಸ್ಟರ್ ಬಾಯ್’ ಪ್ರಧಾನಿ ಮೋದಿ ವೇಳಾಪಟ್ಟಿ ಇಲ್ಲಿದೆ
ಪ್ರಧಾನಿ ಮೋದಿ ಅವರು ಐದು ರಾಜ್ಯಗಳಲ್ಲಿ ಒಟ್ಟು 34 ರಿಂದ 35 Rally ಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಪೈಕಿ ಮಧ್ಯಪ್ರದೇಶದಲ್ಲಿ ಒಟ್ಟು 11, ರಾಜಸ್ಥಾನದಲ್ಲಿ 10, ತೆಲಂಗಾಣ ಮತ್ತು ಛತ್ತೀಸ್ಗಢದಲ್ಲಿ ತಲಾ 6, ಹಾಗೂ ಮಿಜೋರಾಂನಲ್ಲಿ ಒಂದು ರ್ಯಾಲಿಯಲ್ಲಿ ಮೋದಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ಬಹಿರಂಗಪಡಿಸಿವೆ.
ದೇಶದಾದ್ಯಂತ ಐದು ರಾಜ್ಯಗಳ ಅಸೆಂಬ್ಲಿ ಚುನಾವಣೆಗಳನ್ನು (State Assembly Elections 2023) ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಪ್ರಚಾರದ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಪ್ರಧಾನಿ ಮೋದಿ 35 ರಾಜಕೀಯ ರ್ಯಾಲಿಯಲ್ಲಿ (PM Modi Political Rally) ಭಾಗವಹಿಸಿ ಭಾಷಣ ಮಾಡಲಿದ್ದಾರೆ. ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯು ಈ ವಿಷಯವನ್ನು ಪ್ರಕಟಿಸಿದೆ. ಈ ಬಾರಿಯ ಚುನಾವಣೆಗೆ ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪೋಸ್ಟರ್ ಬಾಯ್ ಮಾಡಿದೆ. ಪ್ರಧಾನಿ ಮೋದಿ ಅವರು ಐದು ರಾಜ್ಯಗಳಲ್ಲಿ ಒಟ್ಟು 34 ರಿಂದ 35 Rally ಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಪೈಕಿ ಮಧ್ಯಪ್ರದೇಶದಲ್ಲಿ ಒಟ್ಟು 11, ರಾಜಸ್ಥಾನದಲ್ಲಿ 10, ತೆಲಂಗಾಣ ಮತ್ತು ಛತ್ತೀಸ್ಗಢದಲ್ಲಿ ತಲಾ 6, ಹಾಗೂ ಮಿಜೋರಾಂನಲ್ಲಿ ಒಂದು ರ್ಯಾಲಿಯಲ್ಲಿ ಮೋದಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ಬಹಿರಂಗಪಡಿಸಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 21 ರಂದು ಮಧ್ಯಪ್ರದೇಶದಿಂದ ಐದು ರಾಜ್ಯಗಳ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ. ಇದಾದ ಬಳಿಕ ಐದೂ ರಾಜ್ಯಗಳಲ್ಲಿ ನಿರಂತರ ಪ್ರವಾಸ ಮಾಡಲಿದ್ದಾರೆ. ಪಿಎಂಒ ಕಚೇರಿ ನೀಡಿರುವ ವಿವರಗಳ ಪ್ರಕಾರ ಮಧ್ಯಪ್ರದೇಶ ಭೇಟಿಯ ವೇಳೆ ಸಿಂಧಿಯಾ ಶಾಲೆಯ 125 ನೇ ಸಂಸ್ಥಾಪನಾ ದಿನ ಆಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಯಾವುದೇ ರಾಜಕೀಯ ಆದ್ಯತೆ ಇಲ್ಲ ಎಂದು ಮೂಲಗಳು ತಿಳಿಸಿವೆ. ಪ್ರಧಾನಿ ಕಾರ್ಯಾಲಯದ ಪ್ರಕಾರ ಶಾಲೆಯಲ್ಲಿ ಬಹುಪಯೋಗಿ ಕ್ರೀಡಾ ಸಂಕೀರ್ಣಕ್ಕೆ ಶಂಕು ಸ್ಥಾಪನೆ ಮಾಡಲಿದ್ದಾರೆ. ಪ್ರತಿಷ್ಠಿತ ಶಾಲೆಯ ಹಳೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧಕರಿಗೆ ವಾರ್ಷಿಕ ಪ್ರಶಸ್ತಿಗಳನ್ನು ನೀಡುತ್ತಾರೆ. ಈ ಸಂದರ್ಭದಲ್ಲಿ ಅಲ್ಲಿನ ಜನರನ್ನು ಉದ್ದೇಶಿಸಿ ಮೋದಿ ಮಾತನಾಡುತ್ತಿದ್ದಾರೆ. (PM Modi Speaking at the 125th Founder’s Day programme of ScindiaSchool in Gwalior)
Speaking at the 125th Founder’s Day programme of @ScindiaSchool in Gwalior. Watch. https://t.co/77hHzBjxyo
— Narendra Modi (@narendramodi) October 21, 2023
ಸಿಂಧಿಯಾ ಶಾಲೆಯನ್ನು 1897 ರಲ್ಲಿ ಅಂದಿನ ಗ್ವಾಲಿಯರ್ ಸಂಸ್ಥಾನದ ವತಿಯಿಂದ ಸ್ಥಾಪಿಸಲಾಗಿತ್ತು. ಇದು ಐತಿಹಾಸಿಕ ಗ್ವಾಲಿಯರ್ ಕೋಟೆಯ ಮೇಲೆ ನೆಲೆಗೊಂಡಿದೆ. ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಸಿಂಧಿಯಾ ರಾಜಮನೆತನದ ಉತ್ತರಾಧಿಕಾರಿಯಾಗಿದ್ದಾರೆ. ಪ್ರಸ್ತುತ ಮಧ್ಯಪ್ರದೇಶದ ವರ್ಚಸ್ವಿ ರಾಜಕೀಯ ನಾಯಕ. ಅಂದಹಾಗೆ, ಮಧ್ಯಪ್ರದೇಶದಲ್ಲಿ ನವೆಂಬರ್ 17 ರಂದು ವಿಧಾನಸಭೆ ಚುನಾವಣೆ ನಡೆಯಲಿದೆ.
ಕಳೆದ ಎರಡು ಲೋಕಸಭಾ ಚುನಾವಣೆಗಳಂತೆ ಮಧ್ಯಪ್ರದೇಶದ ಮತದಾರರು ವಿಧಾನಸಭೆ ಚುನಾವಣೆಯಲ್ಲಿ ನೇರವಾಗಿ ಬೆಂಬಲಿಸಿ ಡಬಲ್ ಇಂಜಿನ್ ಸರ್ಕಾರವನ್ನು ಆಯ್ಕೆ ಮಾಡುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜ್ಯದ ಜನತೆಯನ್ನು ಉದ್ದೇಶಿಸಿ ಬರೆದಿರುವ ಪತ್ರದಲ್ಲಿ ಮಧ್ಯಪ್ರದೇಶದೊಂದಿಗೆ ನನಗೆ ಯಾವಾಗಲೂ ವಿಶೇಷ ಸಂಪರ್ಕ ಸೇತುವೆಯಿದೆ, ಅದಕ್ಕಾಗಿಯೇ 2014 ಮತ್ತು 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಭೂತಪೂರ್ವ ಗೆಲುವಿನತ್ತ ಮುನ್ನಡೆಸುವಾಗ ಜನರು ತಮ್ಮ ಮೇಲೆ ಅಪರಿಮಿತ ಪ್ರೀತಿಯನ್ನು ತೋರಿದರು ಎಂದು ಮೋದಿ ಪತ್ರದಲ್ಲಿ ಹೇಳಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ