ದೇಶದ ಗಡಿಯಲ್ಲಿರುವ ಪ್ರತಿ ಗ್ರಾಮವೂ ಭಾರತದ ಮೊದಲ ಗ್ರಾಮ; ಉತ್ತರಾಖಂಡದ ಮಾಣದಲ್ಲಿ ಪ್ರಧಾನಿ ಮೋದಿ ಭಾಷಣ

| Updated By: ಸುಷ್ಮಾ ಚಕ್ರೆ

Updated on: Oct 21, 2022 | 3:04 PM

ಮಾಣ ಗ್ರಾಮವನ್ನು ಭಾರತದ ಕೊನೆಯ ಗ್ರಾಮವೆಂದು ಪರಿಗಣಿಸಲಾಗಿದೆ. ಆದರೆ ಇನ್ನು ಮುಂದೆ ಗಡಿ ಭಾಗದಲ್ಲಿರುವ ಪ್ರತಿಯೊಂದು ಗ್ರಾಮವನ್ನು ಭಾರತದ ಮೊದಲ ಗ್ರಾಮ ಎಂದು ಪರಿಗಣಿಸಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ದೇಶದ ಗಡಿಯಲ್ಲಿರುವ ಪ್ರತಿ ಗ್ರಾಮವೂ ಭಾರತದ ಮೊದಲ ಗ್ರಾಮ; ಉತ್ತರಾಖಂಡದ ಮಾಣದಲ್ಲಿ ಪ್ರಧಾನಿ ಮೋದಿ ಭಾಷಣ
ಉತ್ತರಾಖಂಡದ ಮಾಣ ಗ್ರಾಮದಲ್ಲಿ ಪ್ರಧಾನಿ ಮೋದಿ ಭಾಷಣ
Follow us on

ಬದರಿನಾಥ: ಉತ್ತರಾಖಂಡದ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ಮುಂಜಾನೆ ಕೇದಾರನಾಥ ದೇವಸ್ಥಾನದಲ್ಲಿ (Kedarnath Temple) ಪೂಜೆ ಸಲ್ಲಿಸಿದ್ದಾರೆ. ಬದರಿನಾಥದಲ್ಲಿರುವ (Badrinath Temple) ಮೋದಿ ಪೂಜೆಯ ಬಳಿಕ ಮಾಣ ಗ್ರಾಮದಲ್ಲಿ ರಸ್ತೆ ಮತ್ತು ರೋಪ್ ವೇ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮಾಣ ಗ್ರಾಮವನ್ನು ಭಾರತದ ಕೊನೆಯ ಗ್ರಾಮವೆಂದು ಪರಿಗಣಿಸಲಾಗಿದೆ. ಆದರೆ ಇನ್ನು ಮುಂದೆ ಗಡಿ ಭಾಗದಲ್ಲಿರುವ ಪ್ರತಿಯೊಂದು ಗ್ರಾಮವನ್ನು ಭಾರತದ ಮೊದಲ ಗ್ರಾಮ ಎಂದು ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ.

ಕೇದಾರನಾಥಕ್ಕೆ ಸಂಪರ್ಕಿಸುವ 9.7 ಕಿಮೀ ಉದ್ದದ ಗೌರಿಕುಂಡ್ ರೋಪ್​ವೇಗೆ ಶಂಕುಸ್ಥಾಪನೆ ನೆರವೇರಿದೆ. 2 ಸ್ಥಳಗಳ ನಡುವಿನ ಪ್ರಯಾಣದ ಸಮಯವನ್ನು ಪ್ರಸ್ತುತ 6ರಿಂದ 7 ಗಂಟೆಗಳ ಸಮಯವನ್ನು 30 ನಿಮಿಷಗಳಿಗೆ ಕಡಿಮೆ ಮಾಡುತ್ತದೆ. ಹೇಮಕುಂಡ್ ರೋಪ್‌ವೇ ಗೋವಿಂದಘಾಟ್‌ನಿಂದ ಹೇಮಕುಂಡ್ ಸಾಹಿಬ್‌ಗೆ ಸಂಪರ್ಕ ಕಲ್ಪಿಸುತ್ತದೆ. ಇದು ಸುಮಾರು 12.4 ಕಿಮೀ ಉದ್ದವಿದ್ದು, ಪ್ರಯಾಣದ ಸಮಯವನ್ನು ಒಂದು ದಿನಕ್ಕಿಂತ ಹೆಚ್ಚು ಸಮಯದಿಂದ ಕೇವಲ 45 ನಿಮಿಷಗಳಿಗೆ ಕಡಿಮೆ ಮಾಡುತ್ತದೆ. ಈ ರೋಪ್‌ವೇ ಘಂಗಾರಿಯಾವನ್ನು ಸಹ ಸಂಪರ್ಕಿಸುತ್ತದೆ. ಇದು ವ್ಯಾಲಿ ಆಫ್ ಫ್ಲವರ್ಸ್ ನ್ಯಾಷನಲ್ ಪಾರ್ಕ್‌ಗೆ ಗೇಟ್‌ವೇ ಆಗಿದೆ.

ರೋಪ್‌ವೇ ಯೋಜನೆಗಳ ನಿರ್ಮಾಣ (ಗೌರಿಕುಂಡ್‌ನಿಂದ ಕೇದಾರನಾಥ ಮತ್ತು ಗೋವಿಂದ್‌ಘಾಟ್‌ನಿಂದ ಹೇಮಕುಂಡ್ ಸಾಹಿಬ್) ಸಂಪರ್ಕವನ್ನು ಒದಗಿಸಲು ಮಾತ್ರವಲ್ಲ, ಇದು ಉತ್ತರಾಖಂಡ ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿದೆ. ದೇಶದ ಎಲ್ಲಾ ಪ್ರವಾಸಿಗರು ತಮ್ಮ ಪ್ರಯಾಣದ ಬಜೆಟ್‌ನ ಕನಿಷ್ಠ 5% ಸ್ಥಳೀಯ ಉತ್ಪನ್ನಗಳನ್ನು ಖರೀದಿಸಲು ಖರ್ಚು ಮಾಡುವಂತೆ ನಾನು ಮನವಿ ಮಾಡುತ್ತೇನೆ ಎಂದು ಉತ್ತರಾಖಂಡದ ಮಾಣ ಗ್ರಾಮದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: PM Modi in Kedarnath: ವಿಶೇಷ ಉಡುಗೆ ತೊಟ್ಟು ಕೇದಾರನಾಥದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ

ನರೇಂದ್ರ ಮೋದಿ ಅವರು ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳಿಗೆ 3,400 ಕೋಟಿ ರೂಪಾಯಿಗಳ ರಸ್ತೆ ಮತ್ತು ರೋಪ್‌ವೇ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ್ದಾರೆ. ಈ ವೇಳೆ ಮಾಣ ಗ್ರಾಮದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಅವರು, ಮಾಣಾದಿಂದ ಮಾಣಾ ಪಾಸ್‌ವರೆಗೆ ನಿರ್ಮಿಸುವ ರಸ್ತೆಯು ಪ್ರವಾಸೋದ್ಯಮವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಗಡಿ ಗ್ರಾಮವಾದ ಮನಗೆ ಭೇಟಿ ನೀಡದೆ ಯಾವುದೇ ಪ್ರವಾಸಿಗರು ಇಲ್ಲಿಂದ ಹಿಂತಿರುಗುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ ಎಂದಿದ್ದಾರೆ.

ಭಾರತಮಾಲಾ ಮತ್ತು ಸಾಗರಮಾಲಾ ಸಂಪರ್ಕ ಯೋಜನೆಗಳಂತೆ ಪರ್ವತಮಾಲಾಗೆ ಕೆಲಸ ನಡೆಯುತ್ತಿದೆ. ಇದರ ಅಡಿಯಲ್ಲಿ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಾದ್ಯಂತ ರೋಪ್‌ವೇ ಯೋಜನೆಗಳ ದೊಡ್ಡ ಜಾಲವನ್ನು ನಿರ್ಮಿಸಲಾಗುತ್ತಿದೆ. ಮಾಣ ಗ್ರಾಮಕ್ಕೆ ಕೂಡ ಡಿಜಿಟಲ್ ಸಂಪರ್ಕ ತಲುಪಿದೆ. ಇಲ್ಲಿಯ ಅಂಗಡಿಯವರು ಕ್ಯೂಆರ್ ಕೋಡ್‌ಗಳು ಮತ್ತು ಇತರ ಮೋಡ್‌ಗಳನ್ನು ಬಳಸಿ ಡಿಜಿಟಲ್ ಪಾವತಿಗಳನ್ನು ಸ್ವೀಕರಿಸುತ್ತಿದ್ದಾರೆ. ಇದು ನಮ್ಮ ದೇಶದ ಶಕ್ತಿಯಾಗಿದೆ. ನನಗೆ ಈ ಬಗ್ಗೆ ಹೆಮ್ಮೆಯಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: Mission LiFe ಹವಾಮಾನ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ: ನರೇಂದ್ರ ಮೋದಿ

ಪರ್ವತ ಪ್ರದೇಶಗಳಲ್ಲಿ ಸಂಪರ್ಕವು ಒಂದು ದೊಡ್ಡ ಸವಾಲಾಗಿದೆ. ಅಂತಹ ಪ್ರದೇಶಗಳಿಗೆ ಸಂಪರ್ಕವನ್ನು ಒದಗಿಸಲು ನಮ್ಮ ಸರ್ಕಾರವು ಕೆಲಸ ಮಾಡುತ್ತಿದೆ. ದೆಹಲಿ ಮತ್ತು ಉತ್ತರ ಪ್ರದೇಶದಿಂದ ಉತ್ತರಾಖಂಡ ರಾಜ್ಯವನ್ನು ಸಂಪರ್ಕಿಸಲು 4 ಪಥದ ಎಕ್ಸ್‌ಪ್ರೆಸ್‌ವೇಗಳನ್ನು ನಿರ್ಮಿಸಲಾಗುತ್ತಿದೆ. ನಮ್ಮ ಸರ್ಕಾರವು ಪರ್ವತ ಪ್ರದೇಶಗಳಲ್ಲಿ ವಸ್ತುಗಳನ್ನು ತಲುಪಿಸಲು ಡ್ರೋನ್‌ಗಳ ಬಳಕೆಗೆ ಕೆಲಸ ಮಾಡುತ್ತಿದೆ ಎಂದು ಉತ್ತರಾಖಂಡದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:04 pm, Fri, 21 October 22