ದೆಹಲಿ: ಕೇಂದ್ರ ಲೋಕಸೇವಾ ಆಯೋಗ (UPSC)ದ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅಭಿನಂದನೆ ಸಲ್ಲಿಸಿದ್ದಾರೆ. ಇದೀಗ ಉತ್ತೀರ್ಣರಾದವರು ಮುಂದೆ ಪ್ರಮುಖ ಆಡಳಿತಾತ್ಮಕ ಹುದ್ದೆಗಳಿಗೆ ಏರಿ, ತೃಪ್ತಿದಾಯಕವಾಗಿ ಸಾರ್ವಜನಿಕ ಸೇವೆ ಸಲ್ಲಿಸಲಿದ್ದಾರೆ ಎಂಬ ಭರವಸೆ ವ್ಯಕ್ತಪಡಿಸಿದರು. ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ (UPSC Civil Services Examination )ಉತ್ತೀರ್ಣರಾದ ಎಲ್ಲರಿಗೂ ಅಭಿನಂದನೆಗಳು. ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ಅವರಿಗಾಗಿ ಅತ್ಯಂತ ಆಕರ್ಷಕವಾದ ಮತ್ತು ತೃಪ್ತಿದಾಯಕವಾದ ವೃತ್ತಿ ಕಾಯುತ್ತಿದೆ. ನಮ್ಮ ರಾಷ್ಟ್ರದ ಅಭಿವೃದ್ಧಿಯೆಡೆಗಿನ ಪ್ರಯಾಣದ ಅವಧಿಯಲ್ಲಿ ಇವರೆಲ್ಲ ಅತ್ಯಂತ ಪ್ರಮುಖವಾದ ಆಡಳಿತಾತ್ಮಕ ಪಾತ್ರ ನಿರ್ವಹಿಸಲಿದ್ದಾರೆ ಎಂದು ಹೇಳಿದ್ದಾರೆ.
Congratulations to those who successfully cleared the UPSC Civil Services examination. An exciting and satisfying career in public service awaits.
Those who have cleared the exam will go on to have key administrative roles during an important period of our nation’s journey.
— Narendra Modi (@narendramodi) September 24, 2021
ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸ್ ಆದವರಿಗೆ ಅಭಿನಂದನೆ ಸಲ್ಲಿಸಿದ್ದಲ್ಲದೆ, ಅನುತ್ತೀರ್ಣರಾದವರಿಗೂ ಧೈರ್ಯ ತುಂಬಿ ಟ್ವೀಟ್ ಮಾಡಿದ್ದಾರೆ. ಪ್ರೋತ್ಸಾಹ ತುಂಬಿ ಟ್ವೀಟ್ ಮಾಡಿದ್ದಾರೆ. ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ನನ್ನ ಎಲ್ಲ ಸ್ನೇಹಿತರಿಗೂ ನಾನೊಂದು ಮಾತು ಹೇಳುತ್ತೇನೆ. ನೀವೆಲ್ಲರೂ ತುಂಬ ಬುದ್ಧಿವಂತರೇ ಆಗಿದ್ದೀರಿ. ಆದರೆ ಇನ್ನೂ ಸ್ವಲ್ಪ ಹೆಚ್ಚಿನ ಪ್ರಯತ್ನ ಬೇಕಾಗಿದೆ. ಅಂದಹಾಗೆ, ಭಾರತದಲ್ಲಿ ವೈವಿಧ್ಯಮಯ ಅವಕಾಶ ಇದೆ.. ನಿಮ್ಮ ಅನ್ವೇಷಣೆಗೆ ಮಾನ್ಯತೆ ಇದೆ. ಹೀಗಾಗಿ ಮುಂದೆ ಏನನ್ನೇ ಆಯ್ಕೆ ಮಾಡಿಕೊಳ್ಳುವುದಿದ್ದರೂ ಶುಭವಾಗಲಿ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
To those young friends who did not clear the UPSC examination, I would like to say- you are very talented individuals. There are more attempts awaiting.
At the same time, India is full of diverse opportunities waiting to be explored. Best wishes in whatever you decide to do.
— Narendra Modi (@narendramodi) September 24, 2021
ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆ ಫಲಿತಾಂಶ ನಿನ್ನೆ ಪ್ರಕಟವಾಗಿದ್ದು, ಅದರಲ್ಲಿ 545 ಪುರುಷರು ಮತ್ತು 216 ಮಹಿಳೆಯರು ಸೇರಿ ಒಟ್ಟು 761 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿವಿಧ ಅಧಿಕಾರಿಗಳ ವರ್ಗ, ರಾಜತಾಂತ್ರಿಕರು ಮತ್ತು ಪೊಲೀಸ್ ಅಧಿಕಾರಿಗಳ ಹುದ್ದೆ ತುಂಬಲು ಯುಪಿಎಸ್ಸಿ ವಾರ್ಷಿಕವಾಗಿ ಈ ಪರೀಕ್ಷೆಯನ್ನು ನಡೆಸುತ್ತದೆ.
ಇದನ್ನೂ ಓದಿ: UPSC: ಯುಪಿಎಸ್ಸಿ ಫಲಿತಾಂಶ ಪ್ರಕಟ; ಅಕ್ಷಯ್ ಸಿಂಹಗೆ 77ನೇ ರ್‍ಯಾಂಕ್, ಸಿರಿವೆನ್ನೆಲಗೆ 204ನೇ ರ್‍ಯಾಂಕ್
ಚೆನ್ನೈ ಮೂಲದ 2 ಖಾಸಗಿ ಹಣಕಾಸು ಸಂಸ್ಥೆಗಳ ಮೇಲೆ ಐಟಿ ದಾಳಿ; 300 ಕೋಟಿ ರೂ. ಬಹಿರಂಗ ಪಡಿಸದ ಆದಾಯ ಪತ್ತೆ