Shree Swaminarayan Gurukul: ಶ್ರೀ ಸ್ವಾಮಿನಾರಾಯಣ ಗುರುಕುಲ ರಾಜ್‌ಕೋಟ್ ಸಂಸ್ಥಾನದ ಅಮೃತ ಮಹೋತ್ಸವದಲ್ಲಿ ಪ್ರಧಾನಿ ಮೋದಿ ಭಾಷಣ
ಶ್ರೀ ಸ್ವಾಮಿನಾರಾಯಣ ಗುರುಕುಲ ರಾಜ್‌ಕೋಟ್ ಸಂಸ್ಥಾನವನ್ನು 1948ರಲ್ಲಿ ರಾಜ್‌ಕೋಟ್‌ನಲ್ಲಿ ಧರ್ಮದರ್ಶಿ ಶ್ರೀ ಧರ್ಮಜೀವಂದಾಸ್ ಸ್ವಾಮಿ ಅವರು ಸ್ಥಾಪಿಸಿದರು. ಹೀಗೆ ಆರಂಭವಾದ ಈ ಗುರುಕುಲವು ಪ್ರಸ್ತುತ ಪ್ರಪಂಚದಾದ್ಯಂತ 40ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ.
ಶ್ರೀ ಸ್ವಾಮಿನಾರಾಯಣ ಗುರುಕುಲ ರಾಜ್‌ಕೋಟ್ ಸಂಸ್ಥಾನ (Shree Swaminarayan Gurukul Rajkot Samsthan)ದ 75ನೇ ಅಮೃತ ಮಹೋತ್ಸವ (Amrut Mahotsav) ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಶನಿವಾರ (ಡಿ.24) ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾಷಣ ಮಾಡಲಿದ್ದಾರೆ ಎಂದು ಪ್ರಧಾನಮಂತ್ರಿ ಕಚೇರಿ ತಿಳಿಸಿದೆ. ಶ್ರೀ ಸ್ವಾಮಿನಾರಾಯಣ ಗುರುಕುಲ ರಾಜ್‌ಕೋಟ್ ಸಂಸ್ಥಾನವನ್ನು 1948ರಲ್ಲಿ ರಾಜ್‌ಕೋಟ್‌ನಲ್ಲಿ ಧರ್ಮದರ್ಶಿ ಶ್ರೀ ಧರ್ಮಜೀವಂದಾಸ್ ಸ್ವಾಮಿ ಅವರು ಸ್ಥಾಪಿಸಿದರು. ಹೀಗೆ ಆರಂಭವಾದ ಈ ಗುರುಕುಲವು ಪ್ರಸ್ತುತ ಪ್ರಪಂಚದಾದ್ಯಂತ 40ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಅಲ್ಲದೆ 25,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಾಲೆ, ಪದವಿಪೂರ್ವ ಮತ್ತು ಸ್ನಾತಕೋತ್ತರ ಶಿಕ್ಷಣಕ್ಕಾಗಿ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ಪ್ರಧಾನ ಮಂತ್ರಿ ಕಚೇರಿ (PMO) ತಿಳಿಸಿದೆ.
ಶ್ರೀ ಸ್ವಾಮಿನಾರಾಯಣ ಗುರುಕುಲ
ಶ್ರೀ ಸ್ವಾಮಿನಾರಾಯಣರು ಮನುಕುಲಕ್ಕೆ ಎಲ್ಲಾ ಧರ್ಮಗ್ರಂಥಗಳ ಸಾರವನ್ನು ಶಿಕ್ಷಾಪಾತ್ರಿ ರೂಪದಲ್ಲಿ ಉಡುಗೊರೆಯಾಗಿ ನೀಡಿದ್ದಾರೆ. ಮಾನವ ಕುಲದ ಒಳಿತಿಗಾಗಿ ನಿಜವಾದ ಶಿಕ್ಷಣವನ್ನು ಭೂಮಿಯ ಮೇಲೆ ಪಸರಿಸಲು, ಶ್ರೀ ಸ್ವಾಮಿನಾರಾಯಣರ ದೈವಿಕ ಆಜ್ಞೆಗಳನ್ನು ಪೋಷಿಸುವ ಮತ್ತು ಹರಡುವ ಉದ್ದೇಶಕ್ಕಾಗಿ ಎಚ್.ಎಚ್.ಗುರುದೇವ್ ಶಾಸ್ತ್ರೀಜಿ ಮಹಾರಾಜ್ ಶ್ರೀ ಧರ್ಮಜೀವನದಾಸ್ಜಿ ಸ್ವಾಮಿಗಳು 1948 ರಲ್ಲಿ ಗುಜರಾತ್ನ ರಾಜ್‌ಕೋಟ್‌ನಲ್ಲಿ ಶ್ರೀ ಸ್ವಾಮಿನಾರಾಯಣ ಗುರುಕುಲವನ್ನು ಸ್ಥಾಪಿಸಿದರು. ಆ ಮೂಲಕ ಭಾರತದ ಪ್ರಾಚೀನ ಗುರುಕುಲ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಿದ್ದು, ಯುವಪೀಳಿಗೆಯಲ್ಲಿ ಧಾರ್ಮಿಕ ಸದ್ಗುಣಗಳೊಂದಿಗೆ ನಿಜವಾದ ಶಿಕ್ಷಣವನ್ನು ಹರಡಿ ಸಮಾಜ ಮತ್ತು ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಅನುವು ಮಾಡಿಕೊಟ್ಟಿದ್ದಾರೆ.
ಇದನ್ನೂ ಓದಿ: One Rank One Pension: ಮೋದಿ ಮಹತ್ವಾಕಾಂಕ್ಷಿ ಯೋಜನೆ ಒನ್ ರ‍್ಯಾಂಕ್ ಒನ್ ಪೆನ್ಶನ್ ಜಾರಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ
ಮಹಾರಾಜ್ ಅವರು ಗುರುಕುಲ ಪದ್ಧತಿಯೊಂದಿಗೆ ವಿವಿಧ ಶೈಕ್ಷಣಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಸೇವೆಗಳನ್ನು ಪ್ರಾರಂಭಿಸಿದರು. ಮಾತ್ರವಲ್ಲದೆ, ಶಿಸ್ತು, ಸಾಮಾನ್ಯ ಶಿಷ್ಟಾಚಾರ, ಮಾನವೀಯ ಮೌಲ್ಯಗಳು, ಸೌಂದರ್ಯ ಪ್ರಜ್ಞೆ, ಪ್ರಕೃತಿಯ ಬಗ್ಗೆ ಮೆಚ್ಚುಗೆ ಮತ್ತು ಪ್ರೀತಿ ಮತ್ತು ಪ್ರಾರ್ಥನೆಯ ಶಕ್ತಿಯ ತಿಳುವಳಿಕೆ ಇತ್ಯಾದಿ ಮೌಲ್ಯಗಳಿಗೆ ಒತ್ತು ನೀಡಲಾಗುತ್ತಿದೆ.
ಭಗವಾನ್ ಶ್ರೀ ಸ್ವಾಮಿನಾರಾಯಣರ ಸಂದೇಶವನ್ನು ಪ್ರಚಾರ ಮಾಡುವುದು, ನೈಜ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಉತ್ತಮ ಗುಣವನ್ನು ನಿರ್ಮಿಸುವುದು, ಪ್ರತಿ ಕ್ಷೇತ್ರದಲ್ಲಿ ಸಮಗ್ರ ಸ್ಥಾನಮಾನವನ್ನು ಅಭಿವೃದ್ಧಿಪಡಿಸುವುದು, ಅತ್ಯುತ್ತಮ ದೇಶಭಕ್ತರಾಗಲು ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದು, ಎಲ್ಲ ಧರ್ಮೀಯರಲ್ಲಿ ಜಾತ್ಯಾತೀತ ಸೌಹಾರ್ದತೆ ಮೂಡಿಸುವುದು, ಆಧ್ಯಾತ್ಮಿಕತೆ ಮತ್ತು ಆಧುನಿಕತೆಯ ನಡುವಿನ ಸಮತೋಲನ ಕಾಪಾಡುವುದು ಇದರ ಮುಖ್ಯ ಉದ್ದೇಶ ಹಾಗೂ ಗುಡಿಗಳಾಗಿವೆ.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:03 am, Sat, 24 December 22