Narendra Modi: ಎನ್​ಇಪಿ ಮೂಲಕ ಭವಿಷ್ಯದ ಶಿಕ್ಷಣ ವ್ಯವಸ್ಥೆ; ಪ್ರಧಾನಿ ಮೋದಿ

| Updated By: Ganapathi Sharma

Updated on: Dec 24, 2022 | 12:21 PM

Shree Swaminarayan Gurukul; ಸ್ವಾಮಿನಾರಾಯಣರ ಸೇವೆ, ತತ್ವ ಹಾಗೂ ಸಿದ್ಧಾಂತ ನಮಗೆಲ್ಲ ಮಾದರಿಯಾಗಿದೆ. ದೇಶದಲ್ಲಿದ್ದ ಜೀತ ಪದ್ಧತಿ, ಗುಲಾಮಿ ಸಂಸ್ಕೃತಿ ನಿರ್ಮೂಲನೆಯಿಂದಾಗಿ ಇಂದು ಇಡೀ ವಿಶ್ವವು ಭಾರತದತ್ತ ತಿರುಗಿ ನೋಡುವಂತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Narendra Modi: ಎನ್​ಇಪಿ ಮೂಲಕ ಭವಿಷ್ಯದ ಶಿಕ್ಷಣ ವ್ಯವಸ್ಥೆ; ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ (ಎಎನ್​ಐ ಚಿತ್ರ)
Image Credit source: ANI
Follow us on

ನವದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿ (NEP) ಮೂಲಕ ಭವಿಷ್ಯದ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವುದನ್ನು ಎದುರುನೋಡುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು. ಶ್ರೀ ಸ್ವಾಮಿನಾರಾಯಣ ಗುರುಕುಲ ರಾಜ್‌ಕೋಟ್ ಸಂಸ್ಥಾನದ (Shree Swaminarayan Gurukul Rajkot Samsthan) 75ನೇ ಅಮೃತ ಮಹೋತ್ಸವ (Amrut Mahotsav) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. 2014ರ ನಂತರ ದೇಶದಲ್ಲಿ ಐಐಟಿಗಳು, ಐಐಎಂಗಳು ಮತ್ತು ವೈದ್ಯಕೀಯ ಕಾಲೇಜುಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ ಎಂದು ಹೇಳಿದರು.

ಸ್ವಾಮಿನಾರಾಯಣರ ಸೇವೆ, ತತ್ವ ಹಾಗೂ ಸಿದ್ಧಾಂತ ನಮಗೆಲ್ಲ ಮಾದರಿಯಾಗಿದೆ. ದೇಶದಲ್ಲಿದ್ದ ಜೀತ ಪದ್ಧತಿ, ಗುಲಾಮಿ ಸಂಸ್ಕೃತಿ ನಿರ್ಮೂಲನೆಯಿಂದಾಗಿ ಇಂದು ಇಡೀ ವಿಶ್ವವು ಭಾರತದತ್ತ ತಿರುಗಿ ನೋಡುವಂತಾಗಿದೆ. ಆತ್ಮನಿರ್ಭರ​​​ ಯೋಜನೆಯಿಂದಾಗಿ ಭಾರತ ಸ್ವಾವಲಂಬನೆಯತ್ತ ಸಾಗುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಸಾಧಿಸುವತ್ತ ಮುನ್ನಡೆಯುತ್ತಿದ್ದೇವೆ ಎಂದು ಪ್ರಧಾನಿ ಹೇಳಿದರು.

ಸ್ವಾತಂತ್ರ್ಯ ಪಡೆದ ನಂತರ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಭಾರತದ ಭವ್ಯ ಇತಿಹಾಸವನ್ನು ಪುನರುಜ್ಜೀವನಗೊಳಿಸುವುದು ನಮ್ಮ ಜವಾಬ್ದಾರಿಯಾಗಿದೆ. ವಸಾಹತುಶಾಹಿ ಮನಸ್ಥಿತಿಯಲ್ಲಿದ್ದ ಹಿಂದಿನ ಸರ್ಕಾರಗಳು ಈ ಬಗ್ಗೆ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ: Shree Swaminarayan Gurukul: ಶ್ರೀ ಸ್ವಾಮಿನಾರಾಯಣ ಗುರುಕುಲ ರಾಜ್​ಕೋಟ್ ಸಂಸ್ಥಾನದ ಅಮೃತ ಮಹೋತ್ಸವದಲ್ಲಿ ಪ್ರಧಾನಿ ಮೋದಿ ಭಾಷಣ

40ಕ್ಕೂ ಹೆಚ್ಚು ಶಾಖೆ ಹೊಂದಿರುವ ಸ್ವಾಮಿನಾರಾಯಣ ಗುರುಕುಲ

ಶ್ರೀ ಸ್ವಾಮಿನಾರಾಯಣರ ಆಜ್ಞೆಗಳನ್ನು ಪಾಲಿಸುವ ಮತ್ತು ಪ್ರಸಾರ ಮಾಡುವ ಉದ್ದೇಶಕ್ಕಾಗಿ ಎಚ್.ಎಚ್.ಗುರುದೇವ್ ಶಾಸ್ತ್ರೀಜಿ ಮಹಾರಾಜ್ ಶ್ರೀ ಧರ್ಮಜೀವನದಾಸ್​ ಜೀ ಸ್ವಾಮಿಗಳು 1948 ರಲ್ಲಿ ಗುಜರಾತ್​ನ ರಾಜ್​ಕೋಟ್​ನಲ್ಲಿ ಶ್ರೀ ಸ್ವಾಮಿನಾರಾಯಣ ಗುರುಕುಲವನ್ನು ಸ್ಥಾಪಿಸಿದ್ದರು. ಆ ಮೂಲಕ ಭಾರತದ ಪ್ರಾಚೀನ ಗುರುಕುಲ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಿದ್ದು, ಯುವಪೀಳಿಗೆಗೆ ಧಾರ್ಮಿಕ ಸದ್ಗುಣಗಳೊಂದಿಗೆ ನಿಜವಾದ ಶಿಕ್ಷಣವನ್ನು ನೀಡಿ ಸಮಾಜ ಮತ್ತು ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಅನುವು ಮಾಡಿಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಈ ಗುರುಕುಲವು ಪ್ರಸ್ತುತ ಪ್ರಪಂಚದಾದ್ಯಂತ 40ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಅಲ್ಲದೆ 25,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಾಲೆ, ಪದವಿಪೂರ್ವ ಮತ್ತು ಸ್ನಾತಕೋತ್ತರ ಶಿಕ್ಷಣಕ್ಕಾಗಿ ಸೌಲಭ್ಯಗಳನ್ನು ಒದಗಿಸುತ್ತಿದೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:56 am, Sat, 24 December 22