ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಗುರು ಗೋವಿಂದ ಸಿಂಗ್ ಜಯಂತಿ (Guru Gobind Singh’s jayanti)ನಿಮಿತ್ತ ಸಿಖ್ ಸಮುದಾಯದವರಿಗೆ ಶುಭಕೋರಿದ್ದಾರೆ. ಗುರು ಗೋವಿಂದ್ ಸಿಂಗ್ ಅವರು ಸಿಖ್ಖರ 10ನೇ ಗುರು. ಅವರ ಜೀವನ ಸಂದೇಶಗಳು ಲಕ್ಷಾಂತರ ಜನರಿಗೆ ಬಲ, ಸ್ಫೂರ್ತಿ ನೀಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಹಾಗೇ, 2017ರಲ್ಲಿ ಬಿಹಾರದ ಪಾಟ್ನಾದಲ್ಲಿ ನಡೆದಿದ್ದ ಗುರು ಗೋವಿಂದ್ ಸಿಂಗ್ 350ನೇ ಪ್ರಕಾಶ ಪರ್ವದಲ್ಲಿ ತಾವು ಪಾಲ್ಗೊಂಡು, ಗುರುವಿಗೆ ನಮನ ಸಲ್ಲಿಸಿದ ಫೋಟೋಗಳನ್ನು ಶೇರ್ ಮಾಡಿಕೊಂಡ ಪ್ರಧಾನಿ ಮೋದಿ, ಶ್ರೀ ಗುರು ಗೋವಿಂದ್ ಜೀ ಅವರ ಪ್ರಕಾಶ ಪರ್ವದ ಶುಭ ಹಾರೈಕೆಗಳು. ಶ್ರೀ ಗುರುಗೋವಿಂದರ 350ನೇ ಪ್ರಕಾಶ ಉತ್ಸವ ಆಚರಿಸಲು ನಮ್ಮ ಸರ್ಕಾರಕ್ಕೆ ಅವಕಾಶ ಸಿಕ್ಕಿದ್ದು ತುಂಬ ಸಂತೋಷ ಕೊಟ್ಟಿದೆ ಎಂದು ಹೇಳಿದ್ದಾರೆ.
Greetings on the Parkash Purab of Sri Guru Gobind Singh Ji. His life and message give strength to millions of people. I will always cherish the fact that our Government got the opportunity to mark his 350th Parkash Utsav. Sharing some glimpses from my visit to Patna at that time. pic.twitter.com/1ANjFXI1UA
— Narendra Modi (@narendramodi) January 9, 2022
ಗುರು ಗೋವಿಂದ ಸಿಂಗ್ ಜಯಂತಿಯನ್ನು ಸಿಖ್ಖರ ನಾನಾಕ್ಷಹಿ ಕ್ಯಾಲೆಂಡರ್ ಆಧಾರದಲ್ಲಿ ಆಚರಿಸಲಾಗುತ್ತದೆ. ಇಂದು ಬರೀ ಭಾರತದಲ್ಲಿ ಅಷ್ಟೇ ಅಲ್ಲ, ಜಗತ್ತಿನಾದ್ಯಂತ ಇರುವ ಎಲ್ಲ ಗುರುದ್ವಾರಗಳಲ್ಲೂ ಪ್ರಕಾಶ ಪರ್ವ ಆಚರಿಸುತ್ತಾರೆ. ಇಂದು ಸಿಖ್ ಸಮುದಾಯದವರು ಪರಸ್ಪರರಿಗೆ ಶುಭ ಹಾರೈಸಿಕೊಳ್ಳುತ್ತಾರೆ. ಗುರು ಗೋವಿಂದ್ ಸಿಂಗ್ ಮಹಾನ್ ಹೋರಾಟಗಾರರು. ಭಾರತದಲ್ಲಿ ಮೊಘಲರ ಆಳ್ವಿಕೆಯನ್ನು ತೀವ್ರವಾಗಿ ವಿರೋಧಿಸಿದ್ದ ಅವರು ಆಡಳಿತಗಾರರ ದೌರ್ಜನ್ಯದ ವಿರುದ್ಧ ಹೋರಾಡಿದ್ದರು. ಅದರೊಂದಿಗೆ ಕಾವ್ಯ, ತತ್ವಶಾಸ್ತ್ರಗಳ ಕಡೆಗೆ ಅಪಾರ ಒಲವು ಹೊಂದಿದ್ದರು. ಶಾಂತಿ ಮತ್ತು ಸಮಾನತೆಯನ್ನು ಬೋಧಿಸುವ ಮೂಲಕ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಜಾತಿ ವ್ಯವಸ್ಥೆ ಮತ್ತು ಭಾರತವನ್ನು ಹಿಂದಕ್ಕೆ ತಳ್ಳುವ ಇನ್ನಿತರ ಎಲ್ಲ ವ್ಯವಸ್ಥೆಗಳಿಗೂ ವಿರೋಧ ವ್ಯಕ್ತಪಡಿಸುತ್ತಿದ್ದರು.
ಇದನ್ನೂ ಓದಿ: SulliDeals ಸುಲ್ಲಿ ಡೀಲ್ಸ್ ಅಪ್ಲಿಕೇಶನ್ ಕ್ರಿಯೇಟರ್ ಓಂಕಾರೇಶ್ವರ ಠಾಕೂರ್ ಬಂಧನ
Published On - 10:33 am, Sun, 9 January 22