6 ತಿಂಗಳಲ್ಲಿ ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕೆ ಪ್ರಧಾನಿ ಮೋದಿ ನಿರ್ದೇಶನ
ಮುಂದಿನ ತಿಂಗಳು ದೀಪಾವಳಿಯ ನಂತರ ಸರ್ಕಾರದ ಪ್ರಚಾರವು ಪ್ರಾರಂಭವಾಗಲಿದ್ದು, ಹಲವಾರು ವಾರಗಳವರೆಗೆ ಮುಂದುವರಿಯುವ ನಿರೀಕ್ಷೆಯಿದೆ. ವಿಕಸಿತ್ ಭಾರತ್ ಸಂಕಲ್ಪ ಯಾತ್ರೆಯ ಅಡಿಯಲ್ಲಿ, ವಿಶೇಷವಾಗಿ ಅಳವಡಿಸಲಾದ 'ರಥಗಳು' ದೇಶಾದ್ಯಂತ ಫಲಾನುಭವಿಗಳನ್ನು ತಲುಪುತ್ತವೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ದೆಹಲಿ ಅಕ್ಟೋಬರ್ 21:, ಪ್ರಧಾನಿ ನರೇಂದ್ರ ಮೋದಿ (Narendra Modi)ಅವರು ಆರು ತಿಂಗಳೊಳಗೆ ಗ್ರಾಮೀಣ ಪ್ರದೇಶಗಳಲ್ಲಿ ತಮ್ಮ ಸರ್ಕಾರದ ಕಲ್ಯಾಣ ಯೋಜನೆಗಳ ಸಂಪೂರ್ಣ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಯೋಜನೆಗಳ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಎಲ್ಲಾ 2.7 ಲಕ್ಷ ಪಂಚಾಯತ್‌ಗಳಲ್ಲಿ ‘ವಿಕಸಿತ್ ಭಾರತ್ ಸಂಕಲ್ಪ ಯಾತ್ರೆ’ಯನ್ನು (Viksit Bharat Sankalp Yatra) ಪ್ರಾರಂಭಿಸುತ್ತದೆ.
ಮುಂದಿನ ತಿಂಗಳು ದೀಪಾವಳಿಯ ನಂತರ ಸರ್ಕಾರದ ಪ್ರಚಾರವು ಪ್ರಾರಂಭವಾಗಲಿದ್ದು, ಹಲವಾರು ವಾರಗಳವರೆಗೆ ಮುಂದುವರಿಯುವ ನಿರೀಕ್ಷೆಯಿದೆ. ವಿಕಸಿತ್ ಭಾರತ್ ಸಂಕಲ್ಪ ಯಾತ್ರೆಯ ಅಡಿಯಲ್ಲಿ, ವಿಶೇಷವಾಗಿ ಅಳವಡಿಸಲಾದ ‘ರಥಗಳು’ ದೇಶಾದ್ಯಂತ ಫಲಾನುಭವಿಗಳನ್ನು ತಲುಪುತ್ತವೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಗಡುವಿನ ಅಡಿಯಲ್ಲಿ ಅನುಷ್ಠಾನದ ಮುಖ್ಯ ಗಮನವು ಇನ್ನೂ ಪ್ರಯೋಜನಗಳನ್ನು ಪಡೆಯದ ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು ಎಂದು ಇತ್ತೀಚೆಗೆ ನಡೆದ ಸಂಪುಟ ಸಭೆಯೊಂದರಲ್ಲಿ ಪ್ರಧಾನಿ ಮೋದಿ ಒತ್ತಿ ಹೇಳಿದರು. ಉನ್ನತ ಅಧಿಕಾರಿಗಳೊಂದಿಗಿನ ಸಭೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಕಲ್ಯಾಣ ಯೋಜನೆಗಳ ಅನುಷ್ಠಾನ ತ್ವರಿತಗೊಳಿಸುವ ಅಗತ್ಯವನ್ನು ಒತ್ತಿ ಹೇಳಿದರು.
PM Narendra Modi speaks about his focus on saturation of welfare schemes and reaching all beneficiaries@PMOIndia #TheScindiaSchool pic.twitter.com/5ZhMxl4Lsc
— DD News (@DDNewslive) October 21, 2023
ಮುಂದಿನ ಆರು ತಿಂಗಳಲ್ಲಿ ಅವರ ಎಲ್ಲಾ ಯೋಜನೆಗಳು ಪೂರ್ಣ ಪ್ರಮಾಣದ ಅನುಷ್ಠಾನ ಅನ್ನು ತಲುಪಬೇಕೆಂದು ಅವರು ಬಯಸುತ್ತಾರೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ), ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್, ಪಿಎಂ ಕಿಸಾನ್, ಫಸಲ್ ಬಿಮಾ ಯೋಜನೆ, ಪೋಷಣ್ ಅಭಿಯಾನ, ಉಜ್ವಲ ಯೋಜನೆ, ಆಯುಷ್ಮಾನ್ ಭಾರತ್, ಜನೌಷಧಿ ಯೋಜನೆ ಮತ್ತು ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ, ಕೌಶಲ್ಯ ಅಭಿವೃದ್ಧಿ ಯೋಜನೆಗಳು ಮತ್ತು ಇತ್ತೀಚೆಗೆ ಪ್ರಾರಂಭಿಸಲಾದ ವಿಶ್ವಕರ್ಮ ಯೋಜನೆಯ ಸಂಪೂರ್ಣ ಅನುಷ್ಠಾನ ಈ ಅಭಿಯಾನದ ಗುರಿ ಆಗಿದೆ ಎಂದು ಪಿಟಿಐ ಹೇಳಿದೆ.
ಇದನ್ನೂ ಓದಿ: ಅದಾನಿ, ಬಿಜೆಪಿ ಸಂಸದರ ವಿರುದ್ಧ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಾಗ್ದಾಳಿ
ಕಲ್ಯಾಣ ಯೋಜನೆಗಳ ಅನುಷ್ಠಾನದ ಅಗತ್ಯತೆಯ ಬಗ್ಗೆ ಪಿಎಂ ಮೋದಿಯವರು ಪದೇ ಪದೇ ಒತ್ತು ನೀಡುತ್ತಿದ್ದಾರೆ. ಅಂತಹ ವಿಧಾನವು ಯಾವುದೇ ತಾರತಮ್ಯವನ್ನು ನಿವಾರಿಸುತ್ತದೆ ಮತ್ತು ಪ್ರತಿಯೊಬ್ಬ ಅರ್ಹ ನಾಗರಿಕರಿಗೆ ಕಲ್ಯಾಣ ಉಪಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಸಭೆಯೊಂದರಲ್ಲಿ ಪಿಎಂ ಮೋದಿ ಒತ್ತಿ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ