AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾರ್ಖಂಡ್: ಸಿಎಂ ನಿವಾಸದಲ್ಲಿ ಕೊರೊನಾ ಸ್ಫೋಟ; ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಪತ್ನಿ ಹಾಗೂ ಮಕ್ಕಳೂ ಸೇರಿದಂತೆ 15 ಮಂದಿಗೆ ಕೊವಿಡ್

Hemant Soren | Covid 19: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಕುಟುಂಬ ಕೊವಿಡ್ ಸೋಂಕಿಗೆ ತುತ್ತಾಗಿದೆ. ಪರೀಕ್ಷಾ ವರದಿಯಲ್ಲಿ ಹೇಮಂತ್ ಅವರ ವರದಿ ನೆಗೆಟಿವ್ ಬಂದಿದೆ.

ಜಾರ್ಖಂಡ್: ಸಿಎಂ ನಿವಾಸದಲ್ಲಿ ಕೊರೊನಾ ಸ್ಫೋಟ; ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಪತ್ನಿ ಹಾಗೂ ಮಕ್ಕಳೂ ಸೇರಿದಂತೆ 15 ಮಂದಿಗೆ ಕೊವಿಡ್
ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್
TV9 Web
| Updated By: shivaprasad.hs|

Updated on:Jan 09, 2022 | 9:26 AM

Share

ಜಾರ್ಖಂಡ್ ಮುಖ್ಯಮಂತ್ರಿ (Jharkhan CM) ಹೇಮಂತ್ ಸೊರೆನ್ ಅವರ ನಿವಾಸದಲ್ಲಿ ಅವರ ಪತ್ನಿ, ಇಬ್ಬರು ಮಕ್ಕಳು ಮತ್ತು ಸೊಸೆ ಸೇರಿದಂತೆ ಒಟ್ಟು 15 ಜನರು ಕೊರೊನ ವೈರಸ್ ಪಾಸಿಟಿವ್ ಆಗಿದ್ದಾರೆ. ಅಚ್ಚರಿಯೆಂಬಂತೆ ಹೇಮಂತ್ ಸೊರೇನ್ (Hemant Soren) ವರದಿ ನೆಗೆಟಿವ್ ಬಂದಿದೆ.   ಮುಖ್ಯಮಂತ್ರಿಯವರ ನಿವಾಸದಲ್ಲಿ ಇಲ್ಲಿಯವರೆಗೆ 62 ಜನರನ್ನು ಕೊವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ರಾಂಚಿಯ ಮುಖ್ಯ ವೈದ್ಯಾಧಿಕಾರಿ ವಿನೋದ್ ಕುಮಾರ್ ತಿಳಿಸಿದ್ದಾರೆ. ಅವರಲ್ಲಿ 24 ಮಂದಿಯ ವರದಿಗಳು ಇಂದು (ಶನಿವಾರ) ಸಂಜೆ ಲಭ್ಯವಾಗಿದೆ. ಪಾಸಿಟಿವ್ ಬಂದ 15 ಮಂದಿಯಲ್ಲಿ ಸಿಎಂ ಪತ್ನಿ ಕಲ್ಪನಾ ಸೊರೆನ್, ಅವರ ಇಬ್ಬರು ಮಕ್ಕಳಾದ ನಿತಿನ್ ಮತ್ತು ವಿಶ್ವಜಿತ್, ಸೊಸೆ ಸರಳಾ ಮುರ್ಮು ಮತ್ತು ಅಂಗರಕ್ಷಕ ಸೇರಿದ್ದಾರೆ ಎಂದು ಕುಮಾರ್ ಮಾಹಿತಿ ನೀಡಿದ್ದಾರೆ. ನಿವಾಸದಲ್ಲಿರುವ ಎಲ್ಲಾ ಸೋಂಕಿತ ರೋಗಿಗಳು ಸೌಮ್ಯವಾದ ಕೊವಿಡ್ ರೋಗಲಕ್ಷಣಗಳನ್ನು ಹೊಂದಿದ್ದಾರೆ. ಆದ್ದರಿಂದ ಅವರಿಗೆ ಮನೆಯಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಬಹುದು ಎಂದು ರಾಂಚಿ ಮುಖ್ಯಮಂತ್ರಿ ಕಚೇರಿ ಪಿಟಿಐಗೆ ತಿಳಿಸಿದೆ.

ಜಾರ್ಖಂಡ್ ಆರೋಗ್ಯ ಸಚಿ ಬನ್ನಾ ಗುಪ್ತಾಗೆ ಎರಡನೇ ಬಾರಿ ಕೊವಿಡ್ ಸೋಂಕು: ಈ ನಡುವೆ ಜಾರ್ಖಂಡ್ ಆರೋಗ್ಯ ಸಚಿವ ಬನ್ನಾ ಗುಪ್ತಾ ಅವರಿಗೂ ಕೊವಿಡ್ ಸೋಂಕು ದೃಢಪಟ್ಟಿದೆ. ಅವರು ಜಮ್ಶೆಡ್‌ಪುರದ ತಮ್ಮ ನಿವಾಸದಲ್ಲಿ ಐಸೋಲೇಷನ್​ನಲ್ಲಿದ್ದಾರೆ. ಆರೋಗ್ಯ ಸಚಿವ ಬನ್ನಾ ಗುಪ್ತಾ ಅವರಿಗೆ 2020ರಲ್ಲೂ ಕೊವಿಡ್ ತಗುಲಿತ್ತು. ‘‘ನನ್ನ ಕರ್ತವ್ಯವನ್ನು ನಿರ್ವಹಿಸುವಾಗ ನಾನು ಮತ್ತೊಮ್ಮೆ ಕೋವಿಡ್ ಪಾಸಿಟಿವ್ ಆಗಿದ್ದೇನೆ. ಕಳೆದ ಕೆಲವು ದಿನಗಳಿಂದ ನನಗೆ ಆರೋಗ್ಯ ಚೆನ್ನಾಗಿರಲಿಲ್ಲ. ಆದ್ದರಿಂದ ಪರೀಕ್ಷೆಗೆ ಒಳಗಾದೆ. ಅದರಲ್ಲಿ ಪಾಸಿಟಿವ್ ಬಂದಿದೆ. ಕಳೆದ ಕೆಲವು ದಿನಗಳಲ್ಲಿ ನನ್ನೊಂದಿಗೆ ಸಂಪರ್ಕಕ್ಕೆ ಬಂದವರೆಲ್ಲರೂ ಪರೀಕ್ಷಿಸಿಕೊಳ್ಳಿ. ನಾನು ಪ್ರಸ್ತುತ ಐಸೋಲೇಷನ್​ನಲ್ಲಿದ್ದೇನೆ’’ ಎಂದು ಗುಪ್ತಾ ಅವರು ಟ್ವೀಟ್ ಮಾಡಿದ್ದಾರೆ.

ಜಾರ್ಖಂಡ್​ನಲ್ಲಿ ಇದುವರೆಗೆ 3,74,000 ಪ್ರಕರಣಗಳು ದೃಢಪಟ್ಟಿದ್ದು, 5,164 ಜನರು ಮೃತಪಟ್ಟಿದ್ದಾರೆ. 21,098 ಸಕ್ರಿಯ ಪ್ರಕರಣಗಳಿದ್ದು, 3,47,866 ಜನರು ಗುಣಮುಖರಾಗಿದ್ದಾರೆ. ಶನಿವಾರ ಒಂದೇ ದಿನ 5,081 ಪ್ರಕರಣಗಳು ದೃಢಪಟ್ಟಿದ್ದು, 3 ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಜಾರ್ಖಂಡ್​ನಲ್ಲಿ ಇಲ್ಲಿಯವರೆಗೆ ಅತ್ಯಂತ ವೇಗವಾಗಿ ಹರಡುವ ಕೊರೊನಾ ರೂಪಾಂತರಿಯಾದ ‘ಒಮಿಕ್ರಾನ್​’ನ ಒಂದೂ ಪ್ರಕರಣ ದಾಖಲಾಗಿಲ್ಲ.

ಇದನ್ನೂ ಓದಿ:

ಒಮಿಕ್ರಾನ್ ರೂಪಾಂತರಿಯಿಂದಾಗಿ ಅಮೆರಿಕದಲ್ಲಿ ಕೊವಿಡ್ ಉಲ್ಬಣ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಏರಿಕೆ

ICICI Bank credit cards: ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಶುಲ್ಕ ಪರಿಷ್ಕರಣೆ; 1200 ರೂಪಾಯಿ ತನಕ ವಿಳಂಬ ಶುಲ್ಕ

Published On - 9:23 am, Sun, 9 January 22

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ