AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಭಾರತದಲ್ಲಿ ಫಿಫಾ ವಿಶ್ವಕಪ್‌, ನಮ್ಮ ತಂಡವೂ ಅಖಾಡಕ್ಕೆ’; ಪ್ರಧಾನಿ ನರೇಂದ್ರ ಮೋದಿ ಹೇಳಿಕೆ

Narendra Modi: ಮುಂದೊಂದು ದಿನ ಭಾರತದಲ್ಲಿಯೇ ಫಿಫಾ ವಿಶ್ವಕಪ್ ಆಯೋಜನೆಯಾಗಲಿದೆ. ಹಾಗೆಯೇ ಈ ವಿಶ್ವಕಪ್​ನಲ್ಲಿ ನಮ್ಮ ತಂಡವೂ ಆಡಲಿದೆ ಎಂದು ಪ್ರಧಾನಿ ಹೇಳಿಕೊಂಡಿದ್ದಾರೆ.

‘ಭಾರತದಲ್ಲಿ ಫಿಫಾ ವಿಶ್ವಕಪ್‌, ನಮ್ಮ ತಂಡವೂ ಅಖಾಡಕ್ಕೆ’; ಪ್ರಧಾನಿ ನರೇಂದ್ರ ಮೋದಿ ಹೇಳಿಕೆ
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
TV9 Web
| Updated By: ಪೃಥ್ವಿಶಂಕರ|

Updated on:Dec 21, 2022 | 11:36 AM

Share

ಕಳೆದ ಭಾನುವಾರ ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್ (Fifa World Cup 2022) ಫೈನಲ್​ನಲ್ಲಿ ಫ್ರಾನ್ಸ್ ತಂಡವನ್ನು ಪೆನಾಲ್ಟಿ ಶೂಟೌಟ್​ನಲ್ಲಿ ಮಣಿಸುವುದರೊಂದಿಗೆ ಅರ್ಜೇಂಟಿನಾ ತಂಡ (Argentina defeated France) ಮೂರನೇ ಬಾರಿಗೆ ವಿಶ್ವಕಪ್ ಎತ್ತಿಹಿಡಿದಿತ್ತು. ಅರ್ಜೇಂಟಿನಾದ ಈ ಗೆಲುವನ್ನು ಇಡೀ ವಿಶ್ವವೇ ತಮ್ಮ ಗೆಲುವಂತೆ ಸಂಭ್ರಮಿಸುತ್ತಿದೆ. ಅದರಲ್ಲೂ ಕ್ರಿಕೆಟ್ ಧರ್ಮ ರಾಷ್ಟ್ರ ಎಂದೇ ಕರೆಸಿಕೊಳ್ಳುವ ಭಾರತದಲ್ಲೂ ಈ ವಿಶ್ವಕಪ್ ಸಂಭ್ರಮ ಮುಗಿಲು ಮುಟ್ಟಿದೆ. ವಾಸ್ತವವಾಗಿ ಭಾರತದಲ್ಲಿ ಫುಟ್ಬಾಲ್ ಆಟದ ಕ್ರೇಜ್ ಅಷ್ಟಾಗಿ ಇಲ್ಲ. ಕೆಲವೊಂದು ರಾಜ್ಯಗಳನ್ನು ಬಿಟ್ಟರೆ ಭಾರತದಲ್ಲಿ ಭಾಗಶಃ ಕ್ರಿಕೆಟ್​ಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತದೆ. ಆದರೆ ಈ ವಿಶ್ವಕಪ್​ ಮೇಲೆ ಭಾರತೀಯರು ತೋರಿರುವ ಆಸಕ್ತಿಯನ್ನು ಮನಗಂಡಿರುವ ಪ್ರಧಾನಿ ಮೋದಿಯವರು (Prime Minister Narendra Modi) ಮುಂದೊಂದು ದಿನ ಭಾರತದಲ್ಲಿಯೇ ಫಿಫಾ ವಿಶ್ವಕಪ್ ಆಯೋಜನೆಯಾಗಲಿದೆ ಎಂದಿದ್ದಾರೆ. ಹಾಗೆಯೇ ಈ ವಿಶ್ವಕಪ್​ನಲ್ಲಿ ನಮ್ಮ ತಂಡವೂ ಆಡಲಿದೆ ಎಂದಿದ್ದಾರೆ.

ಭವಿಷ್ಯದಲ್ಲಿ ಫಿಫಾ ವಿಶ್ವಕಪ್‌ಗೆ ಆತಿಥ್ಯ

ವಾಸ್ತವವಾಗಿ ಭಾರತವು ಇನ್ನೂ ಒಂದೇ ಒಂದು ಫಿಫಾ ವಿಶ್ವಕಪ್ ಪಂದ್ಯವನ್ನು ಆಡಿಲ್ಲ ಅಥವಾ ಆಯೋಜಿಸಿಲ್ಲ. ಆದರೆ ಮುಂದೊಂದು ದಿನ ಭಾರತವು ಭವಿಷ್ಯದಲ್ಲಿ ಫಿಫಾ ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತದೆ ಮತ್ತು ಭಾಗವಹಿಸುತ್ತದೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಫಿಫಾ ವಿಶ್ವಕಪ್ ಟ್ರೋಫಿ ಅನಾವರಣಗೊಳಿಸಿದ ದೀಪಿಕಾ; ಕಾರ್ಯಕ್ರಮ ನೀಡಿದ ನೋರಾ ಫತೇಹಿ; ಫೋಟೋ

ಶಿಲ್ಲಾಂಗ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ ಈ ಬಗ್ಗೆ ವಿಶ್ವಾಸ ಹೊರಹಾಕಿದ್ದಾರೆ. ಭಾರತವು ಇದುವರೆಗೆ ಎರಡು ಅಂಡರ್-17 ರ ಎರಡು ಫಿಫಾ ವಿಶ್ವಕಪ್‌ಗಳನ್ನು ಆಯೋಜಿಸಿದೆ. ಭಾರತ 2018 ರಲ್ಲಿ ಬಾಲಕರ 17 ವರ್ಷದೊಳಗಿನವರ ಫಿಫಾ ವಿಶ್ವಕಪ್ ಅನ್ನು ಆಯೋಜಿಸಿದ್ದರೆ, ಈ ವರ್ಷ ಬಾಲಕಿಯರ ಅಂಡರ್ -17 ವಿಶ್ವಕಪ್ ಅನ್ನು ಆಯೋಜಿಸಲಾಗಿತ್ತು.

ಭಾರತ ಆತಿಥ್ಯ ವಹಿಸಲಿದೆ

ಭಾನುವಾರ ಶಿಲ್ಲಾಂಗ್‌ನಲ್ಲಿ ನಡೆದ ರ್ಯಾಲಿಯಲ್ಲಿ ಈ ಬಗ್ಗೆ ಮಾತನಾಡಿದ ಮೋದಿ, “ನಾನು ಇಂದು ಶಿಲ್ಲಾಂಗ್‌ಗೆ ಹೇಳಲು ಬಯಸುತ್ತೇನೆ, ನಮ್ಮ ಕಣ್ಣುಗಳು ಕತಾರ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್‌ನ ಮೇಲೆ ಇದ್ದರೂ, ಮೈದಾನದಲ್ಲಿ ವಿದೇಶಿ ತಂಡಗಳಿವೆ. ಆದರೆ ನಮ್ಮ ಯುವ ಶಕ್ತಿಯ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ. ಆದ್ದರಿಂದ ಭಾರತದಲ್ಲಿ ನಾವು ಅದೇ ರೀತಿ ಆಚರಿಸುವ ಮತ್ತು ತ್ರಿವರ್ಣ ಧ್ವಜಕ್ಕೆ ಮೆರಗು ನೀಡುವ ದಿನ ದೂರವಿಲ್ಲ ಎಂದು ನಾನು ಸಂಪೂರ್ಣ ವಿಶ್ವಾಸದಿಂದ ಹೇಳಬಲ್ಲೆ’’ ಎಂದಿದ್ದಾರೆ.

ಅರ್ಜೆಂಟೀನಾಗೆ ವಿಶ್ವಕಪ್

ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್ ಭಾನುವಾರ ಮುಕ್ತಾಯಗೊಂಡಿದೆ. ಅರ್ಜೆಂಟೀನಾ ರೋಚಕ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು ಮಣಿಸಿ ಮೂರನೇ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿ 36 ವರ್ಷಗಳ ವಿಶ್ವಕಪ್ ಗೆಲ್ಲುವ ಬರ ನೀಗಿಸಿದೆ.

ಮೊದಲಾರ್ಧದಲ್ಲಿ ಅರ್ಜೆಂಟೀನಾ ಎರಡು ಗೋಲು ಗಳಿಸಿ ಮುನ್ನಡೆ ಸಾಧಿಸಿತು. ಇದರ ನಂತರ, ಎಂಬಪ್ಪೆ 80 ಮತ್ತು 81 ನೇ ನಿಮಿಷಗಳಲ್ಲಿ ಗೋಲು ಗಳಿಸುವ ಮೂಲಕ ಸ್ಕೋರ್ ಅನ್ನು ಸಮಗೊಳಿಸಿದರು. ಹೀಗಾಗಿ ಪಂದ್ಯವು ಹೆಚ್ಚುವರಿ ಸಮಯಕ್ಕೆ ಹೋಯಿತು. ಅಲ್ಲಿ ಮೆಸ್ಸಿ ಒಂದು ಗೋಲು ಗಳಿಸಿದರೆ, ನಂತರ ಎಂಬಪ್ಪೆ ಕೂಡ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿ ಸ್ಕೋರ್ ಅನ್ನು 3-3 ರಿಂದ ಸಮಬಲಗೊಳಿಸಿದರು. ಅಂತಿಮವಾಗಿ ಪೆನಾಲ್ಟಿ ಶೂಟೌಟ್​ನಲ್ಲಿ ಅರ್ಜೆಂಟೀನಾ ಗೆಲುವು ಸಾಧಿಸಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:32 am, Wed, 21 December 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ