ರಾಜಣ್ಣ ಇಂದು ನಗರದಲ್ಲಿ ಆಡಿದ ‘ಆಗಸ್ಟ್ ಕ್ರಾಂತಿ’ಯ ಮಾತು ರಾಜಕೀಯ ವಲಯದಲ್ಲಿ ಭಾರೀ ಚರ್ಚೆ
ರಾಜಣ್ಣ ಅವರು ಪವರ್ ಸೆಂಟರ್ ಗಳ ಬಗ್ಗೆಯೂ ಮಾತಾಡಿದ್ದಾರೆ. ಸರ್ಕಾರದಲ್ಲಿ ಶಕ್ತಿ ಕೇಂದ್ರಗಳು ಹೆಚ್ಚಾಗಿರುವುದರಿಂದ ಯಾವುದೇ ವಿಷಯದಲ್ಲಿ ಒಮ್ಮತ ಮೂಡುವುದು ಕಷ್ಟವಾಗುತ್ತಿದೆ. 2013ರಿಂದ 2018 ರವರೆಗಿನ ಕಾಂಗ್ರೆಸ್ ಸರ್ಕಾರದಲ್ಲಿ ಕೇವಲ ಸಿದ್ದರಾಮಯ್ಯ ಮಾತ್ರ ಪವರ್ ಸೆಂಟರ್ ಅಗಿದ್ದರು, ಅದರೆ ಈಗ ರಾಜ್ಯದಲ್ಲಿ ಪರಿಸ್ಥಿತಿ ಭಿನ್ನವಾಗಿದೆ ಮತ್ತು ರಾಜ್ಯದ ಜನ ಸಹ ಅದನ್ನೇ ಮಾತಾಡುತ್ತಿದ್ದಾರೆ ಎಂದು ರಾಜಣ್ಣ ಹೇಳುತ್ತಾರೆ.
ಬೆಂಗಳೂರು, ಜೂನ್ 26: ಮೊನ್ನೆಯಷ್ಟೇ ತಮ್ಮ ಹುಟ್ಟುಹಬ್ಬದ ಅಮೃತ ಮಹೋತ್ಸವ ಆಚರಿಸಿಕೊಂಡ ಸಹಕಾರ ಸಚಿವ ಕೆಎನ್ ರಾಜಣ್ಣ ಕೆಲದಿನಗಳಿಂದ ನಿಲ್ಲಿಸಿದ್ದ ತಮ್ಮ ಮಾತುಗಾರಿಕೆಯನ್ನು ಪುನಃ ಆರಂಭಿಸಿದ್ದಾರೆ. ಇಂದು ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ರಾಜ್ಯದಲ್ಲಿ ಆಗಸ್ಟ್ ಕ್ರಾಂತಿ (August Revolution) ಅಗಲಿದೆ ಅಂತ ಹೇಳಿದರು. ಅವರು ಯಾಕೆ ಹಾಗೆ ಹೇಳಿದರು ಅಂತ ಅರ್ಥಮಾಡಿಕೊಳ್ಳುವುದು ಕನ್ನಡಿಗರಿಗೆ ಕಷ್ಟವಾಗುತ್ತಿದೆ. ಯಾವ ಕ್ರಾಂತಿ? ಸರ್ಕಾರದಲ್ಲೋ, ಪಕ್ಷದಲ್ಲೋ ಅಂತ ಕೇಳಿದರೆ ಅವರಿಂದ ಸ್ಪಷ್ಟ ಉತ್ತರವಿಲ್ಲ. ಎಲ್ಲವನ್ನೂ ಈಗಲೇ ಹೇಳಿಬಿಟ್ಟರೆ ಕುತೂಹಲ ನಾಶವಾಗುತ್ತದೆ ಎನ್ನುತ್ತಾರೆ. ಅವರ ‘ಕ್ರಾಂತಿ’ ಯ ಮಾತುಗಳಿಗೆ ವಿರೋಧ ಪಕ್ಷದ ನಾಯಕರು ತಮಗೆ ತೋಚಿದ ವಿಶ್ಲೇಷಣೆಗಳನ್ನು ನೀಡುತ್ತಿದ್ದಾರೆ. ಯಾವುದು ಸರಿ ಯಾವುದು ತಪ್ಪು?
ಇದನ್ನೂ ಓದಿ: KN Rajanna: ಸಚಿವ ಕೆಎನ್ ರಾಜಣ್ಣ ಚುನಾವಣೆ ರಾಜಕಾರಣಕ್ಕೆ ಗುಡ್ ಬೈ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ