AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Guru Gobind Singh’s Jayanti 2022: ಸಿಖ್​ ಸಮುದಾಯದವರಿಗೆ ಗುರು ಗೋವಿಂದ ಸಿಂಗ್​ ಜಯಂತಿ ಶುಭ ಕೋರಿದ ಪ್ರಧಾನಿ ಮೋದಿ

ಗುರು ಗೋವಿಂದ ಸಿಂಗ್​ ಜಯಂತಿಯನ್ನು ಸಿಖ್ಖರ ನಾನಾಕ್ಷಹಿ ಕ್ಯಾಲೆಂಡರ್​​​ ಆಧಾರದಲ್ಲಿ ಆಚರಿಸಲಾಗುತ್ತದೆ. ಇಂದು ಬರೀ ಭಾರತದಲ್ಲಿ ಅಷ್ಟೇ ಅಲ್ಲ, ಜಗತ್ತಿನಾದ್ಯಂತ ಇರುವ ಎಲ್ಲ ಗುರುದ್ವಾರಗಳಲ್ಲೂ ಪ್ರಕಾಶ ಪರ್ವ ಆಚರಿಸುತ್ತಾರೆ.

Guru Gobind Singh's Jayanti 2022: ಸಿಖ್​ ಸಮುದಾಯದವರಿಗೆ ಗುರು ಗೋವಿಂದ ಸಿಂಗ್​ ಜಯಂತಿ ಶುಭ ಕೋರಿದ ಪ್ರಧಾನಿ ಮೋದಿ
ಗುರು ಗೋವಿಂದ್ ಸಿಂಗ್​
TV9 Web
| Updated By: Lakshmi Hegde|

Updated on:Jan 09, 2022 | 10:35 AM

Share

ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಗುರು ಗೋವಿಂದ ಸಿಂಗ್​ ಜಯಂತಿ (Guru Gobind Singh’s jayanti)ನಿಮಿತ್ತ ಸಿಖ್​ ಸಮುದಾಯದವರಿಗೆ ಶುಭಕೋರಿದ್ದಾರೆ. ಗುರು ಗೋವಿಂದ್​ ಸಿಂಗ್​ ಅವರು ಸಿಖ್ಖರ 10ನೇ ಗುರು.  ಅವರ ಜೀವನ ಸಂದೇಶಗಳು ಲಕ್ಷಾಂತರ ಜನರಿಗೆ ಬಲ, ಸ್ಫೂರ್ತಿ ನೀಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಹಾಗೇ, 2017ರಲ್ಲಿ ಬಿಹಾರದ ಪಾಟ್ನಾದಲ್ಲಿ ನಡೆದಿದ್ದ ಗುರು ಗೋವಿಂದ್ ಸಿಂಗ್​ 350ನೇ ಪ್ರಕಾಶ ಪರ್ವದಲ್ಲಿ ತಾವು ಪಾಲ್ಗೊಂಡು, ಗುರುವಿಗೆ ನಮನ ಸಲ್ಲಿಸಿದ ಫೋಟೋಗಳನ್ನು ಶೇರ್​ ಮಾಡಿಕೊಂಡ ಪ್ರಧಾನಿ ಮೋದಿ, ಶ್ರೀ ಗುರು ಗೋವಿಂದ್​ ಜೀ ಅವರ ಪ್ರಕಾಶ ಪರ್ವದ ಶುಭ ಹಾರೈಕೆಗಳು. ಶ್ರೀ ಗುರುಗೋವಿಂದರ 350ನೇ ಪ್ರಕಾಶ ಉತ್ಸವ ಆಚರಿಸಲು ನಮ್ಮ ಸರ್ಕಾರಕ್ಕೆ ಅವಕಾಶ ಸಿಕ್ಕಿದ್ದು ತುಂಬ ಸಂತೋಷ ಕೊಟ್ಟಿದೆ  ಎಂದು ಹೇಳಿದ್ದಾರೆ.

ಗುರು ಗೋವಿಂದ ಸಿಂಗ್​ ಜಯಂತಿಯನ್ನು ಸಿಖ್ಖರ ನಾನಾಕ್ಷಹಿ ಕ್ಯಾಲೆಂಡರ್​​​ ಆಧಾರದಲ್ಲಿ ಆಚರಿಸಲಾಗುತ್ತದೆ. ಇಂದು ಬರೀ ಭಾರತದಲ್ಲಿ ಅಷ್ಟೇ ಅಲ್ಲ, ಜಗತ್ತಿನಾದ್ಯಂತ ಇರುವ ಎಲ್ಲ ಗುರುದ್ವಾರಗಳಲ್ಲೂ ಪ್ರಕಾಶ ಪರ್ವ ಆಚರಿಸುತ್ತಾರೆ. ಇಂದು ಸಿಖ್​ ಸಮುದಾಯದವರು ಪರಸ್ಪರರಿಗೆ ಶುಭ ಹಾರೈಸಿಕೊಳ್ಳುತ್ತಾರೆ. ಗುರು ಗೋವಿಂದ್ ಸಿಂಗ್​ ಮಹಾನ್ ಹೋರಾಟಗಾರರು. ಭಾರತದಲ್ಲಿ ಮೊಘಲರ ಆಳ್ವಿಕೆಯನ್ನು ತೀವ್ರವಾಗಿ ವಿರೋಧಿಸಿದ್ದ ಅವರು ಆಡಳಿತಗಾರರ ದೌರ್ಜನ್ಯದ ವಿರುದ್ಧ ಹೋರಾಡಿದ್ದರು. ಅದರೊಂದಿಗೆ ಕಾವ್ಯ, ತತ್ವಶಾಸ್ತ್ರಗಳ ಕಡೆಗೆ ಅಪಾರ ಒಲವು ಹೊಂದಿದ್ದರು. ಶಾಂತಿ ಮತ್ತು ಸಮಾನತೆಯನ್ನು ಬೋಧಿಸುವ ಮೂಲಕ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಜಾತಿ ವ್ಯವಸ್ಥೆ ಮತ್ತು ಭಾರತವನ್ನು ಹಿಂದಕ್ಕೆ ತಳ್ಳುವ ಇನ್ನಿತರ ಎಲ್ಲ ವ್ಯವಸ್ಥೆಗಳಿಗೂ ವಿರೋಧ ವ್ಯಕ್ತಪಡಿಸುತ್ತಿದ್ದರು.

ಇದನ್ನೂ ಓದಿ: SulliDeals ಸುಲ್ಲಿ ಡೀಲ್ಸ್ ಅಪ್ಲಿಕೇಶನ್ ಕ್ರಿಯೇಟರ್ ಓಂಕಾರೇಶ್ವರ ಠಾಕೂರ್ ಬಂಧನ

Published On - 10:33 am, Sun, 9 January 22

Daily Devotional: ಹುತ್ತವಿರುವ ನಿವೇಶನ ಖರೀದಿಸಿದರೆ ಲಾಭವೋ ನಷ್ಟವೋ?
Daily Devotional: ಹುತ್ತವಿರುವ ನಿವೇಶನ ಖರೀದಿಸಿದರೆ ಲಾಭವೋ ನಷ್ಟವೋ?
Daily horoscope: ಈ ರಾಶಿಯವರಿಗೆ ಆರ್ಥಿಕ ಲಾಭ ಮತ್ತು ವಾಹನ ಖರೀದಿ ಯೋಗ
Daily horoscope: ಈ ರಾಶಿಯವರಿಗೆ ಆರ್ಥಿಕ ಲಾಭ ಮತ್ತು ವಾಹನ ಖರೀದಿ ಯೋಗ
ಶಿಥಿಲಾವಸ್ಥೆಗೆ ತಲುಪಿದ 1937ರಲ್ಲಿ ನಿರ್ಮಾಣವಾದ ಸರ್ಕಾರಿ ಶಾಲೆ
ಶಿಥಿಲಾವಸ್ಥೆಗೆ ತಲುಪಿದ 1937ರಲ್ಲಿ ನಿರ್ಮಾಣವಾದ ಸರ್ಕಾರಿ ಶಾಲೆ
ಯಾರದ್ದೋ ಜಿದ್ದಿನ ಮೇಲೆ ಸಿನಿಮಾ ನಿರ್ಮಿಸುತ್ತಿದ್ದಾರಾ ಯಶ್ ತಾಯಿ?
ಯಾರದ್ದೋ ಜಿದ್ದಿನ ಮೇಲೆ ಸಿನಿಮಾ ನಿರ್ಮಿಸುತ್ತಿದ್ದಾರಾ ಯಶ್ ತಾಯಿ?
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ