ಪಿಡಿಪಿ ಸಂಸ್ಥಾಪಕ ಮುಫ್ತಿ ಮೊಹಮ್ಮದ್​ ಸೈಯೀದ್ ಪುಣ್ಯತಿಥಿ ಆಚರಿಸಿದವರ ವಿರುದ್ಧ ಎಫ್​ಐಆರ್​; ಆಕ್ರೋಶ ವ್ಯಕ್ತಪಡಿಸಿದ ಮೆಹಬೂಬಾ ಮುಫ್ತಿ

ಪಿಡಿಪಿ ಸಂಸ್ಥಾಪಕ ಮುಫ್ತಿ ಮೊಹಮ್ಮದ್​ ಸೈಯೀದ್ ಪುಣ್ಯತಿಥಿ ಆಚರಿಸಿದವರ ವಿರುದ್ಧ ಎಫ್​ಐಆರ್​; ಆಕ್ರೋಶ ವ್ಯಕ್ತಪಡಿಸಿದ ಮೆಹಬೂಬಾ ಮುಫ್ತಿ
ಮುಫ್ತಿ ಮೊಹಮ್ಮದ್​ ಸೈಯೀದ್​

ಮುಫ್ತಿ ಸೈಯೀದ್​ ಪುಣ್ಯ ತಿಥಿ ಆಚರಿಸಿದವರ ವಿರುದ್ಧ ಎಫ್​ಐಆರ್ ದಾಖಲಿಸಿದ್ದನ್ನು ಅವರ ಪುತ್ರಿ, ಪಕ್ಷದ ಈಗಿನ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಖಂಡಿಸಿದ್ದಾರೆ.  ಕೊವಿಡ್ 19 ಶಿಷ್ಟಾಚಾರ, ನಿಯಂತ್ರಣ ನಿಯಮಗಳೆಲ್ಲ ಕೇವಲ ಪಿಡಿಪಿಗೆ ಮಾತ್ರ ಅನ್ವಯ ಎಂಬಂತೆ ತೋರುತ್ತದೆ ಎಂದು ಹೇಳಿದ್ದಾರೆ.

TV9kannada Web Team

| Edited By: Lakshmi Hegde

Jan 09, 2022 | 8:04 AM

ಶ್ರೀನಗರ: ಜಮ್ಮು-ಕಾಶ್ಮೀರದ ಪಿಡಿಪಿ(ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ) ಪಕ್ಷದ ಸಂಸ್ಥಾಪಕರಾದ ಮೃತ ಮುಫ್ತಿ ಮೊಹಮ್ಮದ್​ ಸೈಯೀದ್​ ಅವರ ಪುಣ್ಯತಿಥಿ ಆಚರಿಸಿದ ಪಕ್ಷದ 10 ಮುಖಂಡರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.  ಮುಫ್ತಿ ಸೈಯೀದ್​ 2016ರ ಜನವರಿ 7ರಂದು ಮೃತಪಟ್ಟಿದ್ದಾರೆ. ಹಾಗೇ, ಈ ಜನವರಿ 7ರಂದು ಅವರು ಮೃತಪಟ್ಟು ಆರು ವರ್ಷ ಆದ ಹಿನ್ನೆಲೆಯಲ್ಲಿ, ಪಿಡಿಪಿ ಮುಖಂಡರು ಪುಣ್ಯ ತಿಥಿ ಆಚರಿಸಿ, ಸ್ಮರಿಸಿದ್ದರು. ಇದಕ್ಕಾಗಿ ಅವರು ಸಮಾರಂಭ ಆಯೋಜಿಸಿ, ಹಲವರು ಪಾಲ್ಗೊಂಡಿದ್ದರು. ಆದರೆ ಹೀಗೆ ಡೆತ್ ಆ್ಯನಿವರ್ಸರಿ ಆಚರಿಸಿದ ನಾಯಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್, ಪೊಲೀಸರಿಗೆ ಸೂಚಿಸಿದ್ದರು. ಅದರ ಆಧಾದರ ಮೇಲೆ ಎಫ್​ಐಆರ್​ ದಾಖಲಾಗಿದೆ. 

ಮುಫ್ತಿ ಸೈಯೀದ್​ ಪುಣ್ಯ ತಿಥಿ ಆಚರಿಸಿದವರ ವಿರುದ್ಧ ಎಫ್​ಐಆರ್ ದಾಖಲಿಸಿದ್ದನ್ನು ಅವರ ಪುತ್ರಿ, ಪಕ್ಷದ ಈಗಿನ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಖಂಡಿಸಿದ್ದಾರೆ.  ಕೊವಿಡ್ 19 ಶಿಷ್ಟಾಚಾರ, ನಿಯಂತ್ರಣ ನಿಯಮಗಳೆಲ್ಲ ಕೇವಲ ಪಿಡಿಪಿಗೆ ಮಾತ್ರ ಅನ್ವಯ ಎಂಬಂತೆ ತೋರುತ್ತದೆ. ಇತ್ತೀಚೆಗಷ್ಟೇ ಬಿಜೆಪಿ ಪಕ್ಷ ಕಾಶ್ಮೀರದಲ್ಲಿ ಪ್ರತಿಭಟನೆ ನಡೆಸಿತು. ಆಗ ಕೊರೊನಾ ಪ್ರೊಟೊಕಾಲ್​ ನೆನಪಾಗಲಿಲ್ಲವಾ? ಕೊರೊನಾ ಇದ್ದರೂ ಪಂಜಾಬ್​​ನಲ್ಲಿ ರ್ಯಾಲಿ ನಡೆಸಲು ಪ್ರಧಾನಿ ಮೋದಿ ಹೊರಟಿದ್ದರು. ಅದಾದ ನಂತರ ಅವರ ಭದ್ರತೆ ಲೋಪವಾಗಿ, ಅದೆಷ್ಟೋ ಜನರ ಗುಂಪುಗುಂಪಾಗಿ ಹೋಗಿ ದೇವರಿಗೆ ಪೂಜೆ ಸಲ್ಲಿಸಿದರು. ಆದರೆ ಜಮ್ಮು-ಕಾಶ್ಮೀರ ಆಡಳಿತಕ್ಕೆ ಕೇವಲ ನನ್ನ ಪಕ್ಷ ಕಾಣಿಸುತ್ತದೆ ಎಂದು ಮುಫ್ತಿ ಟ್ವೀಟ್​ ಮಾಡಿದ್ದಾರೆ.

ಅಷ್ಟೇ ಅಲ್ಲ, ಅನಂತ್​ನಾಗ್​ ಜಿಲ್ಲೆಯ ಡಿಸಿ, ಹೊಸ ವರ್ಷ ಸಂಭ್ರಮಾಚರಣೆಯಲ್ಲಿ ಮಾಸ್ಕ್​ ಇಲ್ಲದೆ ಪಾಲ್ಗೊಂಡ ವಿಡಿಯೋವನ್ನು ಜಮ್ಮು ಕಾಶ್ಮೀರ ಪಿಡಿಪಿ ಶೇರ್​ ಮಾಡಿಕೊಂಡಿದೆ. ಇಲ್ಲಿ ನೋಡಿ, ಇವರು ಅನಂತ್​ನಾಗ್​ ಜಿಲ್ಲಾಧಿಕಾರಿ. ಹೊಸವರ್ಷ ಆಚರಣೆಯಲ್ಲಿ ಸಾವಿರಾರು ಜನರ ಜತೆಯಿಲ್ಲಿ, ಮಾಸ್ಕ್​ ಇಲ್ಲದೆ ಪಾಲ್ಗೊಂಡಿದ್ದಾರೆ. ಆದರೆ ಪಿಡಿಪಿ ಪಕ್ಷದ ವಿಚಾರಕ್ಕೆ ಬಂದರೆ ಮಾತ್ರ ಇದು ತಪ್ಪು. ಕೊವಿಡ್​ 19 ಸಡನ್​ ಆಗಿ ರಾಜಕೀಯವಾಗಿ ಬದಲಾಗುತ್ತದೆ ಎಂದು ಹೇಳಿದ್ದಾರೆ. ಅಂದಹಾಗೆ, ಮುಫ್ತಿ ಮೊಹಮ್ಮದ್​ ಸೈಯೀದ್ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮೆಹಬೂಬಾ ಮುಫ್ತಿ ಕೂಡ ಪಾಲ್ಗೊಂಡಿದ್ದರು. ಆದರೆ ಎಫ್​ಐಆರ್​​ನಲ್ಲಿ ಅವರ ಹೆಸರು ಇಲ್ಲ.

ಇದನ್ನೂ ಓದಿ: Congress – Mekedatu Padayatra Live: 11 ದಿನದ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ಇಂದು ಚಾಲನೆ

Follow us on

Related Stories

Most Read Stories

Click on your DTH Provider to Add TV9 Kannada