ಐಟಿ ದಾಳಿ: ಮಧ್ಯಪ್ರದೇಶದ ಉದ್ಯಮಿ ಮನೆಯಿಂದ ₹ 8 ಕೋಟಿ ನಗದು ವಶ, ನೀರಿನ ಟ್ಯಾಂಕ್‌ನಲ್ಲಿ ಪತ್ತೆಯಾಗಿದ್ದು ₹1 ಕೋಟಿ
ರಾಯ್ ಕುಟುಂಬದಿಂದ ₹ 8 ಕೋಟಿ ನಗದನ್ನು ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿದ್ದು, ನೀರಿನ ಪಾತ್ರೆಯಲ್ಲಿ ತುಂಬಿದ್ದ ₹ 1 ಕೋಟಿ ನಗದನ್ನು ಒಳಗೊಂಡ ಬ್ಯಾಗ್‌ನ ಜೊತೆಗೆ ಮೂರು ಕೆಜಿ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ’ ಎಂದು ಜಂಟಿ ಆಯುಕ್ತ ಮುನ್‌ಮುನ್ ಶರ್ಮಾ ತಿಳಿಸಿದ್ದಾರೆ.
ಭೋಪಾಲ್: ಮಧ್ಯಪ್ರದೇಶದ (Madhya Pradesh)ದಾಮೋಹ್ ಜಿಲ್ಲೆಯಲ್ಲಿ ಉದ್ಯಮಿ ಶಂಕರ್ ರಾಯ್ (Shankar Rai) ಮತ್ತು ಅವರ ಕುಟುಂಬದ ಮೇಲೆ ಗುರುವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ (IT Riad) ನಡೆಸಿದ್ದು, ₹ 8 ಕೋಟಿಗೂ ಅಧಿಕ ಮೌಲ್ಯದ ನಗದು ವಶಪಡಿಸಿಕೊಂಡಿದ್ದಾರೆ. ಮನೆಯಡಿಯಲ್ಲಿರುವ ನೀರಿನ ತೊಟ್ಟಿಯಲ್ಲಿ ಬಚ್ಚಿಟ್ಟಿದ್ದ ಚೀಲದಲ್ಲಿ ₹1 ಕೋಟಿ ನಗದು ಪತ್ತೆಯಾಗಿದೆ. ನೀರಿನಲ್ಲಿ ಒದ್ದೆಯಾಗಿರುವ ನೋಟುಗಳನ್ನುಅಧಿಕಾರಿಗಳು ಒಣಗಿಸುತ್ತಿರುವ ದೃಶ್ಯಗಳು ವಿಡಿಯೊದಲ್ಲಿದೆ. ನಗದು ಅಲ್ಲದೆ ಸುಮಾರು ₹ 5 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ. ‘ರಾಯ್ ಕುಟುಂಬದಿಂದ ₹ 8 ಕೋಟಿ ನಗದನ್ನು ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿದ್ದು, ನೀರಿನ ಪಾತ್ರೆಯಲ್ಲಿ ತುಂಬಿದ್ದ ₹ 1 ಕೋಟಿ ನಗದನ್ನು ಒಳಗೊಂಡ ಬ್ಯಾಗ್‌ನ ಜೊತೆಗೆ ಮೂರು ಕೆಜಿ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ’ ಎಂದು ಜಂಟಿ ಆಯುಕ್ತ ಮುನ್‌ಮುನ್ ಶರ್ಮಾ (Munmun Sharma) ತಿಳಿಸಿದ್ದಾರೆ. ಜಬಲ್‌ಪುರದ ಆದಾಯ ತೆರಿಗೆ ಇಲಾಖೆಯವರು ತೆರಿಗೆ ದಾಳಿಯ ನೇತೃತ್ವ ವಹಿಸಿದ್ದರು. ರಾಯ್ ಅವರು ಕಾಂಗ್ರೆಸ್ ಬೆಂಬಲದೊಂದಿಗೆ ದಾಮೋಹ್ ನಗರ ಪಾಲಿಕೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರೆ, ಅವರ ಸಹೋದರ ಕಮಲ್ ರಾಯ್ ಈ ಹಿಂದೆ ಬಿಜೆಪಿ ಬೆಂಬಲದೊಂದಿಗೆ ದಾಮೋಹ್ ನಗರ ಪಾಲಿಕೆ ಉಪಾಧ್ಯಕ್ಷರಾಗಿದ್ದರು.
ಗುರುವಾರ ಬೆಳಗ್ಗೆ 5 ಗಂಟೆಗೆ ಆರಂಭವಾದ ದಾಳಿ 39 ಗಂಟೆಗಳ ಕಾಲ ಮುಂದುವರಿಯಿತು. ಶಂಕರ್ ರಾಯ್ ಕುಟುಂಬದ ಒಡೆತನದ ಹತ್ತಕ್ಕೂ ಹೆಚ್ಚು ನಿವೇಶನಗಳ ಮೇಲೆ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಯ್ ಅವರ ಕುಟುಂಬವು ನೌಕರರ ಹೆಸರಿನಲ್ಲಿ ಸುಮಾರು ಮೂರು ಡಜನ್ ಬಸ್‌ಗಳನ್ನು ಓಡಿಸುತ್ತಿದೆ ಎಂದು ತೆರಿಗೆ ಇಲಾಖೆ ಬಹಿರಂಗಪಡಿಸಿದೆ.
Madhya Pradesh | Income-tax department conducted a raid at the premises of local liquor businessman Shankar Rai and his family in Damoh yesterday
Details awaited pic.twitter.com/Nn538l5O2B
— ANI (@ANI) January 8, 2022
ಮಧ್ಯಪ್ರದೇಶ ಅಥವಾ ಇನ್ನಾವುದೇ ಸ್ಥಳದಲ್ಲಿರುವ ರಾಯ್ ಕುಟುಂಬದ ಆಸ್ತಿ ಬಗ್ಗೆ ಹೆಚ್ಚಿನ ಮಾಹಿತಿ ನೀಡುವವರಿಗೆ ₹ 10,000 ಬಹುಮಾನವನ್ನು ಇಲಾಖೆ ಘೋಷಿಸಿದೆ. ಕಾರ್ಯಾಚರಣೆ ಮುಗಿದ ನಂತರ, ಜಂಟಿ ಆಯುಕ್ತರು, “ಭೌತಿಕ ದಾಳಿ ಮುಗಿದಿದೆ ಮತ್ತು ಭೋಪಾಲ್‌ನಲ್ಲಿ ರಾಯ್ ಕುಟುಂಬದಿಂದ ವಶಪಡಿಸಿಕೊಂಡಿರುವ ದಾಖಲೆಗಳ ಆಧಾರದ ಮೇಲೆ ತನಿಖೆ ಮುಂದುವರಿಯುತ್ತದೆ” ಎಂದು ಹೇಳಿದರು.
“ಇಲಾಖೆಯು ಈಗ ವಶಪಡಿಸಿಕೊಂಡ ದಾಖಲೆಗಳು ಮತ್ತು ಬೇನಾಮಿ ಆಸ್ತಿಗಳನ್ನು ತನಿಖೆ ಮಾಡುತ್ತದೆ. ಆದ್ದರಿಂದ, ನಾವು ಅಂತಿಮ ಅಂಕಿಅಂಶಕ್ಕಾಗಿ ಕಾಯಬೇಕಾಗಿದೆ” ಎಂದು ಜಂಟಿ ಆಯುಕ್ತರು ಹೇಳಿದರು. 2019 ಜನವರಿಯಲ್ಲಿ ಪೂರ್ವ ಉತ್ತರ ಪ್ರದೇಶದ ಚಂದೌಲಿ ಕ್ಷೇತ್ರದ ಸಮಾಜವಾದಿ ಪಕ್ಷದ ಮಾಜಿ ಸಂಸದ ಜವಾಹರ್ ಜೈಸ್ವಾಲ್ನ್ನು ಉತ್ತರ ಪ್ರದೇಶ ಎಸ್‌ಟಿಎಫ್ ಸಂಜಯ್ ರಾಯ್ (ಶಂಕರ್ ರಾಯ್ ಅವರ ಸಹೋದರ) ಆವರಣದಿಂದ ಬಂಧಿಸಿತ್ತು.
ಇದನ್ನೂ ಓದಿ: Fatima Sheikh ಮುಸ್ಲಿಂ ಸಮುದಾಯದ ಮೊದಲ ಶಿಕ್ಷಕಿ ಫಾತಿಮಾ ಶೇಖ್ಗೆ ಗೂಗಲ್ ಡೂಡಲ್ ಗೌರವ
Published On - 9:38 am, Sun, 9 January 22