Fatima Sheikh ಮುಸ್ಲಿಂ ಸಮುದಾಯದ ಮೊದಲ ಶಿಕ್ಷಕಿ ಫಾತಿಮಾ ಶೇಖ್​​ಗೆ ಗೂಗಲ್ ಡೂಡಲ್ ಗೌರವ

Fatima Sheikh Birth Anniversary ಸಮಾಜ ಸುಧಾರಕರಾದ ಜ್ಯೋತಿರಾವ್ ಮತ್ತು ಸಾವಿತ್ರಿಬಾಯಿ ಫುಲೆ ಅವರ ಸಹ ಪ್ರವರ್ತಕರಾದ ಫಾತಿಮಾ ಶೇಖ್, 1848 ಶಾಲೆಯೊಂದನ್ನು ಸ್ಥಾಪಿಸಿದ್ದು ಇದು ಭಾರತದಲ್ಲಿ ಬಾಲಕಿಯರಿಗಾಗಿ ಆರಂಭಿಸಿದ ಮೊದಲ ಶಾಲೆಯಾಗಿದೆ.

Fatima Sheikh ಮುಸ್ಲಿಂ ಸಮುದಾಯದ ಮೊದಲ ಶಿಕ್ಷಕಿ ಫಾತಿಮಾ ಶೇಖ್​​ಗೆ ಗೂಗಲ್ ಡೂಡಲ್ ಗೌರವ
ಗೂಗಲ್ ಡೂಡಲ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jan 09, 2022 | 8:45 AM

ದೆಹಲಿ: ಭಾರತದ ಮೊದಲ ಮುಸ್ಲಿಂ ಶಿಕ್ಷಕಿ ಎಂದು ಪರಿಗಣಿಸಲ್ಪಟ್ಟಿರುವ ಶಿಕ್ಷಣ ತಜ್ಞೆ(educator )ಮತ್ತು ಸ್ತ್ರೀವಾದಿ ಐಕಾನ್ (feminist icon) ಫಾತಿಮಾ ಶೇಖ್​​ಗೆ (Fatima Sheikh) ಗೂಗಲ್ ಡೂಡಲ್‌ (Doodle) ಮೂಲಕ ಗೌರವ ಸಲ್ಲಿಸಿದೆ.  ಸಮಾಜ ಸುಧಾರಕರಾದ ಜ್ಯೋತಿರಾವ್ ಮತ್ತು ಸಾವಿತ್ರಿಬಾಯಿ ಫುಲೆ ಅವರ ಸಹ ಪ್ರವರ್ತಕರಾದ ಫಾತಿಮಾ ಶೇಖ್, 1848 ಶಾಲೆಯೊಂದನ್ನು ಸ್ಥಾಪಿಸಿದ್ದು ಇದು ಭಾರತದಲ್ಲಿ ಬಾಲಕಿಯರಿಗಾಗಿ ಆರಂಭಿಸಿದ ಮೊದಲ ಶಾಲೆಯಾಗಿದೆ. ಫಾತಿಮಾ ಶೇಖ್ ಅವರು 1831 ಜನವರಿ 9ರಂದು ಪುಣೆಯಲ್ಲಿಜನಿಸಿದರು. ಫಾತಿಮಾ ತನ್ನ ಸಹೋದರ ಉಸ್ಮಾನ್‌ನೊಂದಿಗೆ ವಾಸಿಸುತ್ತಿದ್ದರು. ಕೆಳಜಾತಿಗಳ ಜನರಿಗೆ ಶಿಕ್ಷಣ ನೀಡಲು ಪ್ರಯತ್ನಿಸಿದ್ದಕ್ಕಾಗಿ ಫುಲೆ ದಂಪತಿಗಳನ್ನು ಮನೆಯಿಂದ ಹೊರಹಾಕಿದ್ದಾಗ ಫಾತಿಮಾ ಕುಟುಂಬ ಫುಲೆ ದಂಪತಿಗೆ ಆಶ್ರಯ ನೀಡಿತ್ತು. ಶೇಖ್‌ಗಳ ಮನೆಯ ಛಾವಣಿಯ ಅಡಿಯಲ್ಲಿಯೇ  ಫುಲೆ  ದಂಪತಿ  ಶಾಲೆ ಆರಂಭಿಸಿದ್ದರು. ಇಲ್ಲಿ ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಖ್ ಅವರು ವರ್ಗ, ಧರ್ಮ ಅಥವಾ ಲಿಂಗದ ಆಧಾರದ ಮೇಲೆ ಶಿಕ್ಷಣವನ್ನು ನಿರಾಕರಿಸಿದ ದಲಿತ ಮತ್ತು ಮುಸ್ಲಿಂ ಮಹಿಳೆಯರು ಮತ್ತು ಮಕ್ಕಳಿಗೆ ಕಲಿಸಿದರು.

ಸಮಾನತೆಗಾಗಿ ಸದಾ ಹೋರಾಡಿದ ಶೇಖ್ ತನ್ನ ಸಮುದಾಯದ ದೀನದಲಿತರು ಸ್ಥಳೀಯ ಶಾಲೆಯಲ್ಲಿ ಕಲಿಯಲು ಮತ್ತು ಭಾರತೀಯ ಜಾತಿ ವ್ಯವಸ್ಥೆಯ ಬಿಗಿತದಿಂದ ಪಾರು ಮಾಡಲು ಮನೆ-ಮನೆಗೆ ಹೋಗಿ ಕಲಿಕೆಯ ಮಹತ್ವ ಸಾರಿದರು, ಸತ್ಯಶೋಧಕ್ ಆಂದೋಲನದಲ್ಲಿ ತೊಡಗಿಸಿಕೊಂಡವರನ್ನು ಅವಮಾನಿಸಲು ಪ್ರಯತ್ನಿಸಿದ ಪ್ರಬಲ ವರ್ಗಗಳಿಂದ ಅವರಿಗೆ ದೊಡ್ಡ ಪ್ರತಿರೋಧವನ್ನು ಎದುರಾಗಿದ್ದರೂ ಶೇಖ್ ಮತ್ತು ಅವರ ಸಹ ಪ್ರವರ್ತಕರು ಜಗ್ಗಲಿಲ್ಲ. ಭಾರತ ಸರ್ಕಾರವು 2014 ರಲ್ಲಿ  ಉರ್ದು ಪಠ್ಯಪುಸ್ತಕಗಳಲ್ಲಿ ಇತರ ಶಿಕ್ಷಣ ತಜ್ಞರೊಂದಿಗೆ ಅವರ ಫಾತಿಮಾ ಶೇಖ್ ಅವರ ಸಾಧನೆಗಳನ್ನು ಸೇರಿಸುವ ಮೂಲಕ ಫಾತಿಮಾ ಅವರ ಕಾರ್ಯಗಳನ್ನು ಮತ್ತಷ್ಟು ಪರಿಚಯಿಸಿತು.

ಯುವ ಪೀಳಿಗೆಗೆ ಫಾತಿಮಾ ಶೇಖ್ ಬಗ್ಗೆ ಅರಿವು ಮೂಡಿಸಲು ಕರ್ನಾಟಕ ಸರ್ಕಾರಕ್ಕೆ ಒತ್ತಾಯ ಯುವ ಪೀಳಿಗೆಗೆ ಫಾತಿಮಾ ಶೇಖ್ ಬಗ್ಗೆ ಅರಿವು ಮೂಡಿಸಬೇಕು ಎಂದು ಹಾವೇರಿಯ ಗೊಟಗೋಡಿನಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಅರುಣ್ ಜೋಳದಕೂಡ್ಲಿಗಿ ಒತ್ತಾಯಿಸಿದ್ದಾರೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಜತೆ ಮಾತನಾಡಿದ ಅರುಣ್, ಸಾವಿತ್ರಿಬಾಯಿ ಫುಲೆ ಅವರ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಯೋಜನೆಗಳಿಗೆ ಸಾಕಷ್ಟು ವಿರೋಧವಿತ್ತು. ಪುಣೆಯ ಗಂಜ್ ಪೇಠ್ ನಿವಾಸಿ ಉಸ್ಮಾನ್ ಶೇಖ್ ಎಂಬುವವರು ಸಾವಿತ್ರಿಬಾಯಿ ಮತ್ತು ಅವರ ಪತಿ ಜ್ಯೋತಿಬಾ ಫುಲೆ ಅವರನ್ನು ತಮ್ಮ ಮನೆಯಲ್ಲಿ ಶಾಲೆಯನ್ನು ಪ್ರಾರಂಭಿಸಲು ಆಹ್ವಾನಿಸಿದರು. ಉತ್ತಮ ಶಿಕ್ಷಣ ಪಡೆದ ಅವರ ತಂಗಿ ಫಾತಿಮಾ ಶಾಲೆಯಲ್ಲಿ ಪಾಠ ಮಾಡಲು ಪ್ರಾರಂಭಿಸಿದರು. ಫಾತಿಮಾ ತನ್ನ ಸಮುದಾಯದ ಮುಖಂಡರಿಂದ ಪ್ರತಿರೋಧವನ್ನು ಎದುರಿಸಿದಾಗ ಅವಳ ಸಹೋದರ ಅವಳ ಬೆಂಬಲಕ್ಕೆ ನಿಂತರು. ತಮ್ಮ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮುಸ್ಲಿಂ ಸಮುದಾಯದ ಪೋಷಕರಿಗೆ ಫಾತಿಮಾ ಮನವರಿಕೆ ಮಾಡಿದರು. ಎರಡು ಕುಟುಂಬಗಳ ನಡುವಿನ ಬಾಂಧವ್ಯವು 19 ನೇ ಶತಮಾನದಲ್ಲಿ ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ನಡುವಿನ ಏಕತೆಯ ಸಂಕೇತವಾಗಿತ್ತು ಎಂದಿದ್ದಾರೆ.

ಮಹಾರಾಷ್ಟ್ರ ಸರ್ಕಾರವು 2014 ರಲ್ಲಿ ತನ್ನ ಬಾಲ ಭಾರತಿ ಪಠ್ಯಪುಸ್ತಕದಲ್ಲಿ ಫಾತಿಮಾ ಅವರ ಸಂಕ್ಷಿಪ್ತ ಪಾಠವನ್ನು ಸೇರಿಸಿದೆ ಎಂದು ಸೂಚಿಸಿದ ಜೋಳದಕೂಡ್ಲಿಗಿ, ಕರ್ನಾಟಕ ಸರ್ಕಾರವು ಯುವ ಪೀಳಿಗೆಗೆ ಅವರ ಪರಂಪರೆಯ ಬಗ್ಗೆ ಶಿಕ್ಷಣ ನೀಡುವಂತೆ ಕರೆ ನೀಡಿದ್ದಾರೆ.  ಸಾವಿತ್ರಿಬಾಯಿಯವರು ತಮ್ಮ ಪತಿ ಜ್ಯೋತಿಬಾ ಅವರಿಗೆ ಬರೆದ ಪತ್ರಗಳು ಫಾತಿಮಾ ಅವರನ್ನು ಶ್ಲಾಘಿಸುವಲ್ಲಿ ಉತ್ಕೃಷ್ಟವಾಗಿವೆ ಎಂದು ಬೆಂಗಳೂರಿನ ಕವಿ ಕೆ ಷರೀಫಾ ತಿಳಿಸಿದರು. “ಐತಿಹಾಸಿಕ ನಕ್ಷೆಯಲ್ಲಿ ಫಾತಿಮಾ ಇಲ್ಲದಿರುವುದು ಆಶ್ಚರ್ಯಕರವಾಗಿದೆ. ಫುಲೆ ದಂಪತಿಗಳು ನಿಧನರಾಗಿ 170 ವರ್ಷಗಳಾಗಿವೆ. ಫಾತಿಮಾ ಅವರ ಜನ್ಮ ದಿನಾಚರಣೆಯನ್ನೂ ಆಚರಿಸಬೇಕಿದೆ ಎಂದು ಷರೀಫಾ ಹೇಳಿದ್ದಾರೆ.

ಇದನ್ನೂ ಓದಿ: ಪಿಡಿಪಿ ಸಂಸ್ಥಾಪಕ ಮುಫ್ತಿ ಮೊಹಮ್ಮದ್​ ಸೈಯೀದ್ ಪುಣ್ಯತಿಥಿ ಆಚರಿಸಿದವರ ವಿರುದ್ಧ ಎಫ್​ಐಆರ್​; ಆಕ್ರೋಶ ವ್ಯಕ್ತಪಡಿಸಿದ ಮೆಹಬೂಬಾ ಮುಫ್ತಿ

Published On - 8:27 am, Sun, 9 January 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ