- Kannada News Photo gallery Nazriya Nazim Birthday Here is how friendship Starts between Nazriya And Meghana Raj
ಮೇಘನಾ ರಾಜ್ ಗೆಳತಿ, ನಟಿ ನಜ್ರಿಯಾ ನಜಿಮ್ಗೆ ಬರ್ತ್ಡೇ ಸಂಭ್ರಮ; ಇಲ್ಲಿದೆ ಕ್ಯೂಟ್ ಫೋಟೋ
Nazriya Nazim Birthday: ಮಲಯಾಳಂ ಚಿತ್ರರಂಗದಲ್ಲಿ ನಜ್ರಿಯಾ ಸಾಕಷ್ಟು ಹೆಸರು ಮಾಡಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ.
Updated on: Dec 20, 2022 | 9:36 AM

ನಜ್ರಿಯಾ ನಜಿಮ್ ಅವರಿಗೆ ಇಂದು (ಡಿಸೆಂಬರ್ 20) ಬರ್ತ್ಡೇ ಸಂಭ್ರಮ. ಅವರಿಗೆ ಹಲವು ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ.

ಮಲಯಾಳಂ ಚಿತ್ರರಂಗದಲ್ಲಿ ನಜ್ರಿಯಾ ಸಾಕಷ್ಟು ಹೆಸರು ಮಾಡಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ.

ಮಲಯಾಳಂ ನಟ ಫಹಾದ್ ಫಾಸಿಲ್ ಅವರನ್ನು ನಜ್ರಿಯಾ ಪ್ರೀತಿಸಿ ಮದುವೆ ಆದರು. ಇಬ್ಬರೂ ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ.

ನಜ್ರಿಯಾಗೆ ಕನ್ನಡದ ಸೆಲೆಬ್ರಿಟಿಗಳ ಜತೆ ಒಳ್ಳೆಯ ನಂಟಿದೆ. ಮೇಘನಾ ರಾಜ್ ಹಾಗೂ ನಜ್ರಿಯಾ ಉತ್ತಮ ಗೆಳತಿಯರು. ರಾಯನ್ ನಾಮಕರಣಕ್ಕೆ ನಜ್ರಿಯಾ ಕೂಡ ಆಗಮಿಸಿದ್ದರು. ಅವರಿಗೆ ಸರ್ಜಾ ಕುಟುಂಬದ ಜತೆ ಒಳ್ಳೆಯ ನಂಟು ಬೆಳೆದಿದೆ.

ಮೇಘನಾ ರಾಜ್ ಈ ಮೊದಲು ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡಿದ್ದರು. ಆ ವೇಳೆ ಮೇಘನಾ ಹಾಗೂ ನಜ್ರಿಯಾ ಮಧ್ಯೆ ಫ್ರೆಂಡ್ಶಿಪ್ ಬೆಳೆದಿದೆ.

ತಮ್ಮ ಕ್ಯೂಟ್ ಲುಕ್ ಮೂಲಕವೇ ನಜ್ರಿಯಾ ಎಲ್ಲರ ಗಮನ ಸೆಳೆದಿದ್ದಾರೆ. ಸದ್ಯ ಅವರು ಅಷ್ಟಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ.




