- Kannada News Photo gallery Cricket photos England team broke Indias record hitting the 88th six in 2022 against pakistan in karachi test
ENG vs PAK: ಕರಾಚಿ ಟೆಸ್ಟ್‌ನಲ್ಲಿ ಭಾರತದ 87 ಸಿಕ್ಸರ್‌ಗಳ ದಾಖಲೆ ಮುರಿದ ಇಂಗ್ಲೆಂಡ್..!
ENG vs PAK: 2021ರಲ್ಲಿ ಭಾರತ ಟೆಸ್ಟ್ ಕ್ರಿಕೆಟ್‌ನಲ್ಲಿ 14 ಪಂದ್ಯಗಳಲ್ಲಿ ಗರಿಷ್ಠ 87 ಸಿಕ್ಸರ್‌ಗಳನ್ನು ಬಾರಿಸಿತ್ತು. ಆದರೆ, ಈಗ ಈ ದಾಖಲೆ ಇಂಗ್ಲೆಂಡ್ ಪಾಲಾಗಿದೆ.
Updated on:Dec 18, 2022 | 4:48 PM

ಪಾಕಿಸ್ತಾನ ವಿರುದ್ಧ ಕರಾಚಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡ ಐತಿಹಾಸಿಕ ದಾಖಲೆಯೊಂದನ್ನು ಮುರಿದಿದೆ. ಈ ಹಿಂದೆ ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಬರೆದಿದ್ದ ಭಾರತವನ್ನು ಇಂಗ್ಲೆಂಡ್ ಹಿಂದಿಕ್ಕಿದೆ.

2021ರಲ್ಲಿ ಭಾರತ ಟೆಸ್ಟ್ ಕ್ರಿಕೆಟ್‌ನಲ್ಲಿ 14 ಪಂದ್ಯಗಳಲ್ಲಿ ಗರಿಷ್ಠ 87 ಸಿಕ್ಸರ್‌ಗಳನ್ನು ಬಾರಿಸಿತ್ತು. ಆದರೆ, ಈಗ ಈ ದಾಖಲೆ ಇಂಗ್ಲೆಂಡ್ ಪಾಲಾಗಿದೆ. ಇಂಗ್ಲೆಂಡ್ ತಂಡ 2022ರಲ್ಲಿ 88ನೇ ಸಿಕ್ಸರ್ ಬಾರಿಸುವ ಮೂಲಕ ಭಾರತದ ದಾಖಲೆಯನ್ನು ಮುರಿದಿದೆ.

2014ರಲ್ಲಿ ನ್ಯೂಜಿಲೆಂಡ್ 9 ಟೆಸ್ಟ್ ಪಂದ್ಯಗಳಲ್ಲಿ 81 ಸಿಕ್ಸರ್ ಬಾರಿಸುವ ಮೂಲಕ ಈ ದಾಖಲೆಯನ್ನು ತನ್ನದಾಗಿಸಿಕೊಂಡಿತ್ತು. ಆದರೆ ಕಳೆದ ವರ್ಷ ಈ ದಾಖಲೆಯನ್ನು ಭಾರತ ಮುರಿದಿತ್ತು.

ಕರಾಚಿ ಟೆಸ್ಟ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 304 ರನ್ ಗಳಿಸಿದೆ. ಇದಕ್ಕೆ ಪ್ರತಿಯಾಗಿ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ಪರ ಹ್ಯಾರಿ ಬ್ರೂಕ್ ಮತ್ತೊಂದು ಶತಕ ಬಾರಿಸುವ ಮೂಲಕ ಇಂಗ್ಲೆಂಡ್ಗೆ ಇನ್ನಿಂಗ್ಸ್ ಮುನ್ನಡೆ ತಂದುಕೊಟ್ಟಿದ್ದಾರೆ.

ಕರಾಚಿ ಟೆಸ್ಟ್‌ನಲ್ಲಿ ಶತಕ ಬಾರಿಸಿದ ಹ್ಯಾರಿ ಬ್ರೂಕ್ ತನ್ನ ಶತಕದ ಇನ್ನಿಂಗ್ಸ್‌ನಲ್ಲಿ ಮೂರು ಸಿಕ್ಸರ್‌ಗಳನ್ನು ಬಾರಿಸಿದರು. ಈ 3 ಸಿಕ್ಸರ್‌ಗಳ ಮೂಲಕ ಕ್ಯಾಲೆಂಡರ್ ವರ್ಷದಲ್ಲಿ ಭಾರತ ಸಿಡಿಸಿದ್ದ 87 ಸಿಕ್ಸರ್‌ಗಳ ದಾಖಲೆಯನ್ನು ಇಂಗ್ಲೆಂಡ್ ಮುರಿಯುವಲ್ಲಿ ಬ್ರೂಕ್ ನೆರವಾದರು.
Published On - 4:48 pm, Sun, 18 December 22




