- Kannada News Photo gallery fifa world cup 2022 5 big records argentina vs france lionel messi mbappe
ದಾಖಲೆಯ 172 ಗೋಲುಗಳು; ಮೆಸ್ಸಿ, ಎಂಬಪ್ಪೆಗೆ ಪ್ರತಿಷ್ಠಿತ ಪ್ರಶಸ್ತಿ! ಈ ವಿಶ್ವಕಪ್ನ 5 ಪ್ರಮುಖ ಸಂಗತಿಗಳಿವು
FIFA World Cup 2022: 2022ರ ಫೀಫಾ ವಿಶ್ವಕಪ್‌ನಲ್ಲಿ ಒಟ್ಟು 172 ಗೋಲುಗಳು ದಾಖಲಾಗಿದ್ದು, ಇದು ಈ ಟೂರ್ನಿಯಲ್ಲಿ ಹೊಸ ದಾಖಲೆಯಾಗಿದೆ. 1998 ಮತ್ತು 2014ರಲ್ಲಿ 171 ಗೋಲುಗಳು ದಾಖಲಾಗಿದ್ದವು.
Updated on: Dec 19, 2022 | 5:32 PM

ಲಿಯೋನೆಲ್ ಮೆಸ್ಸಿ ನಾಯಕತ್ವದಲ್ಲಿ ಅರ್ಜೆಂಟೀನಾ ವಿಶ್ವ ಚಾಂಪಿಯನ್ ಆಗಿದೆ. 36 ವರ್ಷಗಳ ನಂತರ ಮೆಸ್ಸಿಯ ಅದ್ಭುತ ಆಟದ ಆಧಾರದ ಮೇಲೆ ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್‌ನಲ್ಲಿ ಫ್ರಾನ್ಸ್ ತಂಡವನ್ನು ಮಣಿಸಿ ಟ್ರೋಫಿ ಎತ್ತಿ ಹಿಡಿದಿದೆ. ಈ ಮೂಲಕ ಕತಾರ್ ವಿಶ್ವಕಪ್ಗೆ ಅದ್ಧೂರಿ ತೆರೆಬಿದ್ದಿದ್ದು, ಈ ವಿಶ್ವಕಪ್ನ ಪ್ರಮುಖ 5 ಸಂಗತಿಗಳ ವಿವರ ಇಲ್ಲಿದೆ.

2022ರ ಫೀಫಾ ವಿಶ್ವಕಪ್‌ನಲ್ಲಿ ಒಟ್ಟು 172 ಗೋಲುಗಳು ದಾಖಲಾಗಿದ್ದು, ಇದು ಈ ಟೂರ್ನಿಯಲ್ಲಿ ಹೊಸ ದಾಖಲೆಯಾಗಿದೆ. 1998 ಮತ್ತು 2014ರಲ್ಲಿ 171 ಗೋಲುಗಳು ದಾಖಲಾಗಿದ್ದವು.

ಕೈಲಿಯನ್ ಎಂಬಪ್ಪೆ ಈ ವಿಶ್ವಕಪ್‌ನಲ್ಲಿ ಗರಿಷ್ಠ 8 ಗೋಲುಗಳನ್ನು ಗಳಿಸಿ, ಗೋಲ್ಡನ್ ಬೂಟ್ ಪ್ರಶಸ್ತಿಯನ್ನು ಪಡೆಯುವಲ್ಲಿ ಯಶಸ್ವಿಯಾದರು.

ಲಿಯೋನೆಲ್ ಮೆಸ್ಸಿಗೆ ಈ ವಿಶ್ವಕಪ್ನ ಅತ್ಯುತ್ತಮ ಆಟಗಾರ ಎಂಬ ಕಿರೀಟವನ್ನು ತೊಡಿಸಲಾಗಿದೆ. ಮೆಸ್ಸಿ ಈ ಪಂದ್ಯಾವಳಿಯಲ್ಲಿ 7 ಗೋಲುಗಳು ಮತ್ತು 3 ಅಸಿಸ್ಟ್‌ಗಳೊಂದಿಗೆ ಗೋಲ್ಡನ್ ಬಾಲ್ ಪ್ರಶಸ್ತಿಯನ್ನು ಪಡೆದರು.

ಅರ್ಜೆಂಟೀನಾದ ಗೋಲ್‌ಕೀಪರ್ ಎಮಿಲಿಯಾನೊ ಮಾರ್ಟಿನೆಜ್ ಪಂದ್ಯಾವಳಿಯ ಅತ್ಯುತ್ತಮ ಗೋಲ್‌ಕೀಪರ್ ಪ್ರಶಸ್ತಿಗೆ ಆಯ್ಕೆಯಾದರು. ಫೈನಲ್‌ನಲ್ಲಿ ಎರಡು ಪೆನಾಲ್ಟಿಗಳನ್ನು ಉಳಿಸುವ ಮೂಲಕ ಅರ್ಜೇಂಟಿನಾ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದರು.

ಫಿಫಾ ವಿಶ್ವಕಪ್ ಗೆದ್ದ ಅರ್ಜೆಂಟೀನಾ ತಂಡಕ್ಕೆ ಸುಮಾರು 347 ಕೋಟಿ ರೂಪಾಯಿ ಬಹುಮಾನ ಸಿಕ್ಕಿದೆ. ಈ ಹಿಂದೆ ಯಾವ ಚಾಂಪಿಯನ್ ತಂಡಕ್ಕೂ ಇಷ್ಟು ಪ್ರಮಾಣದ ಬಹುಮಾನದ ಮೊತ್ತ ಸಿಕ್ಕಿರಲಿಲ್ಲ.



















