AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB IPL Auction: ಮಿನಿ ಹರಾಜಿನಲ್ಲಿ ಈ ಇಬ್ಬರು ವಿದೇಶಿ ಆಟಗಾರರ ಖರೀದಿಗೆ ಆರ್​ಸಿಬಿ ಮಾಸ್ಟರ್ ಪ್ಲಾನ್..!

RCB IPL Auction: ಈ ಸೀಸನ್​ನಲ್ಲಿ ಬೌಲರ್‌ಗಳ ಮೇಲೆ ಹೆಚ್ಚಿನ ಗಮನ ಹರಿಸುವತ್ತ ಆರ್​ಸಿಬಿ ಮುಖ ಮಾಡಿದೆ. ಡಿಸೆಂಬರ್ 23 ರಂದು ನಡೆಯಲಿರುವ ಮಿನಿ ಹರಾಜಿನಲ್ಲಿ ಇಬ್ಬರು ಉತ್ತಮ ಬೌಲರ್​ಗಳನ್ನು ಖರೀದಿಸಲು ಚಿಂತಿಸಿದೆ.

RCB IPL Auction: ಮಿನಿ ಹರಾಜಿನಲ್ಲಿ ಈ ಇಬ್ಬರು ವಿದೇಶಿ ಆಟಗಾರರ ಖರೀದಿಗೆ ಆರ್​ಸಿಬಿ ಮಾಸ್ಟರ್ ಪ್ಲಾನ್..!
ಆರ್​ಸಿಬಿ ಹಾಲಿ ತಂಡImage Credit source: rcb twitter
TV9 Web
| Updated By: ಪೃಥ್ವಿಶಂಕರ|

Updated on: Dec 21, 2022 | 10:35 AM

Share

ಐಪಿಎಲ್ 2023ಕ್ಕೆ (IPL 2023) ಎಲ್ಲಾ ತಂಡಗಳು ತಯಾರಿ ಆರಂಭಿಸಿವೆ. ಅದರಲ್ಲೂ ಇದುವರೆಗು ಒಂದೇ ಒಂದು ಪ್ರಶಸ್ತಿ ಗೆಲ್ಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಈ ಬಾರಿ ವಿಶೇಷ ತಂತ್ರಗಾರಿಕೆಯೊಂದಿಗೆ ಮೈದಾನಕ್ಕಿಳಿಯುವ ಚಿಂತನೆಯಲ್ಲಿದೆ. ಈ ಬಾರಿ ಮೊದಲ ಟ್ರೋಫಿಯ ನಿರೀಕ್ಷೆಯಲ್ಲಿ ತಂಡ ಕೆಲವು ವಿಶೇಷ ತಂತ್ರಗಳನ್ನು ಅನುಸರಿಸಲಿದೆ. ಬ್ಯಾಟಿಂಗ್​ನಲ್ಲಿ ಬಲಿಷ್ಠವಾಗಿ ಕಾಣುವ ತಂಡಕ್ಕೆ ಪ್ರತಿ ಬಾರಿ ಬೌಲಿಂಗ್​ನಲ್ಲಿನ ನ್ಯೂನತೆಯಿಂದಾಗಿ ಉತ್ತಮ ಪ್ರದರ್ಶನ ನೀಡಲು ಸಾಧ್ಯಾವಾಗುತ್ತಿಲ್ಲ. ಈ ಬಾರಿ ಮಿನಿ ಹರಾಜಿಗೂ (IPL Mini Auction) ಮುನ್ನ ತಂಡ ಐವರು ಆಟಗಾರರನ್ನು ಮಾತ್ರ ಬಿಡುಗಡೆ ಮಾಡಿದೆ. ಸದ್ಯ ತಂಡಕ್ಕೆ 9 ಆಟಗಾರರ ಅಗತ್ಯವಿದ್ದು, ಇದರಲ್ಲಿ 7 ಭಾರತೀಯ ಮತ್ತು 2 ವಿದೇಶಿ ಆಟಗಾರರ ಜಾಗಗಳು ಖಾಲಿ ಉಳಿದಿವೆ. ಹೀಗಾಗಿ ಮಿನಿ ಹರಾಜಿನಲ್ಲಿ ಫ್ರಾಂಚೈಸಿ ಈ ಆಟಗಾರರ ಖರೀದಿ ಮೇಲೆ ಕಣ್ಣಿಟ್ಟಿದೆ.

ಇದು ಪ್ರಸ್ತುತ ತಂಡ

ಫಾಫ್ ಡು ಪ್ಲೆಸಿಸ್ (ನಾಯಕ), ಶಾಬಾಜ್ ಅಹ್ಮದ್, ಫಿನ್ ಅಲೆನ್, ಆಕಾಶ್ ದೀಪ್, ವನಿಂದು ಹಸರಂಗ, ಜೋಶ್ ಹ್ಯಾಜಲ್‌ವುಡ್, ದಿನೇಶ್ ಕಾರ್ತಿಕ್, ಸಿದ್ಧಾರ್ಥ್ ಕೌಲ್, ವಿರಾಟ್ ಕೊಹ್ಲಿ, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಹರ್ಷಲ್ ಪಟೇಲ್, ರಜತ್ ಪಾಟಿದಾರ್, ಸುಯಶ್ ಪ್ರಭುದೇಸಾಯಿ, ಅನುಜ್ ಶರ್ಮ, ಮೊಹಮ್ಮದ್ ಸಿರಾಜ್, ಡೇವಿಡ್ ವಿಲ್ಲಿ.

AB de Villiers: ಆರ್​ಸಿಬಿಗೆ ಡಿವಿಲಿಯರ್ಸ್ ಎಂಟ್ರಿ ಖಚಿತ; ಅಧಿಕೃತ ಹೇಳಿಕೆ ನೀಡಿದ ಫ್ರಾಂಚೈಸಿ..!

ತಂಡದಿಂದ ಬಿಡುಗಡೆಯಾದ ಆಟಗಾರರು

ಜೇಸನ್ ಬೆಹ್ರೆನ್‌ಡಾರ್ಫ್, ಶೆರ್ಫಾನ್ ರುದರ್‌ಫೋರ್ಡ್, ಚಾಮ್ ಮಿಲಿಂದ್, ಅನೇಶ್ವರ್ ಗೌತಮ್, ಲೊವೆನಿತ್ ಸಿಸೋಡಿಯಾ.

ಮಿನಿ ಹರಾಜಿನಲ್ಲಿ ಈ ಆಟಗಾರರೇ ಟಾರ್ಗೆಟ್

ಈ ಸೀಸನ್​ನಲ್ಲಿ ಬೌಲರ್‌ಗಳ ಮೇಲೆ ಹೆಚ್ಚಿನ ಗಮನ ಹರಿಸುವತ್ತ ಆರ್​ಸಿಬಿ ಮುಖ ಮಾಡಿದೆ. ಡಿಸೆಂಬರ್ 23 ರಂದು ನಡೆಯಲಿರುವ ಮಿನಿ ಹರಾಜಿನಲ್ಲಿ ಇಬ್ಬರು ಉತ್ತಮ ಬೌಲರ್​ಗಳನ್ನು ಖರೀದಿಸಲು ಚಿಂತಿಸಿರುವ ಆರ್​ಸಿಬಿ ಬಳಿ 8.75 ಕೋಟಿ ರೂ. ಮಾತ್ರ ಉಳಿದಿದೆ. ಈ ಮೊತ್ತದಲ್ಲಿ ತಂಡವು 9 ಆಟಗಾರರನ್ನು ಖರೀದಿಸಬೇಕಾಗಿದೆ. ಈ ಇಬ್ಬರು ವಿದೇಶಿ ಆಟಗಾರರ ಪೈಕಿ, ಆರ್​ಸಿಬಿ ಮೊದಲು ಆಫ್ರಿಕನ್ ವೇಗದ ಬೌಲರ್ ವೇಯ್ನ್ ಪಾರ್ನೆಲ್ ಅವರನ್ನು ತಮ್ಮ ಪಾಳೆಯಕ್ಕೆ ಸೇರಿಸಿಕೊಳ್ಳಲು ನೋಡಲಿದೆ. ಹರಾಜಿನಲ್ಲಿ ಪಾರ್ನೆಲ್ ತಮ್ಮ ಮೂಲ ಬೆಲೆಯನ್ನು 75 ಲಕ್ಷ ರೂ. ಗೆ ಇರಿಸಿದ್ದಾರೆ. ಇವರಲ್ಲದೆ, ತಂಡದಲ್ಲಿ ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ ಅವರನ್ನು ಆಯ್ಕೆಯಾಗಿ ನೋಡಲು ತಂಡವು ಪ್ರಯತ್ನಿಸಲಿದೆ. 2 ಕೋಟಿ ಮೂಲ ಬೆಲೆ ಹೊಂದಿರುವ ಆದಿಲ್ ರಶೀದ್ ಟಿ20 ವಿಶ್ವಕಪ್‌ನಲ್ಲಿ ಅದ್ಭುತ ಬೌಲಿಂಗ್ ಮಾಡಿದ್ದರು.

ಬಲಿಷ್ಠ ತಂಡ

ಕುತೂಹಲಕಾರಿಯಾಗಿ, ತಂಡವು ಈಗಾಗಲೇ ತುಂಬಾ ಪ್ರಬಲವಾಗಿದೆ. ಮಿನಿ ಹರಾಜಿನಲ್ಲಿ ತಂಡವು ಪ್ರಮುಖ ಆಟಗಾರರನ್ನು ಬಿಡುಗಡೆ ಮಾಡಲಿಲ್ಲ. ಫಾಫ್ ಡು ಪ್ಲೆಸಿಸ್ ಮತ್ತು ಫಿನ್ ಅಲೆನ್ ಆರಂಭಿಕ ಜವಾಬ್ದಾರಿಯನ್ನು ನಿಭಾಯಿಸಲು ತಂಡದಲ್ಲಿದ್ದಾರೆ. ಇದಲ್ಲದೇ ಮಧ್ಯಮ ಕ್ರಮಾಂಕದಲ್ಲಿ ಫಿನಿಶರ್‌ಗಳಾಗಿ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಇದ್ದಾರೆ.

ಆದರೆ ತಂಡದ ಬೌಲಿಂಗ್ ವಿಭಾಗ ಯಾವಾಗಲೂ ಸಮಸ್ಯೆಯಾಗಿದೆ. ಜೋಶ್ ಹೇಜಲ್‌ವುಡ್, ಮೊಹಮ್ಮದ್ ಸಿರಾಜ್, ಡೇವಿಡ್ ವಿಲ್ಲಿ ತಂಡದಲ್ಲಿ ವೇಗದ ಬೌಲರ್‌ಗಳಾಗಿದ್ದರೂ ಪಂದ್ಯವನ್ನು ತಮ್ಮತ್ತ ತಿರುಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪಾರ್ನೆಲ್ ಎಂಟ್ರಿ ತಂಡಕ್ಕೆ ಬಲ ನೀಡಬಲ್ಲರು. ಅದೇ ಸಮಯದಲ್ಲಿ ಸ್ಪಿನ್ನರ್‌ಗಳ ಪೈಕಿ ವನಿಂದು ಹಸರಂಗ ಅವರಂತಹ ಸ್ಟಾರ್ ಬೌಲರ್ ಈಗಾಗಲೇ ತಂಡದಲ್ಲಿದ್ದಾರೆ. ಇಂತಹ ಸಂದರ್ಭಗಳಲ್ಲಿ ಆದಿಲ್ ರಶೀದ್ ತಂಡದ ಸ್ಪಿನ್ ವಿಭಾಗದಲ್ಲಿ ಮತ್ತಷ್ಟು ಬಲ ಒದಗಿಸಲಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ