Covid 19: ದೇಶದಲ್ಲಿ ಏರುತ್ತಿದೆ ಕೊರೊನಾ; ಒಂದೇ ದಿನ 1,59,632 ಪ್ರಕರಣ ಪತ್ತೆ, 327 ಜನರ ಸಾವು
Omicron: ಭಾರತದಲ್ಲಿ ಒಮಿಕ್ರಾನ್ ಹಾಗೂ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿವೆ. ಕಳೆದ 24 ಗಂಟೆಗಳ ಅವಧಿಯಲ್ಲಿ 1,59,632 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಪಾಸಿಟಿವಿಟಿ ಪ್ರಮಾಣ ಶೇ.10.21 ರಷ್ಟಿದೆ.
ಭಾರತದಲ್ಲಿ ಕೊರೊನಾ ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಇತ್ತೀಚಿನ ಬುಲೆಟಿನ್ ಪ್ರಕಾರ ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 1,59,632 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದೆ. ಆತಂಕದ ಸಂಗತಿಯೆಂದರೆ ಕೊವಿಡ್ ಪಾಸಿಟಿವಿಟಿ ರೇಟ್ ಶೇ. 10.21ರಷ್ಟಿದೆ. ಭಾರತದಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 5,90,611 ಕ್ಕೆ ತಲುಪಿದೆ. ಕಳೆದ 24 ಗಂಟೆಯಲ್ಲಿ 327 ಜನರು ಮೃತಪಟ್ಟಿದ್ದು, ದೇಶದಲ್ಲಿ ಇದುವರೆಗೆ ಸೋಂಕಿನಿಂದ 4,83,790 ಜನರು ನಿಧನರಾಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ 40,863 ರೋಗಿಗಳು ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಈ ಮೂಲಕ ಇಲ್ಲಿಯವರೆಗೆ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 3,44,53,603 ಕ್ಕೆ ತಲುಪಿದೆ.
India reports 1,59,632 fresh COVID cases, 40,863 recoveries, and 327 deaths in the last 24 hours
Daily positivity rate: 10.21%
Active cases: 5,90,611 Total recoveries: 3,44,53,603 Death toll: 4,83,790
Total vaccination: 151.58 crore doses pic.twitter.com/Qmm2qQcHOS
— ANI (@ANI) January 9, 2022
ಏರುತ್ತಿವೆ ಒಮಿಕ್ರಾನ್ ಪ್ರಕರಣಗಳು: ಭಾರತದಲ್ಲಿ ಒಮಿಕ್ರಾನ್ ಪ್ರಕರಣಗಳಲ್ಲೂ ಏರಿಕೆಯಾಗಿದ್ದು, 3,623 ಜನರು ಸೋಂಕಿಗೆ ತುತ್ತಾಗಿದ್ದಾರೆ. ಪ್ರಸ್ತುತ, 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. 1,409 ಜನರು ಒಮಿಕ್ರಾನ್ನಿಂದ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಸಚಿವಾಲಯ ತಿಳಿಸಿದೆ.
COVID19 | A total of 3,623 #Omicron cases were reported in 27 States/UTs of India so far. The number of persons recovered is 1,409: Union Health Ministry pic.twitter.com/MGU1Q7lgMc
— ANI (@ANI) January 9, 2022
ಭಾರತದಲ್ಲಿ ಲಸಿಕೆ ನೀಡಿಕೆ ತ್ವರಿತವಾಗಿ ಸಾಗುತ್ತಿದ್ದು, ಒಟ್ಟು 151.58 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.
ಇದನ್ನೂ ಓದಿ:
Published On - 9:53 am, Sun, 9 January 22