- Kannada News Photo gallery fifa world cup 2022 closing ceremony nora fatehi deepika padukone shahrukh khan
ಫಿಫಾ ವಿಶ್ವಕಪ್ ಟ್ರೋಫಿ ಅನಾವರಣಗೊಳಿಸಿದ ದೀಪಿಕಾ; ಕಾರ್ಯಕ್ರಮ ನೀಡಿದ ನೋರಾ ಫತೇಹಿ; ಫೋಟೋ
FIFA World Cup 2022: ಫಿಫಾ ವಿಶ್ವಕಪ್ ಟ್ರೋಫಿಯನ್ನು ಮೈದಾನದಲ್ಲಿ ಅನಾವರಣಗೊಳಿಸಿದಾಗ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೂಡ ಟ್ರೋಫಿಯೊಂದಿಗೆ ಕಾಣಿಸಿಕೊಂಡರು.
Updated on:Dec 18, 2022 | 10:15 PM

2022 ರ ಫಿಫಾ ವಿಶ್ವಕಪ್ ಹೇಗೆ ಅದ್ಧೂರಿಯಾಗಿ ಆರಂಭವಾಯಿತೋ, ಅದೇ ರೀತಿಯ ಅಂತ್ಯವನ್ನು ಕಾಣುತ್ತಿದೆ. ಫ್ರಾನ್ಸ್ ಮತ್ತು ಅರ್ಜೆಂಟೀನಾ ನಡುವಿನ ಪ್ರಶಸ್ತಿ ಪಂದ್ಯಕ್ಕೂ ಮುನ್ನ ಸಮಾರೋಪ ಸಮಾರಂಭವನ್ನು ತಾರೆಗಳಿಂದ ಅಲಂಕರಿಸಿದ ವರ್ಣರಂಜಿತ ಕಾರ್ಯಕ್ರಮದೊಂದಿಗೆ ನಡೆಸಲಾಯಿತು. ಈ ಸಮಾರಂಭದಲ್ಲಿ ಬಾಲಿವುಡ್ನ ಚೆಲುವು ಕೂಡ ಕಂಡು ಬಂತು.

ಫಿಫಾ ವಿಶ್ವಕಪ್ ಟ್ರೋಫಿಯನ್ನು ಮೈದಾನದಲ್ಲಿ ಅನಾವರಣಗೊಳಿಸಿದಾಗ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೂಡ ಟ್ರೋಫಿಯೊಂದಿಗೆ ಕಾಣಿಸಿಕೊಂಡರು. ಅವರೊಂದಿಗೆ ಸ್ಪೇನ್‌ನ ಮಾಜಿ ನಾಯಕ ಐಕರ್ ಕ್ಯಾಸಿಯಸ್ ಕೂಡ ಉಪಸ್ಥಿತರಿದ್ದರು.

ಇದಲ್ಲದೇ ಸಮಾರೋಪ ಸಮಾರಂಭದಲ್ಲಿ ಬಾಲಿವುಡ್ ನಟಿ ನೋರಾ ಫತೇಹಿ ಕೂಡ ಕಾರ್ಯಕ್ರಮ ನೀಡಿದರು. ಅವರು ಇತರ ದೇಶಗಳ ತಾರೆಗಳೊಂದಿಗೆ 'ನೈಟ್ ಟು ರಿಮೆಂಬರ್' ಹಾಡಿಗೆ ಪ್ರದರ್ಶನ ನೀಡಿದರು. ಇದಕ್ಕೂ ಮುನ್ನ ನೋರಾ ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲೂ ಪ್ರದರ್ಶನ ನೀಡಿದ್ದರು.

ನೈಜೀರಿಯನ್-ಅಮೇರಿಕನ್ ಸಂಗೀತಗಾರ ಡೇವಿಡೊ ಈ ವಿಶ್ವಕಪ್ನ ಥೀಮ್ ಸಾಂಗ್ಗೆ ಪ್ರದರ್ಶನ ನೀಡಿದರೆ, ಈ ಕಾರ್ಯಕ್ರಮದಲ್ಲಿ ಪೋರ್ಟೊ ರಿಕನ್ ಗಾಯಕ ಓಜುನಾ ಮತ್ತು ಕಾಂಗೋಲೀಸ್-ಫ್ರೆಂಚ್ ರಾಪರ್ ಗಿಮ್ಮಸ್ ಕೂಡ ಕಾಣಿಸಿಕೊಂಡರು.

ಇದಲ್ಲದೇ ತಮ್ಮ ಚಿತ್ರದ ಪ್ರಚಾರಕ್ಕೆ ಬಂದಿದ್ದ ಹಿರಿಯ ನಟ ಶಾರುಖ್ ಕೂಡ ಫೈನಲ್ ಪಂದ್ಯದ ಪ್ರೀ ಮ್ಯಾಚ್ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಜೊತೆಗೆ ವೇಯ್ನ್ ರೂನಿಯಂತಹ ಅನುಭವಿ ಆಟಗಾರರೂ ಈ ಶೋನಲ್ಲಿ ಭಾಗಿಯಾಗಿದ್ದರು.
Published On - 10:15 pm, Sun, 18 December 22



















